Asian Hockey Champions Trophy 2024: ಜಪಾನ್ ಮಣಿಸಿದ ಭಾರತ ಅಗ್ರ ಸ್ಥಾನಕ್ಕೆ ಬಡ್ತಿ
ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಜಪಾನ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ 5-1 ಗೋಲುಗಳ ಅಂತರದಿಂದ ಜಪಾನ್ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.
ಭಾರತದ ಪರ ಸುಖಜೀತ್ ಸಿಂಗ್ (2, 60ನೇ ನಿಮಿಷ) ಅಭಿಷೇಕ್ (3ನೇ ನಿಮಿಷ), ಸಂಜಯ್ (17ನೇ ನಿಮಿಷ), ಉತ್ತಮ ಸಿಂಗ್ (54ನೇ ನಿಮಿಷ) ಗೋಲು ಬಾರಿಸಿ ತಂಡದ ಜಯದಲ್ಲಿ ಮಿಂಚಿದ್ದಾರೆ. ಜಪಾನ್ ಪರ ಮೂರನೇ ಅವಧಿಯಲ್ಲಿ ಒಂದು ಗೋಲು ದಾಖಲಾಯಿತು. ಈ ಪಂದ್ಯದ ನಂತರ ಭಾರತ ತಂಡ ಟೂರ್ನಿಯಲ್ಲಿ ಮತ್ತಷ್ಟು ಬಲಿಷ್ಠವಾಗಿ ಕಾಣುತ್ತಿದೆ. ಭಾರತದ ಗೋಲುಗಳ ಸಂಖ್ಯೆಯೂ ಹೆಚ್ಚಿದೆ. ಇದಕ್ಕೂ ಮುನ್ನ ಆತಿಥೇಯ ಚೀನಾ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 3-0 ಅಂತರದಿಂದ ಜಯ ಸಾಧಿಸಿತ್ತು.

ಮೊದಲಾವಧಿಯಲ್ಲಿ ಎರಡು ಗೋಲು
ಮೊದಲಾವಧಿಯಲ್ಲಿ ಭಾರತ ಅಮೋಘ ಆಟದ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಸುಖಜಿತ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಫೀಲ್ಡ್ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದಾದ ಒಂದೇ ನಿಮಿಷದಲ್ಲಿ ಭರವಸೆಯ ಆಟಗಾರ ಅಭಿಷೇಕ್ ಮತ್ತೊಂದು ಅಮೋಘ ಗೋಲು ಬಾರಿಸಿ ಮಿಂಚಿದರು. ಈ ಅವಧಿಯಲ್ಲಿ ಭಾರತ 2-0 ಗೋಲುಗಳಿಂದ ಮುನ್ನಡೆ ಸಾಧಿಸಿತು.
ಡ್ರೆಸ್ಸಿಂಗ್ ರೂಮ್‌ನಲ್ಲಿ ಹಾಕಿಕೊಂಡ ಯೋಜನೆಯಂತೆ ಆಟವಾಡಿದ ಭಾರತ ಎರಡನೇ ಅವಧಿಯ ಎರಡನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ಮಿಂಚಿತು. ಪಂದ್ಯದ 17ನೇ ನಿಮಿಷದಲ್ಲಿ ಸಂಜಯ್ ಭಾರತದ ಪರ ಮೂರನೇ ಗೋಲು ಬಾರಿಸಿ ಟೀಮ್ ಇಂಡಿಯಾವನ್ನು ಉತ್ತಮ ಸ್ಥಿತಿಗೆ ತಂದು ನಿಲ್ಲಿಸಿದರು. ಎರಡನೇ ಕ್ವಾರ್ಟರ್ ಮುಗಿದ ನಂತರ ಟೀಂ ಇಂಡಿಯಾ 3-0 ಮುನ್ನಡೆ ಸಾಧಿಸಿತ್ತು.
ಮೂರನೇ ಅವಧಿಯಲ್ಲಿ ಜಪಾನ್ ಪರ 41ನೇ ನಿಮಿಷದಲ್ಲಿ ಕಜುಮಾಸಾ ಮಾಟ್ಸುಮೊಟೊ ಗೋಲು ಗಳಿಸಿದರು. ಇದು ಜಪಾನ್‌ಗೆ ಮೊದಲ ಗೋಲು.
ಕೊನೆಯ ಅವಧಿಯಲ್ಲೂ ಆರ್ಭಟ
ಕೊನೆಯ ಅವಧಿಗೆ ಅತಿ ಉತ್ಸಹಾದಿಂದ ಕಣಕ್ಕೆ ಇಳಿದ ಭಾರತ ತಂಡ ಉತ್ತಮ ರಕ್ಷಣಾ ಆಟ ಹಾಗೂ ಅಟ್ಯಾಕ್ಕಿಂಗ್ ಆಟವನ್ನು ಆಡಿತು. ಈ ವೇಳೆ ಸುಖಜೀತ್ ಸಿಂಗ್, ಉತ್ತಮ ಸಿಂಗ್ ತಲಾ ಒಂದೊಂದು ಗೋಲು ಬಾರಿಸಿ ಜಯದಲ್ಲಿ ಮಿಂಚಿದರು. ಈ ಮೂಲಕ ಭಾರತ ಎರಡನೇ ಪಂದ್ಯದಲ್ಲೂ ಅಮೋಘ ಗೆಲುವು ಸಾಧಿಸಿ, ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications