Asian Champions Trophy Hockey: ಸೆಮಿಫೈನಲ್‌ನಲ್ಲಿ ಭಾರತಕ್ಕೆ 4-1 ಗೋಲುಗಳ ಜಯ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಸಾಧನೆ ಮಾಡಿರುವ ಟೀಮ್ ಇಂಡಿಯಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ 4-1 ಗೋಲುಗಳಿಂದ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿ ಫೈನಲ್‌ಗೆ ಪ್ರವೇಶ ಪಡೆದಿದೆ. ಭಾರತ ಫೈನಲ್‌ನಲ್ಲಿ ಆತಿಥೇಯ ಚೀನಾ ವಿರುದ್ಧ ಕಾದಾಟ ನಡೆಸಲಿದೆ.
ಟೂರ್ನಿಯುದ್ಧಕ್ಕೂ ಅಮೋಘ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಉಪಾಂತ್ಯ ಪಂದ್ಯದಲ್ಲೂ ಸ್ಥಿರ ಪ್ರದರ್ಶನ ನೀಡಿತು. ಭಾರತದ ಪರ ಹರ್ಮನ್ ಪ್ರೀತ್ ಸಿಂಗ್ (19ನೇ ನಿಮಿಷ, 45ನೇ ನಿಮಿಷ) ಎರಡು ಗೋಲು ಬಾರಿಸಿದರು. ಉತ್ತಮ ಸಿಂಗ್ (13ನೇ ನಿಮಿಷ), ಜರ್ಮನ್ ಪ್ರೀತ್ ಸಿಂಗ್ (32ನೇ ನಿಮಿಷ) ತಲಾ ಒಂದು ಗೋಲು ಸಿಡಿಸಿ ಜಯದಲ್ಲಿ ಮಿಂಚಿದರು. ಪರಾಜಿತ ತಂಡದ ಪರ ಯಂಗ್ ಜಿಹುನ್ (33ನೇ ನಿಮಿಷ) ಗೋಲು ದಾಖಲಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಮೊದಲಾವಧಿಯಲ್ಲಿ ಅಬ್ಬರ
ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ನೀಡಿರುವ ಸ್ಥಿರ ಪ್ರದರ್ಶನವನ್ನು ಟೀಮ್ ಇಂಡಿಯಾ ಸೆಮಿಫೈನಲ್ ಪಂದ್ಯದಲ್ಲೂ ಮುಂದುವರೆಸಿತು. ಮೊದಲಾವಧಿಯಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದ ಭಾರತ, ಫೀಲ್ಡ್ ಗೋಲ್ ಬಾರಿಸುವ ಅವಕಾಶ ಪಡೆಯಿತು. ಉತ್ತಮ ಸಿಂಗ್ ಅಹ ಆಟಗಾರ ನೀಡಿದ ಉತ್ತಮ ಪಾಸ್‌ನ ಲಾಭ ಪಡೆದು ತಂಡಕ್ಕೆ ಮುನ್ನಡೆ ತಂದು ಕೊಟ್ಟರು. ಭಾರತ ಮೊದಲಾವಧಿಯಲ್ಲಿ 1-0 ಗೋಲುಗಳ ಮುನ್ನಡೆ ಸಾಧಿಸಿತ್ತು.
ನಾಯಕನ ಕಮಾಲ್
ಹರ್ಮನ್ ಪ್ರೀತ್ ಸಿಂಗ್ ಉಪಾಂತ್ಯ ಪಂದ್ಯದಲ್ಲೂ ಅಮೋಘ ಪ್ರದರ್ಶನ ಮುಂದುವರೆಸಿದರು. ಇವರು 19ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಈ ಅವಧಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿತು. ಕೊರಿಯಾ ಈ ಅವಧಿಯಲ್ಲೂ ಗೋಲು ಬಾರಿಸುವ ಅವಕಾಶವನ್ನು ಕೈ ಚೆಲ್ಲಿತು. ಟೀಮ್ ಇಂಡಿಯಾದ ರಕ್ಷಣಾ ವಿಭಾಗದ ಆಟ ಮನಮೋಹಕವಾಗಿತ್ತು.
ಮೂರನೇ ಅವಧಿಯಲ್ಲಿ ಸಮಬಲದ ಹೋರಾಟ
ಮೂರನೇ ಅವಧಿಯ ಆಟದಲ್ಲಿ ಉಭಯ ತಂಡಗಳು ಸಮಬಲದ ಹೋರಾಟವನ್ನು ನೀಡಿದವು. ಭಾರತ ಹಾಗೂ ದಕ್ಷಿಣ ಕೊರಿಯಾ ತಂಡಗಳು ಈ ಅವಧಿಯಲ್ಲಿ ತಲಾ ಒಂದು ಗೋಲು ದಾಖಲಿಸಿದವು. ಭಾರತದ ಪರ ಜರ್ಮನ್ ಪ್ರೀತ್ ಸಿಂಗ್ ಗಾಳಿಯಲ್ಲಿ ಬಂದ ಚೆಂಡನ್ನು ತಡೆದು ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ನೂಕುವಲ್ಲಿ ಯಶಸ್ವಿಯಾದರು. ಪರಿಣಾಮ ಭಾರತ 3-0 ಗೋಲುಗಳ ಮುನ್ನಡೆ ಸಾಧಿಸಿತು.

ಭಾರತದ ಪರ ಗೋಲು ದಾಖಲಾದ ಒಂದು ನಿಮಿಷದ ಅಂತರದಲ್ಲಿ ಕೊರಿಯಾ ಒಂದು ಗೋಲು ಸಿಡಿಸಿತು. ಪರಿಣಾಮ ಕೊರಿಯಾ ಮೊದಲ ಗೋಲಿನ ರುಚಿ ಕಂಡಿತು. ಇದೇ ಅವಧಿಯಲ್ಲಿ ಭಾರತದ ಪರ ಹರ್ಮನ್ ಪ್ರೀತ್ ಸಿಂಗ್ ಮತ್ತೊಂದು ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡು ಗೋಲಾಗಿ ಪರಿವರ್ತಿಸಿದರು.
ಕೊನೆಯ ಅವಧಿಯಲ್ಲಿ ಗೋಲು ಬಾರಿಸುವ ಉಭಯ ತಂಡಗಳ ಆಸೆ ಫಲಿಸಲಿಲ್ಲ. ಭಾರತ ಫೈನಲ್‌ಗೆ ಅರ್ಹತೆ ಪಡೆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications