Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಭಾರತ-ಮಲೇಷ್ಯಾ ಪಂದ್ಯ ಸಮಬಲ

India held to goalless draw by Malaysia in Asian Champions Trophy

ಮಸ್ಕತ್, ಅಕ್ಟೋಬರ್ 24: ಓಮನ್ ನ ಮಸ್ಕತ್ ನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿನ ಭಾರತ-ಮಲೇಷ್ಯಾ ತಂಡಗಳ ನಡುವಿನ ಕಾದಾಟ ಗೋಲ್ ದಾಖಲಾಗದೆ ಸಮಬಲಗೊಂಡಿದೆ. ಟೂರ್ನಿಯಲ್ಲಿ ಬಲಿಷ್ಟ ತಂಡಗಳಾಗಿ ಗುರುತಿಸಿಕೊಂಡಿದ್ದ ಇತ್ತಂಡಗಳ ಕಾದಾಟ ಸಾಕಷ್ಟು ಕುತೂಹಲ ಮೂಡಿಸಿತ್ತು. ಆದರೆ ಪಂದ್ಯ 0-0ಯಿಂದ ಡ್ರಾ ಗೊಂಡಿದೆ.

ಪಂದ್ಯಾಟದಲ್ಲಿ ಈ ಮೊದಲು ಆಡಿದ್ದ ಮೂರೂ ಪಂದ್ಯಗಳಲ್ಲಿ ಎರಡೂ ತಂಡಗಳು ಗೆದ್ದು, ತಲಾ 9 ಅಂಕಗಳನ್ನು ಹಂಚಿಕೊಂಡಿದ್ದವು. ಆದರೆ ಗೋಲ್ ಆಧಾರವಾಗಿ ಗಮನಿಸಿದರೆ ಭಾರತ ಬಲಿಷ್ಟ ತಂಡವಾಗಿ ಕಾಣಿಸಿಕೊಂಡಿತ್ತು. ಭಾರತ 22 ಗೋಲ್ ಡಿಫರೆನ್ಸ್ ಅಂಕಗಳನ್ನು ಗಳಿಸಿದ್ದರೆ, ಮಲೇಷ್ಯಾ 7 ಗೋಲ್ ಡಿಫರೆನ್ಸ್ ಅಂಕಗಳನ್ನು ಪಡೆದಿತ್ತು.

ಮಂಗಳವಾರದ (ಅಕ್ಟೋಬರ್ 23) ಪಂದ್ಯ ಡ್ರಾ ಗೊಂಡಿದ್ದರಿಂದ ಎರಡೂ ತಂಡಗಳು ತಲಾ 10 ಅಂಕಗಳನ್ನು ಹಂಚಿಕೊಂಡಿವೆ. ಜಕಾರ್ತಾ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದಿದ್ದ ಮಲೇಷ್ಯಾವನ್ನು ಎದುರುಗೊಳ್ಳುವುದಕ್ಕೂ ಮುನ್ನ ಭಾರತ, ಏಷ್ಯನ್ ಗೇಮ್ಸ್ ಚಾಂಪಿಯನ್ ಜಪಾನ್ ತಂಡವನ್ನು ಭರ್ಜರಿ 9-0ಯಿಂದ ಮಣಿಸಿತ್ತು.

Story first published: Wednesday, October 24, 2018, 16:16 [IST]
Other articles published on Oct 24, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+