ಹಾಕಿ ವಿಶ್ವಕಪ್‌ನಲ್ಲಿ ಸೋಲು: ಭಾರತದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ಗ್ರಹಾಮ್ ರೀಡ್

ಭಾರತದ ಪುರುಷರ ಹಾಕಿ ತಂಡದ ಮುಖ್ಯ ಕೋಚ್ ಗ್ರಹಾಮ್ ರೈಡ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡ ಆಘಾತಕಾರಿ ಪ್ರದರ್ಶನ ನೀಡುವ ಮೂಲಕ ಗ್ರೂಪ್ ಹಂತದಲ್ಲಿಯೇ ನಿರ್ಗಮಿಸಿತ್ತು. ಈ ಸೋಲಿನ ಬಳಿಕ ಇದೀಗ ಕೋಚ್ ಸ್ಥಾನವನ್ನು ತೊರೆಯಲು ನಿರ್ಧಾರಿಸಿದ್ದಾರೆ ಗ್ರಹಾಮ್ ರೀಡ್.
2019ರ ಏಪ್ರಿಲ್‌ನಲ್ಲಿ ಭಾರತ ಹಾಕಿ ತಂಡದ ಕೋಚ್ ಆಗಿ ಜವಾಬ್ಧಾರಿ ವಹಿಸಿಕೊಂಡಿದ್ದ ರೀಡ್ 2021ರಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಐತಿಹಾಸಿಕ ಕಂಚಿನ ಪದಕ ಗೆಲುವಿನಲ್ಲಿ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. 58ರ ಹರೆಯದ ಆಸ್ಟ್ರೇಲಿಯಾದ ಗ್ರಹಾಂ ರೀಡ್ ಭುವನೇಶ್ವರದಲ್ಲಿ ಆಯೋಜನೆಯಾದ ವಿಶ್ವಕಪ್ ಟೂರ್ನಿಯ ಅಂತ್ಯದ ಒಂದು ದಿನದ ಬಳಿಕ ತಮ್ಮ ರಾಜೀನಾಮೆಯನ್ನು ಹಾಕಿ ಇಂಡಿಯಾದ ಅಧ್ಯಕ್ಷ ದಿಲೀಪ್ ಟಿರ್ಕೀ ಅವರಿಗೆ ಸಲ್ಲಿಸಿದ್ದಾರೆ.
"ನಾನು ಈ ಹುದ್ದೆಯಿಂದ ಕೆಳಗಿಳಿಯುವ ಸಂದರ್ಭ ಬಂದಿದೆ. ಮ್ಯಾನೇಜ್‌ಮೆಂಟ್‌ಗೆ ನನ್ನ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ" ಎಂದು ರೀಡ್ ತಮ್ಮ ನಿವೃತ್ತಿಯ ಘೋಷಣೆ ಮಾಡಿದ್ದಾರೆ. ಮುಂದಿವರಿದು ಅವರು "ಈ ತಂಡದೊಂದಿಗೆ ಹಾಗೂ ಹಾಕಿ ಇಂಡಿಯಾದ ಜೊತೆಗೆ ಕರ್ತವ್ಯ ನಿರ್ವಹಿಸಿರುವುದು ನನಗೆ ದೊರೆತ ಗೌರವ ಹಾಗೂ ಅವಕಾಶವಾಗಿದೆ. ಈ ಅದ್ಭುತವಾದ ಪ್ರಯಾಣದಲ್ಲಿ ನಾನು ಎಲ್ಲವನ್ನೂ ಆನಂದಿಸಿದ್ದೇನೆ. ತಂಡಕ್ಕೆ ನಾನು ಶುಭಹಾರೈಸುತ್ತೇನೆ" ಎಂದಿದ್ದಾರೆ ಭಾರತದ ಕೋಚ್ ಆಗಿ ಕರ್ತವ್ಯ ನಿರ್ವಹಿಸಿರುವ ಗ್ರಹಾಮ್ ರೀಡ್.
ಇನ್ನು ಈ ಬಾರಿಯ ವಿಶ್ವಕಪ್‌ನಲ್ಲಿ 'ಪೂಲ್ ಡಿ'ಯಲ್ಲಿದ್ದ ಭಾರತ ಇಂಗ್ಲೆಂಡ್ ತಮಡದ ಬಳಿಕ ಎರಡನೇ ಸ್ಥಾನದಲ್ಲಿತ್ತು. ಹೀಗಾಗಿ ಕ್ವಾರ್ಟರ್‌ಫೈನಲ್ ಹಂತಕ್ಕೇರಬೇಕಾದರೆ ನ್ಯೂಜಿಲೆಂಡ್ ತಂಡದ ವಿರುದ್ಧ ಕ್ರಾಸ್‌ಓವನ್ ಪಂದ್ಯವನ್ನಾಡಬೇಕಾಗಿತ್ತು. ಈ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ ನ್ಯೂಜಿಲೆಂಡ್ ತಂಡಕ್ಕೆ ಶರಣಾಗುವ ಮೂಲಕ ಹೋರಾಟ ಅಂತ್ಯಗೊಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications