FIH Hockey Men's Junior World Cup: ಜರ್ಮನಿಗೆ ಮಣಿದ ಭಾರತ
ಪುರುಷರ ಜೂನಿಯರ್ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ನಿರಾಸೆ ಅನುಭವಿಸಿದೆ. ಭಾನುವಾರ ನಡೆದ ಉಪಾಂತ್ಯ ಪಂದ್ಯದಲ್ಲಿ ಭಾರತ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಗಿದೆ. ಟೂರ್ನಿಯುದ್ದಕ್ಕೂ ಅಜೇಯವಾಗಿ ಓಟವನ್ನು ಮುಂದುವರೆಸಿದ ಭಾರತ, ಸೆಮಿಫೈನಲ್ ಪಂದ್ಯದಲ್ಲಿ ಆಘಾತ ಅನುಭವಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಭಾರತ 1-4 ರಿಂದ ಜರ್ಮನಿ ವಿರುದ್ಧ ಸೋಲು ಕಂಡಿತು.
ಆರಂಭದಿಂದಲೂ ಜರ್ಮನಿ ಅಮೋಘ ಆಟವನ್ನು ಆಡಿತು. ಈ ವೇಳೆ ಜರ್ಮನಿ ಆರಂಭದಿಂದಲೂ ಚೆಂಡಿನ ಮೇಲೆ ಹಿಡಿತ ಸಾಧಿಸಿತು. ಅಲ್ಲದೆ ಭಾರತಕ್ಕೆ ಈ ಅವಧಿಯಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಲಿಲ್ಲ. ಜರ್ಮನಿ ಪಂದ್ಯದ 14ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡಿತು. ಈ ಅವಧಿಯಲ್ಲಿ ಜರ್ಮನಿ ಪರ ವ್ಯಾಕ್ಸ್ ಟೈಟಸ್ ಒಂದು ಗೋಲು ಬಾರಿಸಿ ಮಿಂಚಿದರು. ಪರಿಣಾಮ ಜರ್ಮನಿ ಮುನ್ನಡೆ ಸಾಧಿಸಿತು. ಪರಿಣಾಮ ಜರ್ಮನಿ ಮೊದಲಾವಧಿಯಲ್ಲಿ 1-0 ಮುನ್ನಡೆ ಸಾಧಿಸಿತು

ಎರಡನೇ ಅವಧಿಯ ಆಟದ 29ನೇ ನಿಮಿಷದಲ್ಲಿ ಜರ್ಮನಿಯ ಕೋಸೆಲ್ ಲ್ಯೂಕ್ ಭಾರತದ ಗೋಲಿಯನ್ನು ವಂಚಿಸುವಲ್ಲಿ ಸಫಲರಾದರು. ಇವರು ಭಾರತದ ಗೋಲಿಯನ್ನು ವಂಚಿಸುವಲ್ಲಿ ಸಫಲರಾದರು. ಪರಿಣಾಮ ಎರಡನೇ ಅವಧಿಯಲ್ಲಿ ಜರ್ಮನಿ 2-0 ಮುನ್ನಡೆ ಸಾಧಿಸಿತು. ಅಲ್ಲದೆ ಈ ಅವಧಿಯಲ್ಲಿ ಭಾರತ ಗೋಲು ಬಾರಿಸುವಲ್ಲಿ ವಿಫಲವಾಯಿತು.
ಕೊನೆಯ ಅವಧಿಯಲ್ಲಿ ಗೋಲು ಬಾರಿಸಿದ ಭಾರತ
ಮೂರನೇ ಅವಧಿಯ ಆಟದಲ್ಲಿ ಪುಟಿದೇಳುವ ಸೂಚನೆಯನ್ನು ನೀಡಿದ್ದ ಭಾರತದ ಆಸೆ ಫಲಿಸಲಿಲ್ಲ. ಈ ಅವಧಿಯಲ್ಲೂ ಭಾರತ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿತು. ಈ ಅವಧಿಯ ವಾನ್ ಗೆರ್ಸಮ್ ಜೋನ್ನಾ ಸಹ 39ನೇ ನಿಮಿಷದಲ್ಲಿ ಗೋಲು ಬಾರಿಸಿ, ಪ್ರವಾಸಿ ತಂಡದ ಗೋಲಿನ ಅಂತರವನ್ನು ಹೆಚ್ಚಿಸಿದರು. ನಾಲ್ಕನೇ ಅವಧಿಯ ಆಟದಲ್ಲಿ ಹಸ್ಬಾಚ್ ಬೆನ್ 48ನೇ ನಿಮಿಷದಲ್ಲಿ ಗೋಲು ಬಾರಿಸಿ ಮಿಂಚಿದರು.

ಭಾರತದ ಪರ ಎಕ್ಕಾ ಅನ್ಮೋಲ್ ಕೊನೆಯ ಅವಧಿಯಲ್ಲಿ ಒಂದು ಗೋಲು ಬಾರಿಸಿದ್ದು ಬಿಟ್ಟರೆ, ಭಾರತದ ಅಭಿಮಾನಿಗಳ ಖುಷಿ ಹೆಚ್ಚಿಸುವ ಸಂದರ್ಭ ಈ ಪಂದ್ಯದಲ್ಲಿ ಹೆಚ್ಚಿಗೆ ಸಿಗಲಿಲ್ಲ. ಪರಿಣಾಮ ಭಾರತ ಆಘಾತ ಅನುಭವಿಸಿತು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ 4-3 ಗೋಲುಗಳ ಪೆನಾಲ್ಟಿ ಶೂಟೌಟ್‌ನಿಂದ ಬೆಲ್ಜಿಯಂ ತಂಡವನ್ನು ಮಣಿಸಿತು. ಭಾರತ ಡಿಸೆಂಬರ್ 10 ರಂದು ತನ್ನ ಮುಂದಿನ ಪಂದ್ಯವನ್ನು ಅರ್ಜಿಂಟೀನಾ ವಿರುದ್ಧ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications