Indian Junior Womens Hockey Team: ಯುರೋಪ್ ಪ್ರವಾಸಕ್ಕೆ ಭಾರತ ಕಿರಿಯ ಮಹಿಳಾ ಹಾಕಿ ತಂಡ ಪ್ರಕಟ
ಮೇ 6 ಸೋಮವಾರ, ಈಗಾಗಲೇ ಯುರೋಪ್ ಪ್ರವಾಸಕ್ಕೆ ಭಾರತ ಕಿರಿಯ (ಜೂನಿಯರ್) ಪುರುಷರ ಹಾಕಿ ತಂಡವನ್ನು ಮೇ 4 ರಂದು ಪ್ರಕಟಿಸಲಾಗಿದೆ. ಇದೀಗ ಯುರೋಪ್ ಪ್ರವಾಸಕ್ಕೆ ಭಾರತ ಜೂನಿಯರ್ ಮಹಿಳಾ ಹಾಕಿ ತಂಡದ 22 ಸದಸ್ಯರನ್ನು ಹೆಸರಿಸಲಾಗಿದೆ.
ಕಿರಿಯರ ಮಹಿಳಾ ತಂಡವು ಮೇ 21 ಮತ್ತು 29 ರವರೆಗೆ ಯುರೋಪ್ ಪ್ರವಾಸ ಕೈಗೊಳ್ಳಲಿದೆ. ತಂಡವು ಮೂರು ದೇಶಗಳಲ್ಲಿ ಆರು ಪಂದ್ಯಗಳನ್ನು ಆಡಲಿದೆ. ಬೆಲ್ಜಿಯಂ, ಜರ್ಮನಿ ಮತ್ತು ಬ್ರೆಡ್ಜ್ ಹಾಕಿ ವೆರೆನಿಜಿಂಗ್ ಪುಶ್ ಮತ್ತು ಒರೆಂಜೆ ನೆದರ್ಲ್ಯಾಂಡ್ಸ್‌ನ ಎರಡು ಕ್ಲಬ್ ತಂಡಗಳು ವಿರುದ್ಧ ಸೆಣಸಾಡಲಿದೆ.

ಮೇ 21 ರಂದು ಬ್ರೆಡಾದಲ್ಲಿ ಬ್ರೆಡ್ಜ್ ಹಾಕಿ ವೆರೆನಿಜಿಂಗ್ ಪುಶ್ ವಿರುದ್ಧ ಕಿರಿಯರ ಮಹಿಳಾ ತಂಡವು ತಮ್ಮ ಮೊದಲ ಪಂದ್ಯವನ್ನು ಆಡಲಿದೆ. ಮರುದಿನ ಮೇ 22 ರಂದು ಅದೇ ಸ್ಟೇಡಿಯಂನಲ್ಲಿ ಬೆಲ್ಜಿಯಂ ಎದರು ಕಣಕ್ಕೀಳಿಯಲಿದೆ. ಮೇ 24 ರಂದು ಭಾರತ ಎರಡನೇ ಬಾರಿಗೆ ಬೆಲ್ಜಿಯಂ ವಿರುದ್ಧ ಆಡಲಿದೆ.
ನಂತರ ಮೇ 26 ರಂದು ಜರ್ಮನಿ ವಿರುದ್ಧ ಬ್ರೆಡಾದಲ್ಲಿ ಮತ್ತು ಮೇ 27 ರಂದು ಜರ್ಮನಿಯಲ್ಲಿ ಸತತವಾಗಿ ಪಂದ್ಯಗಳು ನಡೆಯಲಿವೆ. ಬಳಿಕ ಭಾರತ ವನಿತೆಯರು ಬ್ರೆಡಾಗೆ ಹಿಂದಿರುಗಿ ಮೇ 29 ರಂದು ಆರೆಂಜ್ ರೂಡ್ ವಿರುದ್ಧ ತಮ್ಮ ಪ್ರವಾಸದ ಅಂತಿಮ ಪಂದ್ಯವನ್ನು ಆಡಲಿದ್ದಾರೆ.
ಡಿಫೆಂಡರ್ ಜ್ಯೋತಿ ಸಿಂಗ್ ತಂಡವನ್ನು ನಾಯಕಿಯಾಗಿ ಮುನ್ನಡೆಸಲಿದ್ದು, ಮಿಡ್‌ಫೀಲ್ಡರ್ ಸಾಕ್ಷಿ ರಾಣಾ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಅದಿತಿ ಮಹೇಶ್ವರಿ ಮತ್ತು ನಿಧಿ ಗೋಲ್‌ಕೀಪಿಂಗ್ ವಿಭಾಗದಲ್ಲಿದ್ದರೆ, ಜ್ಯೋತಿ ಸಿಂಗ್, ಲಾಲ್ತಂತ್ಲುವಾಂಗಿ, ಅಂಜಲಿ ಬರ್ವಾ, ಪೂಜಾ ಸಾಹು, ಮಮಿತಾ ಓರಮ್ ಮತ್ತು ನಿರು ಕುಲ್ಲು ರಕ್ಷಣಾ ವಿಭಾಗದಲ್ಲಿದ್ದಾರೆ.
ಕ್ಷೇತ್ರಮಯುಮ್ ಸೋನಿಯಾ ದೇವಿ, ರಜನಿ ಕೆರ್ಕೆಟ್ಟಾ, ಪ್ರಿಯಾಂಕಾ ಯಾದವ್, ಖೈದೆಂ ಶಿಲೆಮಾ ಚಾನು, ಸಾಕ್ಷಿ ರಾಣಾ, ಅನಿಶಾ ಸಾಹು ಮತ್ತು ಸುಪ್ರಿಯಾ ಕುಜೂರ್ ಮಿಡ್‌ಫೀಲ್ಡ್‌ನಲ್ಲಿದ್ದಾರೆ. ಬಿನಿಮಾ ಧನ್, ಹಿನಾ ಬಾನೊ, ಲಾಲ್ರಿನ್‌ಪುಯಿ, ಇಶಿಕಾ, ಸಂಜನಾ ಹೋರೊ, ಸೋನಮ್ ಮತ್ತು ಕನಿಕಾ ಸಿವಾಚ್ ತಂಡದಲ್ಲಿರುವ ಪ್ರಸಿದ್ಧ ಫಾರ್ವರ್ಡ್‌ಗಳಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವು ನಾಯಕಿ ಜ್ಯೋತಿ ಸಿಂಗ್, ತಂಡದಲ್ಲಿ ಉತ್ತಮ ಸಹೋದರಿತ್ವವಿದೆ. ಅಭ್ಯಾಸ ಶಿಬಿರದ ವೇಳೆ ನಾವೆಲ್ಲರೂ ಪರಸ್ಪರ ಚೆನ್ನಾಗಿ ಪರಿಚಯ ಮಾಡಿಕೊಂಡಿದ್ದೇವೆ. ತಂಡದಲ್ಲಿರುವವರೆಲ್ಲರೂ ಅತ್ಯಂತ ಕೌಶಲ್ಯ ಮತ್ತು ಪ್ರತಿಭಾವಂತರ ಆಟಗಾರ್ತಿಯರು. ವಿದೇಶದಲ್ಲಿ ಬಲಿಷ್ಠ ತಂಡಗಳ ವಿರುದ್ಧ ಆಡುವುದು ಉತ್ತಮ ಕಲಿಕೆಯ ಅನುಭವವಾಗಿರುತ್ತದೆ ಎಂದು ಹೇಳಿದ್ದಾರೆ.
ಭಾರತ ಜೂನಿಯರ್ ಮಹಿಳಾ ತಂಡ :
ಗೋಲ್‌ಕೀಪರ್: ಅದಿತಿ ಮಹೇಶ್ವರಿ, ನಿಧಿ.
ಡಿಫೆಂಡರ್ಸ್: ಜ್ಯೋತಿ ಸಿಂಗ್ (ನಾಯಕಿ), ಲಾಲ್ತಂತ್ಲುವಾಂಗಿ, ಅಂಜಲಿ ಬರ್ವಾ, ಪೂಜಾ ಸಾಹು, ಮಮಿತಾ ಓರಮ್, ನಿರುಕುಲ್ಲು.
ಮಿಡ್‌ಫೀಲ್ಡರ್‌ಗಳು: ಕ್ಷೇತ್ರಿಮಯುಮ್ ಸೋನಿಯಾ ದೇವಿ, ರಜನಿ ಕೆರ್ಕೆಟ್ಟಾ, ಪ್ರಿಯಾಂಕಾ ಯಾದವ್, ಖೈದೆಮ್ ಶಿಲೆಮಾ ಚಾನು, ಸಾಕ್ಷಿ ರಾಣಾ (ಉ.ನಾ) ಅನಿಶಾ ಸಾಹು, ಸುಪ್ರಿಯಾ ಕುಜೂರ್.
ಫಾರ್ವರ್ಡ್: ಬಿನಿಮಾ ಧನ್, ಹಿನಾ ಬಾನೊ, ಲಾಲ್ರಿನ್‌ಪುಯಿ, ಇಶಿಕಾ, ಸಂಜನಾ ಹೋರೊ, ಸೋನಮ್, ಕನಿಕಾ ಸಿವಾಚ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications