ಏಷ್ಯಾ ಕಪ್ ಹಾಕಿ: 20 ಆಟಗಾರರ ಭಾರತ ತಂಡ ಪ್ರಕಟ; ರೂಪಿಂದರ್ ಪಾಲ್ ಸಿಂಗ್‌ಗೆ ನಾಯಕತ್ವ

ಇಂಡೋನೇಶ್ಯಾದ ಜಕಾರ್ತಾದಲ್ಲಿ ನಡೆಯಲಿರುವ ಏಷ್ಯಾಕಪ್ ಹಾಕಿ ಟೂರ್ನಮೆಂಟ್‌ನಲ್ಲಿ ಭಾಗಿಯಾಗಲಿರುವ ಭಾರತ ತಂಡದ 20 ಆಟಗಾರರ ಬಳಗವನ್ನು ಇಂದು ಪ್ರಕಟಿಸಲಾಗಿದೆ. ಈ ಪ್ರತಿಷ್ಟಿತ ಟೂರ್ನಿಯಲ್ಲಿ ಭಾರತ ತಂಡವನ್ನು ರೂಪಿಂದರ್ ಪಾಲ್ ಸಿಂಗ್ ಮುನ್ನಡೆಸಲಿದ್ದಾರೆ. ಈ ಕಳೆದ ವರ್ಷ ನಡೆದ ಒಲಿಂಪಿಕ್ಸ್‌ನ ಬಳಿಕ ರೂಪಿದರ್ ಸಿಂಗ್ ನಿವೃತ್ತಿಯನ್ನು ಪಡೆದುಕೊಂಡಿದ್ದರು. ಆದರೆ ಕೆಲ ಸಮಯದ ಹಿಂದೆ ನಿವೃತ್ತಿಯನ್ನು ವಾಪಾಸ್ ಪಡೆದುಕೊಂಡಿದ್ದರು.
ಏಷ್ಯಾ ಕಪ್ ಹಾಕಿ ಟೂರ್ನಿ ಮೇ 23ಕ್ಕೆ ಆರಂಭವಾಗಲಿದ್ದು ಜೂನ್ 1ರಂದು ಅಂತ್ಯವಾಗಲಿದೆ. ಅನುಭವಿ ಆಟಗಾರರಾದ ಮನ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ ಮತ್ತು ಪಿಆರ್ ಶ್ರೀಜಿತ್ ಈ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಹೊಸ ಆಟಗಾರರು ತುಂಬಿರುವ ಈ ತಂಡದಲ್ಲಿ ಬಿರೇಂದರ್ ಲಕ್ರಾ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಈ ತಂಡದಲ್ಲಿ ಹತ್ತು ಆಟಗಾರರು ಭಾರತ ಹಿರಿಯರ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಇವರಲ್ಲಿ ಜೂನಿಯರ್ ವಿಶ್ವಕಪ್‌ನಲ್ಲಿ ಪ್ರತಿನಿಧಿಸಿದ್ದ ಯಶ್‌ದೀಪ್ ಸಿವಾಚ್, ಅಭಿಶೇಕ್ ಲಕ್ರಾ, ಮಂಜೀತ್, ವಿಷ್ಣುಕಾಂತ್ ಸಿಂಗ್ ಮತ್ತು ಉತ್ತಮ್ ಸಿಂಗ್ ಸೇರಿದ್ದಾರೆ. ಅಲ್ಲದೆ ಮರೀಸ್ವರನ್ ಸಕ್ತಿವೇಲ್, ಶೇಷೇ ಗೌಡ ಬಿಎಂ, ಪವನ್ ರಾಜ್‌ಭಾರ್, ಆಭರಣ್ ಸುದೇವ್ ಮತ್ತು ಎಸ್ ಕಾರ್ತಿ ಮೊದಲ ಬಾರಿಗೆ ತಂಡದಲ್ಲಿ ಸ್ಥಾಮ ಗಿಟ್ಟಿಸಿಕೊಂಡ ಆಟಗಾರರಾಗಿದ್ದಾರೆ.
