For Quick Alerts
ALLOW NOTIFICATIONS  
For Daily Alerts

FIH Olympic Qualifiers: ಶೂಟೌಟ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡಕ್ಕೆ ನಿರಾಸೆ: ಓಲಿಂಪಿಕ್ಸ್‌ ಅರ್ಹತೆಗಿದೆ ಅವಕಾಶ

ಗುರುವಾರ ರಾಂಚಿಯಲ್ಲಿ ನಡೆದ ಎಫ್‌ಐಎಚ್ ಒಲಿಂಪಿಕ್ ಕ್ವಾಲಿಫೈಯರ್‌ನ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡವು ನಿಗದಿತ ಸಮಯದಲ್ಲಿ 2-2 ಡ್ರಾ ನಂತರ ಶೂಟ್-ಔಟ್‌ನಲ್ಲಿ ಜರ್ಮನಿ ವಿರುದ್ಧ 3-4 ರಿಂದ ಸೋಲುಕಂಡಿದೆ.

ಈ ಗೆಲುವಿನೊಂದಿಗೆ ಜರ್ಮನಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ತನ್ನ ಟಿಕೆಟ್ ಪಡೆದುಕೊಂಡಿದೆ. ಒಲಿಂಪಿಕ್ ಕೋಟಾವನ್ನು ಪಡೆಯಲು ಭಾರತಕ್ಕೆ ಮತ್ತೊಂದು ಅವಕಾಶವಿದೆ. ಭಾರತದ ಪರ ದೀಪಿಕಾ (15ನೇ ನಿಮಿಷ) ಮತ್ತು ಇಶಿಕಾ ಚೌಧರಿ (59ನೇ ನಿಮಿಷ) ನಿಗದಿತ ಸಮಯದಲ್ಲಿ ಗೋಲು ಗಳಿಸಿದರು. ಜರ್ಮನಿ ಪರ ಚಾರ್ಲೊಟ್ ಸ್ಟೆಪ್ಪೆನ್‌ಹಾರ್ಸ್ಟ್ (27ನೇ, 57ನೇ) ಎರಡೂ ಗೋಲು ಗಳಿಸಿದರು.

India loses to Germany in penalty shootout in FIH Olympic Qualifiers

ಭಾರತ ಮತ್ತು ಜರ್ಮನಿ ಪೂರ್ಣ ಸಮಯದವರೆಗೆ 1-1 ಗೋಲುಗಳನ್ನು ಗಳಿಸಿದ್ದವು. ನಂತರ ಹೆಚ್ಚುವರಿ ಸಮಯದಲ್ಲಿ ಸ್ಕೋರ್ 2-2 ಡ್ರಾದಲ್ಲಿ ಉಳಿಯಿತು. ನಂತರ ಪೆನಾಲ್ಟಿ ಶೂಟೌಟ್ ನಡೆಯಿತು. ಎರಡೂ ತಂಡಗಳು ತಲಾ ಮೂರು ಗೋಲುಗಳನ್ನು ಗಳಿಸಿ ಮತ್ತೆ ಸಮಬಲ ಸಾಧಿಸಿದವು. ನಂತರ ಮತ್ತೊಂದು ಶೂಟೌಟ್ ನಡೆಸಲಾಯಿತು. ಅಲ್ಲಿ ಜರ್ಮನಿಯ ಅದೃಷ್ಟದ ಲಕ್ಷ್ಮಿ ಬಾಗಿಲು ತೆರೆಯಿತು.

ಮೊದಲಾವಧಿಯಲ್ಲಿ ಭಾರತದ ಅಬ್ಬರ

ಗ್ರೂಪ್ ಹಂತದಲ್ಲಿ ಸತತ ಎರಡು ಜಯಗಳಿಸಿ ಸೆಮಿಫೈನಲ್ ತಲುಪಿದ್ದ ಭಾರತ ತಂಡ, ಮೊದಲ ಕ್ವಾರ್ಟರ್‌ನಲ್ಲಿ ಜರ್ಮನಿ ವಿರುದ್ಧ ಅಬ್ಬರಿಸಿತು. ಇದೇ ಅವಧಿಯಲ್ಲಿ ಭಾರತ 14ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಪಡೆಯಿತು. ಈ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದ ದೀಪಿಕಾ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.

India loses to Germany in penalty shootout in FIH Olympic Qualifiers

ರಕ್ಷಣಾ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಭಾರತ ಗೋಲಿನ ಅಂತರವನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. 26ನೇ ನಿಮಿಷದಲ್ಲಿ ಚಾರ್ಲೊಟ್ ಸ್ಟೆಪ್ಪೆನ್‌ಹಾರ್ಸ್ಟ್ ಜರ್ಮನಿ ಪರ ಗೋಲು ಬಾರಿಸಿದರು. ಇದಾದ ಬಳಿಕ ವಿರಾಮದ ವೇಳೆಗೆ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದ್ದವು.

ವಿರಾಮದ ನಂತರ, ಮೂರನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ಮುನ್ನಡೆ ಸಾಧಿಸಲು ಪ್ರಯತ್ನಿಸಿದವು. ಈ ವೇಳೆ ಉಭಯ ತಂಡಗಳು ಅಟ್ಯಾಕಿಂಗ್ ಆಟವನ್ನು ಆಡಿದವು. ಈ ಹಂತದಲ್ಲಿ ಉಭಯ ತಂಡಗಳ ಆಟಗಾರ್ತಿಯರು ಬಾರಿಸಿ ಚೆಂಡು ಗೋಲು ಪೆಟ್ಟಿಗೆ ಸೇರಲಿಲ್ಲ. ಪರಿಣಾಮ ಈ ಅವಧಿಯಲ್ಲಿ ಗೋಲುಗಳು ದಾಖಲಾಗಲಿಲ್ಲ.

ನಾಲ್ಕನೇ ಮತ್ತು ಅಂತಿಮ ಕ್ವಾರ್ಟರ್‌ನ ಆರಂಭದಲ್ಲಿ, ದೀಪಿಕಾ ಅಟ್ಯಾಕಿಂಗ್ ಆಟಕ್ಕೆ ಮಣೆ ಹಾಕಿ ಗೋಲುಗಳಿಸಲು ಪ್ರಯತ್ನಿಸಿದರು, ಆದರೆ ಜರ್ಮನ್ ಗೋಲ್‌ಕೀಪರ್ ಭಾರತೀಯ ಆಟಗಾರ್ತಿ ಈ ದಾಳಿಯನ್ನು ವಿಫಲಗೊಳಿಸಿದರು. ಭಾರತ ಮತ್ತು ಜರ್ಮನಿ ಇಲ್ಲಿಂದ ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡವು. ಆದರೆ ಯಶಸ್ಸು ಅಂತಿಮವಾಗಿ ಜರ್ಮನಿಗೆ ಮಾತ್ರ ಹೋಯಿತು.

ಚಾರ್ಲೊಟ್ ಸ್ಟೆಪ್ಪೆನ್‌ಹಾರ್ಸ್ಟ್ 56ನೇ ನಿಮಿಷದಲ್ಲಿ ತನ್ನ ಮತ್ತು ತನ್ನ ತಂಡದ ಎರಡನೇ ಫೀಲ್ಡ್ ಗೋಲು ಗಳಿಸುವ ಮೂಲಕ ಜರ್ಮನಿಗೆ ಮುನ್ನಡೆ ತಂದುಕೊಟ್ಟರು. ಪಂದ್ಯ ಮುಗಿಯಲು ಕೇವಲ ಮೂರು ನಿಮಿಷ ಮಾತ್ರ ಬಾಕಿ ಉಳಿದಿತ್ತು. ಆದರೆ ನಂತರ ಭಾರತದ ಇಶಿಕಾ ಚೌಧರಿ 59ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಭಾರತವನ್ನು 2-2 ಡ್ರಾಗೆ ತಂದರು.

ಇದಾದ ಬಳಿಕ ನಿಗದಿತ ಸಮಯದವರೆಗೆ ಎರಡೂ ತಂಡಗಳು ಮುನ್ನಡೆ ಸಾಧಿಸಲು ಸಾಧ್ಯವಾಗದೆ ಪಂದ್ಯ ಶೂಟೌಟ್‌ಗೆ ಸಾಗಿತು. ಜರ್ಮನಿ ಪೆನಾಲ್ಟಿ ಶೂಟೌಟ್ ನಲ್ಲಿ ಭಾರತವನ್ನು 4-3 ಗೋಲುಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು.

ಒಲಿಂಪಿಕ್ಸ್‌ಗೆ ಅರ್ಹತೆ ಹೇಗೆ?

ಶುಕ್ರವಾರ ನಡೆಯಲಿರುವ ಮೂರನೇ-ನಾಲ್ಕನೇ ಸ್ಥಾನದ ಪಂದ್ಯದಲ್ಲಿ ಜಪಾನ್ ತಂಡವನ್ನು ಸೋಲಿಸುವ ಮೂಲಕ ಭಾರತ ತಂಡವು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬಹುದು. ಈ ಟೂರ್ನಿಯ ಅಗ್ರ ಮೂರು ತಂಡಗಳು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿವೆ. ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ವಿಶ್ವದ ಐದನೇ ಶ್ರೇಯಾಂಕದ ತಂಡ ಜರ್ಮನಿ ಅಮೆರಿಕವನ್ನು ಎದುರಿಸಲಿದ್ದು, ಭಾರತ ತಂಡ ಜಪಾನ್ ವಿರುದ್ಧ ಮೂರನೇ ಸ್ಥಾನಕ್ಕಾಗಿ ಸೆಣಸಲಿದೆ. ಮೊದಲ ಸೆಮಿಫೈನಲ್‌ನಲ್ಲಿ ಜಪಾನ್ ಅಮೆರಿಕ ವಿರುದ್ಧ 1-2 ಅಂತರದ ಸೋಲನ್ನು ಕಂಡಿತು.

India loses to Germany in penalty shootout in FIH Olympic Qualifiers

ಪಂದ್ಯ ವೀಕ್ಷಿಸಿದ ಧೋನಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಜೀವಂತ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಕೂಡ ತಮ್ಮ ತವರು ರಾಂಚಿಯಲ್ಲಿ ನಡೆಯುತ್ತಿರುವ ಈ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣದಲ್ಲಿ ಹಾಜರಿದ್ದರು.

Story first published: Friday, January 19, 2024, 8:01 [IST]
Other articles published on Jan 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+