Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಲಿ ನಜ್ವಾ ಸಾದಿಕ್ ವರಿಸಿದ ಭಾರತದ ಹಾಕಿ ನಾಯಕ ಮನ್ಪ್ರೀತ್ ಸಿಂಗ್

India Hockey Captain Manpreet Singh Marries Illi Najwa Saddique

ನವದೆಹಲಿ: ಭಾರತದ ರಾಷ್ಟ್ರೀಯ ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್ ಪವಾರ್ ಅವರು ಮಲೇಷ್ಯಾದ ಹಾಕಿ ಆಟಗಾರ್ತಿ ಇಲಿ ನಜ್ವಾ ಸಾದಿಕ್ ಅವರನ್ನು ಬುಧವಾರ (ಡಿಸೆಂಬರ್ 16) ವರಿಸಿದ್ದಾರೆ. ಪಂಜಾಬ್‌ನ ಜಲಂಧರ್‌ನಲ್ಲಿ ಇಬ್ಬರ ಮದುವೆ ನೆರವೇರಿದೆ.

28ರ ಹರೆಯದ ಮನ್ಪ್ರೀತ್‌ ಸಿಂಗ್, 2012ರಲ್ಲಿ ನಡೆದಿದ್ದ ಸುಲ್ತಾನ್ ಆಫ್ ಜೋಹಾರ್ ಕಪ್‌ ವೇಳೆ ಇಲಿ ನಜ್ವಾ ಸಾದಿಕ್ ಅವರನ್ನು ಮೊದಲು ಭೇಟಿಯಾಗಿದ್ದರು. ಇಬ್ಬರೂ ಕೂಡ ಈ ವರ್ಷ ನಡೆಯಲಿದ್ದ ಟೋಕಿಯೋ ಒಲಿಂಪಿಕ್ಸ್‌ಗೂ ಮುನ್ನವೇ ಜಂಟಿ ಜೀವನಕ್ಕೆ ಕಾಲಿರಿಸುವುದರಲ್ಲಿದ್ದರು. ಆದರೆ ಕೊರೊನಾ ವೈರಸ್ ಕಾರಣ ಒಲಿಂಪಿಕ್ಸ್ ಕೂಡಾಕೂಟ ಮತ್ತು ಮದುವೆ ಎರಡೂ ಮುಂದೂಡಲ್ಪಟ್ಟಿತ್ತು.

27ರ ಹರೆಯದ ನಜ್ವಾ ಮದುವೆಯ ನಿಮಿತ್ತ ಮಲೇಷ್ಯಾ ಅಧಿಕಾರಿಗಳ ಮತ್ತು ಭಾರತೀಯ ಗೃಹ ಸಚಿವಾಲಯದ ವಿಶೇಷ ಅನುಮತಿ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾಗಿ ತಿಳಿದುಬಂದಿದೆ. ಅಂದ್ಹಾಗೆ, ಜನ್ವಾ ಅವರು ಮಲೇಷ್ಯಾದ ರಾಷ್ಟ್ರೀಯ ಯುನಿಟಿ ಮಿನಿಸ್ಟರ್ ಹಲಿಮಾ ಮೊಹಮ್ಮದ್ ಸಾದಿಕ್ ಅವರ ಸೋದರ ಸೊಸೆ.

ಮದುವೆ ಸಮಾರಂಭದಲ್ಲಿ ಮನ್‌ಪ್ರೀತ್‌ ಸಿಂಗ್ ಅವರು ಪೇಟ ಸಹಿತ ಪಂಜಾಬಿ ಮದುವೆಯ ದಿರಿಸು ಧರಿಸಿದ್ದರೆ, ನಜ್ವಾ ಅವರು ಪಂಜಾಬಿ ವಧುವಿನ ದಿರಿಸಿನಲ್ಲಿ ಗಮನ ಸೆಳೆಯುತ್ತಿದ್ದುದಾಗಿ ತಿಳಿದುಬಂದಿದೆ.

Story first published: Thursday, December 17, 2020, 20:18 [IST]
Other articles published on Dec 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+