ಇಬ್ಬರು ಗೋಲ್‌ಕೀಪರ್‌ಗಳಾಗಿ ಪಂಕಜ್ ಕುಮಾರ್ ರಾಜಕ್ ಹಾಗೂ ಸೂರಜ್ ಕರ್ಕೇರಾ ಆಯ್ಕೆಯಾಗಿದ್ದಾರೆ. ರಕ್ಷಣಾ ವಿಭಾಗದಲ್ಲಿ ರೂಪಿಂದರ್, ಯಶದೀಪ್ ಸಿವಾಚ್, ಅಭಿಷೇಕ್ ಲಾಕ್ರಾ, ಲಾಕ್ರಾ, ಮಂಜೀತ್, ದಿಪ್ಸನ್ ಟಿರ್ಕಿ, ವಿಷ್ಣುಕಾಂತ್ ಸಿಂಗ್, ರಾಜ್ ಕುಮಾರ್ ಪಾಲ್, ಮರೀಶ್ವರನ್ ಶಕ್ತಿವೇಲ್, ಶೇಷೇಗೌಡ ಬಿಎಂ, ಸಿಮ್ರಂಜೀತ್ ಸಿಂಗ್ ಇದ್ದಾರೆ. ಫಾರ್‌ವರ್ಡ್ ಆಟಗಾರರಾಗಿ ಪವನ್ ರಾಜ್‌ಭರ್, ಅಭರಣ ಸುದೇವ್, ಎಸ್‌ವಿ ಸುನೀಲ್, ಉತ್ತಮ್ ಸಿಂಗ್ ಮತ್ತು ಎಸ್.ಕಾರ್ತಿ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ರೂಪಿಂದರ್ ಪಾಲ್ ಹಾಗೂ ಬಿರೇಂದರ್ ಲಕ್ರಾ ಇಬ್ಬರು ಕೂಡ ಕಳೆದ ಒಲಿಂಪಿಕ್ಸ್‌ನ ನಂತರ ನಿವೃತ್ತಿಗೆ ನಿರ್ಧರಿಸಿದ್ದರು. ಆದರೆ ನಂತರ ಈ ಟೂರ್ನಿಗೆ ಲಭ್ಯತವಾಗುವುದಾಗಿ ತಿಳಿಸಿದ್ದಾರೆ. ಭಾರತೀಯ ತಂಡಕ್ಕೆ ಕೋಚ್ ಆಗಿ ಆಯ್ಕೆಯಾಗಿರುವ ಮಾಜಿ ನಾಯಕ ಹಾಗೂ ಎರಡು ಬಾರಿಯ ಒಲಿಂಪಿಯನ್ ಸರ್ದಾರ್ ಸಿಂಗ್‌ಗೆ ಇದು ಮೊದಲ ಹೊಣೆಗಾರಿಕೆಯಾಗಿದೆ.
ಏಷ್ಯಾಕಪ್ ಹಾಕಿ ಟೂರ್ನಮೆಂಟ್ ಎಂಟು ತಂಡಗಳ ಟೂರ್ನಿಯಾಗಿದ್ದು ಎರಡು ಗುಂಪುಗಳಾಗಿ ಕಾದಾಟಲಿದೆ. ಪೂಲ್ 'ಎ'ಯಲ್ಲಿ ಭಾರತದ ಜೊತೆಗೆ ಮಲೇಶಿಯಾ, ಕೊರಿಯಾ, ಒಮಾನ್ ಮತ್ತು ಬಾಂಗ್ಲಾದೇಶ ತಂಡಗಳಿದೆ. ಪೂಲ್ 'ಬಿ'ಯಲ್ಲಿ ಮಲೇಶಿಯಾ, ಕೊರಿಯಾ, ಒಮಾನ್ ಹಾಗೂ ಬಾಂಗ್ಲಾದೇಶ ತಂಡಗಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications