Hockey Asian Champions Trophy: ಜಪಾನ್ ಮಣಿಸಿದ ಭಾರತ ಮಹಿಳಾ ತಂಡ ಫೈನಲ್‌ಗೆ
ಮಹಿಳೆಯರ ಏಷ್ಯನ್ ಚಾಂಪಿಯನ್ ಶಿಪ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಅಮೋಘ ಪ್ರದರ್ಶನ ನೀಡಿ ಫೈನಲ್‌ಗೆ ಅರ್ಹತೆ ಪಡೆದಿದೆ. ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 2-0 ಗೋಲುಗಳ ಅಂತರದಿಂದ ಜಪಾನ್ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದೆ. ಉಪಾಂತ್ಯ ಪಂದ್ಯದಲ್ಲಿ ಭಾರತದ ಪರ ಭರವಸೆಯ ಆಟಗಾರ್ತಿ ನವನೀತ್ ಕೌರ್ ಹಾಗೂ ಲಾಲ್ರೆಮ್ಸಿಯಾಮಿ ಕೊನೆಯ ಅವಧಿಯಲ್ಲಿ ಗೋಲು ಬಾರಿಸಿ ಮಿಂಚಿದರು. ಈ ಮೂಲಕ ಭಾರತ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಚೀನಾ 3-1 ಗೋಲುಗಳಿಂದ ಮಲೇಷ್ಯಾ ತಂಡವನ್ನು ಮಣಿಸಿ, ಫೈನಲ್‌ಗೆ ಪ್ರವೇಶ ಪಡೆದಿದೆ. ಫೈನಲ್ ಪಂದ್ಯ ಬುಧವಾರ ನಡೆಯಲಿದ್ದು, ಪ್ರಶಸ್ತಿಗಾಗಿ ಭಾರತ ಹಾಗೂ ಚೀನಾ ತಂಡಗಳು ಕಾದಾಟ ನಡೆಸಲಿವೆ.

ಭಾರತದ ಅಜೇಯ ಓಟ
ಟೂರ್ನಿಯಲ್ಲಿ ಅಜೇಯ ಓಟವನ್ನು ಟೀಮ್ ಇಂಡಿಯಾ ಮುಂದುವರೆಸಿದೆ. ಮೊದಲು ಮಲೇಷ್ಯಾ ತಂಡವನ್ನು 4-0 ಅಂತರದಿಂದ, ನಂತರ ದಕ್ಷಿಣ ಕೊರಿಯಾವನ್ನು 3-2 ರಿಂದ, ಥೈಲೆಂಡ್ ತಂಡವನ್ನು 13-0 ರಿಂದ, ಚೀನಾ ತಂಡವನ್ನು 3-0 ರಿಂದ ಸೋಲಿಸಿದ್ದ ಭಾರತ, ಜಪಾನ್ ವಿರುದ್ಧ ಲೀಗ್ ಹಂತದಲ್ಲಿ 3-0 ಗೆಲುವು ದಾಖಲಿಸಿತ್ತು.
ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ಮನಮೋಹಕ ಆಟದ ಪ್ರದರ್ಶನ ನೀಡಿದವು. ಈ ವೇಳೆ ಟೀಮ್ ಇಂಡಿಯಾದ ರಕ್ಷಣಾ ಆಟವು ಸೊಗಸಾಗಿತ್ತು. ಪರಿಣಾಮ ಎದುರಾಳಿ ಜಪಾನ್ ತಂಡ ಮೊದಲಾವಧಿಯಲ್ಲಿ ಯಾವುದೇ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಜಪಾನ್ ಗೋಲ್ ಕೀಪರ್ ಸಹ ಸ್ಥಿರ ಪ್ರದರ್ಶನ ನೀಡಿದ್ದರಿಂದ ಮೊದಲಾವಧಿ ಗೋಲ್‌ಗಳ ರಹಿತವಾಗಿತ್ತು.

ಎರಡನೇ ಹಾಗೂ ಮೂರನೇ ಅವಧಿಯ ಆಟದಲ್ಲಿ ಸ್ಥಿರ ಪ್ರದರ್ಶನ ನೀಡಿದ ಉಭಯ ತಂಡಗಳು ಅಂಕಗಳನ್ನು ಕಲೆ ಹಾಕುವಲ್ಲಿ ಹಿಂದೆ ಬಿದ್ದವು. ಪರಿಣಾಮ ಮೂರನೇ ಅವಧಿಯ ಆಟದ ಎಲ್ಲರ ಚಿತ್ತ ಕದ್ದಿತ್ತು. ಈ ಅವಧಿಯ ಆಟದಲ್ಲಿ ಭಾರತದ ತಂಡ ಯೋಜನಾ ಬದ್ಧ ಆಟವನ್ನು ಆಡಿತು. ಈ ವೇಳೆ ಭಾರತ ಮಹಿಳಾ ತಂಡ ಚೆಂಡಿನ ಮೇಲೆ ಹಿಡಿತ ಸಾಧಿಸಿತು. ಅಲ್ಲದೆ ಗೋಲು ಪೆಟ್ಟಿಗೆಯತ್ತ ಸತತ ನುಗ್ಗುವ ಪ್ರಯತ್ನ ಮಾಡಿತು. ಪರಿಣಾಮ ಪಂದ್ಯದ 48ನೇ ನಿಮಿಷದಲ್ಲಿ ನವನೀತ್ ಕೌರ್ ಗೋಲು ಬಾರಿಸಿ ಮಿಂಚಿದರು.
ಕೊನೆಯ ಅವಧಿಯ ಆಟ ಮುಗಿಯವು ನಾಲ್ಕು ನಿಮಿಷದ ಮುಂಚೆ ಟೀಮ್ ಇಂಡಿಯಾ ಮತ್ತೊಮ್ಮೆ ಮೇಲುಗೈ ಸಾಧಿಸಿತು. ಈ ಮೂಲಕ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ ತಂಡವನ್ನು ಮಣಿಸಿ ಮುನ್ನಡೆ ಸಾಧಿಸಿತು.
ಸೆಮಿಫೈನಲ್‌ನಲ್ಲಿ ಸೋತಿರುವ ಜಪಾನ್ ಹಾಗೂ ಮಲೇಷ್ಯಾ ತಂಡಗಳು ಬುಧವಾರ ಮೂರನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications