ಹಾಕಿ: ನೆದರ್ಲ್ಯಾಂಡ್ ವಿರುದ್ಧದ ಪಂದ್ಯ ಡ್ರಾ, ಭಾರತ ಫೈನಲ್ ಪ್ರವೇಶ

ನವದೆಹಲಿ, ಜು. 1: ನೆದರ್ಲ್ಯಾಂಡ್ ನ ಬ್ರೆಡಾದಲ್ಲಿ ಶನಿವಾರದ ನಡೆದ ಪುರುಷರ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ನೆದರ್ಲ್ಯಾಂಡ್ ವಿರುದ್ಧ 1-1ರ ಡ್ರಾ ಸಾಧಿಸುವ ಮೂಲಕ ಫೈನಲ್ ಸ್ಪರ್ಧೆಗೆ ಪ್ರವೇಶ ಗಿಟ್ಟಿಸಿಕೊಂಡಿದೆ.
ಕಳೆದ ವರ್ಷ ಇದೇ ಪಂದ್ಯಾಟದಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತ ರನ್ನರ್ಸ್ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಈ ಬಾರಿ ಫೈನಲ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಭಾರತ ಕಣಕ್ಕಿಳಿಯಲಿದೆ.
ಭಾರತದ ಮನ್ ದೀಪ್ ಸಿಂಗ್ ಅವರು 47ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು. ಅದಾಗಿ ಪಂದ್ಯ ಮುಗಿಯಲು ಇನ್ನೇನು 5 ನಿಮಿಷಗಳು ಬಾಕಿಯಿದೆ ಅನ್ನುವಾಗ ಅಂದರೆ 55ನೇ ನಿಮಿಷದಲ್ಲಿ ಎದುರಾಳಿ ನೆದರ್ಲ್ಯಾಂಡಿನಿಂದ ಥಿಯೆರ್ರಿ ಬ್ರಿಂಕ್ಮನ್ ಅವರು ಗೋಲ್ ಬಾರಿಸಿ ಅಂಕವನ್ನು ಸರಿದೂಗಿಸಿದರು.
ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಪಂದ್ಯಾಟದಲ್ಲಿ 3-2ರ ಮುನ್ನಡೆಯಲ್ಲಿರುವ ಆಸ್ಟ್ರೇಲಿಯಾ ಟೂರ್ನಿಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ನೆದರ್ಲ್ಯಾಂಡ್ ವಿರುದ್ಧ ಪಂದ್ಯ ಡ್ರಾ ಮಾಡಿಕೊಂಡಿರುವ ಭಾರತ ಆಸ್ಟ್ರೇಲಿಯಾಗಿಂತ ಕೆಳಗಿನ ಅಂದರೆ ದ್ವಿತೀಯ ಸ್ಥಾನದಲ್ಲಿದೆ.
ಪಂದ್ಯದ ನಿಯಮದ ಪ್ರಕಾರ ಅಂಕಪಟ್ಟಿಯ ಅಗ್ರ ಎರಡು ತಂಡಗಳು ಫೈನಲ್ ಸ್ಪರ್ಧೆಗೆ ಪ್ರವೇಶ ಗಿಟ್ಟಿಸಿಕೊಳ್ಳಲಿದ್ದು, ಭಾರತ ತಂಡ ಬಲಾಡ್ಯ ಆಸ್ಟ್ರೇಲಿಯಾವನ್ನು ಭಾನುವಾರ ಎದುರುಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications