36 ವರ್ಷದ ಚಿನ್ನದ ಬರ ಹಾಕಿ ತಂಡದಿಂದ ನೀಗುವುದೆ?
ರಿಯೋ ಡಿ ಜನೈರೊ ಅಗಸ್ಟ್ 07: ಭಾರತ ಪುರುಷರ ಹಾಕಿ ತಂಡ ರಿಯೋ ಒಲಿಂಪಿಕ್ಸ್ ನಲ್ಲಿ ಶುಭಾರಂಭ ಮಾಡಿದೆ. 3-2 ಅಂತರದಿಂದ ಐರ್ಲೆಂಡ್ ತಂಡವನ್ನು ಮಣಿಸಿ ಮುಂದಿನ ಹಂತಕ್ಕೆ ತೇರ್ಗಡೆಯಾಗಿದೆ.
ಒಲಿಂಪಿಕ್ ಹಾಕಿ ಸೆಂಟರ್ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ರೂಪಿಂದರ್ ಪಾಲ್ ಸಿಂಗ್ (27, 49ನೇ ನಿಮಿಷ) ಅವಳಿ ಗೋಲು ಹಾಗೂ ಕನ್ನಡಿಗ ವಿಆರ್ ರಘುನಾಥ್ (15) ಸಿಡಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ತಂಡ 3-2 ಅಂತರದಿಂದ ಐರ್ಲೆಂಡ್ ತಂಡವನ್ನು ಮಣಿಸಿತು. ಭಾರತಕ್ಕೆ ಲಭಿಸಿದ 7 ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಮೂರರಲ್ಲಿ ಯಶಸ್ಸು ಸಿಕ್ಕಿತು.[ಮರಕಾನ ಸ್ಟೇಡಿಯಂನಲ್ಲಿ ಮನಸೆಳೆದ ಭಾರತದ ಕ್ರೀಡಾಪಡೆ]
ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

2000ದ ಸಿಡ್ನಿ ಒಲಿಂಪಿಕ್ಸ್ ಬಳಿಕ ಗೇಮ್ಸ್‌ನ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದ ಸಾಧನೆ ಮಾಡಿತು. ಈ ಮೂಲಕ ಭಾರತ ಹಾಕಿ ತಂಡ 12 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಮೊದಲ ಪಂದ್ಯ ಗೆದ್ದ ಸಾಧನೆ ಮಾಡಿದಂತೆ ಆಗಿದೆ.
2004ರ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕೊನೆಯದಾಗಿ ಭಾರತ ಹಾಕಿ ತಂಡ ಶುಭಾರಂಭ ಕಂಡಿತ್ತು. 2008ರಲ್ಲಿ ಅರ್ಹತೆಯನ್ನೇ ಪಡೆದಿರದಿದ್ದರೆ, 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಲೀಗ್ ಹಂತದಲ್ಲಿ ಆಡಿದ ಎಲ್ಲ 5 ಪಂದ್ಯಗಳಲ್ಲೂ ಭಾರತ ಸೋಲು ಕಂಡಿತ್ತು.

- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications