Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾಕಿ ಟೆಸ್ಟ್: ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾಕ್ಕೆ ತಲೆ ಬಾಗಿದ ಭಾರತ

India loses 4-0 to Australia in the first Test

ಪರ್ತ್, ಮೇ 15: ಆಸ್ಟ್ರೇಲಿಯಾದ ಪರ್ತ್‌ ಹಾಕಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪುರುಷರ ಎರಡು ಪಂದ್ಯಗಳ ಹಾಕಿ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಪ್ರವಾಸಿ ಭಾರತ ಆತಿಥೇಯ ಆಸ್ಟ್ರೇಲಿಯಾಕ್ಕೆ 4-0 ಅಂತರದಿಂದ ಶರಣಾಗಿದೆ. ಸರಣಿಯ ಎರಡನೇ ಪಂದ್ಯ ಮೇ 17ರಂದು ನಡೆಯಲಿದೆ.

ಮೇ 15ರ ಬುಧವಾರ ನಡೆದ ಪಂದ್ಯದ ಪ್ರಥಮಾರ್ಧದ 15ನೇ ನಿಮಿಷದಲ್ಲಿ ಆಸ್ಟ್ರೇಲಿಯಾದ ಬ್ಲೇಕ್ ಗೋವರ್ಸ್ ಮೊದಲ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಅದಾಗಿ ಆಸ್ಟ್ರೇಲಿಯಾದ ಮತ್ತೊಬ್ಬ ಆಟಗಾರ ಜೆರೆಮಿ ಹೇವರ್ಡ್ 20ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.

ದ್ವಿತೀಯಾರ್ಧದಲ್ಲೂ ವಿಶ್ವ ನಂ.2 ಶ್ರೇಯಾಂಕದಲ್ಲಿರುವ ಆಸ್ಟ್ರೇಲಿಯಾ ಪಾರಮ್ಯ ಮೆರೆಯಿತು. ಅದೂ ಮೊದಲಾರ್ಧದಲ್ಲಿ ಗೋಲ್ ಬಾರಿಸಿದ್ದ ಜೆರೆಮಿ (59ನೇ ನಿಮಿಷದಲ್ಲಿ) ಮತ್ತು ಗೋವರ್ಸ್ (60 ನಿಮಿಷದಲ್ಲಿ) ಗೋಲ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.

Story first published: Wednesday, May 15, 2019, 17:58 [IST]
Other articles published on May 15, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+