Azlan Shah Cup: ಬಲಿಷ್ಠ ಜಪಾನ್ ಮಣಿಸಿದ ಭಾರತದ ಹಾಕಿ ಪುರುಷರು

ಐಪೋ, ಮಾರ್ಚ್ 23: ಮಲೇಷ್ಯಾದ ಐಪೋನಲ್ಲಿ ನಡೆಯುತ್ತಿರುವ 2019ರ ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತದ ಪುರುಷರ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಬಂಗಾರ ಗೆದ್ದಿದ್ದ ಬಲಿಷ್ಠ ಜಪಾನ್ ತಂಡವನ್ನು 2-0 ಅಂತರದಿಂದ ಸೋಲಿಸಿ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ.
ಶನಿವಾರ (ಮಾರ್ಚ್ 23) ನಡೆದ ಉದ್ಘಾಟನಾ ಪಂದ್ಯದಲ್ಲಿ ಭಾರತದ ಪುರುಷರ ತಂಡ ಶುಭಾರಂಭ ಕಂಡಿತು. ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡು ತಂಡದ ಪರ ವರುಣ್ ಕುಮಾರ್ 24ನೇ ನಿಮಿಷದಲ್ಲಿ ಮೊದಲ ಗೋಲ್ ಬಾರಿಸಿ ಭಾರತಕ್ಕೆ 1-0ಯ ಮುನ್ನಡೆ ಕೊಟ್ಟರು.
ಅನಂತರ ದ್ವಿತೀಯಾರ್ಧದಲ್ಲಿ ಅಂದರೆ 55ನೇ ನಿಮಿಷದಲ್ಲಿ ಸಿಮ್ರನ್ ಜೀತ್ ಸಿಂಗ್ ದ್ವಿತೀಯ ಗೋಲ್ ಬಾರಿಸಿ ತಂಡದ ಗೆಲುವಿಗೆ ಕಾರಣವಾದರು. ಈ ಪಂದ್ಯದ ಬಳಿಕ ಭಾರತದ ಖಾತೆಗೆ 3 ಅಂಕಗಳು ಸೇರಿವೆ. ಈ ಟೂರ್ನಿಯಲ್ಲಿ ಭಾರತ ಒಟ್ಟು 5 ಸಾರಿ ಚಾಂಪಿಯನ್ ಅನ್ನಿಸಿಕೊಂಡಿದೆ.
Story first published: Saturday, March 23, 2019, 16:23 [IST]
Other articles published on Mar 23, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications