ಫುಟ್ಬಾಲ್ ನಂತರ ಹಾಕಿ ತಂಡಕ್ಕೆ ಧೋನಿ ಒಡೆಯ
ರಾಂಚಿ, ಅ.26: ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಫುಟ್ಬಾಲ್ ಲೀಗ್ ನಲ್ಲಿ ಚೆನ್ನೈ ತಂಡವನ್ನು ಖರೀದಿಸಿದ ಬೆನ್ನಲ್ಲೇ ಮುಂಬರುವ ಹಾಕಿ ಲೀಗ್ ಗಾಗಿ ರಾಂಚಿ ತಂಡದ ಬೆನ್ನೆಲುಬಾಗಿ ನಿಂತಿದ್ದಾರೆ. ಸಹಾರಾ ಇಂಡಿಯಾ ಒಡೆತನದ ತಂಡಕ್ಕೆ ಹಣ ಹೂಡಿರುವ ಧೋನಿ ತಮ್ಮ ತಂಡಕ್ಕೆ 'ರಾಂಚಿ ರೇಸ್' ಎಂದು ಹೆಸರಿಟ್ಟಿದ್ದಾರೆ.
ಹಾಕಿ ಇಂಡಿಯಾ ಲೀಗ್(HIL) ನ ಹೊಸ ತಂಡದ ಹೆಸರು ವಿವರಗಳು, ಹೊಸ ಜರ್ಸಿ ಹಾಗೂ ಲಾಂಛನವನ್ನು ಶನಿವಾರ ಬಿಡುಗಡೆ ಮಾಡಲಾಯಿತು. ಧೋನಿ ಅವರು ಕ್ರಿಕೆಟ್ ಅಲ್ಲದೆ ಮೋಟರ್ ಸ್ಪೋರ್ಟ್ಸ್ , ಜಿಮ್, ಫುಟ್ಬಾಲ್ ನಲ್ಲೂ ಹಣ ಹೂಡಿಕೆ ಮಾಡಿದ್ದಾರೆ. ತಂಡದ ಮಾಲೀಕತ್ವದ ಜೊತೆಗೆ ವಿವಿಧ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಹೊಣೆ ಹೊತ್ತಿದ್ದಾರೆ. [ಏಷ್ಯನ್ ಗೇಮ್ಸ್: ಚಿನ್ನ ಗೆದ್ದ ಭಾರತ]

ಹಾಕಿ ಇಂಡಿಯಾ ಲೀಗ್ ಮೊದಲ ವರ್ಷದಲ್ಲಿ ರಾಂಚಿ ರೈನೋಸ್ ಹೆಸರಿನಲ್ಲಿದ್ದ ತಂಡ ಈಗ ಅಸ್ತಿತ್ವದಲ್ಲಿಲ್ಲ. ಪಟೇಲ್ ಪಿಎಸ್ ಗ್ರೂಪ್ ಹಾಗೂ ಯುನಿ ಎಕ್ಸೆಲ್ ಸಮೂಹ ಒಡೆತನದ ತಂಡ ಹಾಗೂ ಹಾಕಿ ಇಂಡಿಯಾ ನಡುವಿನ ತಿಕ್ಕಾಟಕ್ಕೆ ತಂಡವೇ ಬಲಿಯಾಗಿದೆ. ಹೀಗಾಗಿ ಈ ಬಾರಿಯ ಲೀಗ್ ನಲ್ಲಿ ಹೊಸ ತಂಡ ಹೊಸ ಮಾಲೀಕತ್ವದಲ್ಲಿ ರಾಂಚಿಯ ಪ್ರತಿಭಾವಂತರು ಕಣಕ್ಕಿಳಿಯಲಿದ್ದಾರೆ ಅವರ ಬೆನ್ನ ಹಿಂದೆ ಭಾರತೀಯ ಕ್ರಿಕೆಟ್ ದಿಗ್ಗಜ ಧೋನಿ ನಿಂತಿದ್ದಾರೆ. [ಗಂಗೂಲಿ ಜೊತೆ ಧೋನಿ ಚೆಂಡಾಟ]
'ಒಬ್ಬ ಕ್ರಿಕೆಟಿಗನಾಗಿ ಕ್ರಿಕೆಟ್ ಆಡುವುದು ನನ್ನ ಮೊದಲ ಕೆಲಸ. ಆದರೆ ಕ್ರೀಡಾಪಟುವಾಗಿ ರಾಷ್ಟ್ರೀಯ ಕ್ರೀಡೆಯನ್ನು ಪ್ರೋತ್ಸಾಹಿಸುವುದು ನನ್ನ ಜವಾಬ್ದಾರಿ. ಇದು ನನ್ನ ಜೀವನದ ವಿಶೇಷ ದಿನ. ಹಾಕಿ ತಂಡದ ಜತೆ ಕೈಜೋಡಿಸಲು ಬಹಳ ಸಂತೋಷವಾಗಿದೆ' ಎಂದು ಧೋನಿ ಹೊಸ ತಂಡ ಅನಾವರಣಗೊಳಿಸಿ ಹೇಳಿದ್ದಾರೆ.

ಹಾಕಿ ಲೀಗ್ ಮುಂದಿನ ವರ್ಷದ ಜನವರಿ-ಫೆಬ್ರವರಿಯಲ್ಲಿ ನಡೆಯಲಿದೆ. ಭಾರತೀಯ ಹಾಕಿಯನ್ನು ಮೇಲೆತ್ತುವ ಉದ್ದೇಶದಿಂದ ಹಾಕಿ ಇಂಡಿಯಾ ಈ ಕೂಟವನ್ನು ನಡೆಸುತ್ತಿದೆ. ರಾಂಚಿ ರೇಸ್ ತಂಡವನ್ನು ಹೊಂದಿರುವ ಸಹರಾ ಇಂಡಿಯಾ ಲಕ್ನೋ ಮೂಲದ ಉತ್ತರ ಪ್ರದೇಶ್ ವಿಜಾರ್ಡ್ ತಂಡದ ಮಾಲೀಕತ್ವವನ್ನು ಹೊಂದಿದೆ. (ಐಎಎನ್ಎಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications