India vs Germany: ಭಾರತಕ್ಕೆ ಜರ್ಮನಿ ಹಾಕಿ ತಂಡ ಪ್ರವಾಸ; ಸಂಪೂರ್ಣ ವೇಳಾಪಟ್ಟಿ ತಿಳಿಯಿರಿ
ಎರಡು ಪಂದ್ಯಗಳ ದ್ವಿಪಕ್ಷೀಯ ಹಾಕಿ ಸರಣಿಗಾಗಿ ಜರ್ಮನಿ ಪುರುಷರ ಹಾಕಿ ತಂಡವು ಅಕ್ಟೋಬರ್‌ನಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ಉಭಯ ತಂಡಗಳ ನಡುವಿನ ಸರಣಿಯೂ ನವದೆಹಲಿಯ ಐತಿಹಾಸಿಕ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇತ್ತೀಚೆಗಷ್ಟೇ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು, ಬಳಿಕ ಸತತ ಎರಡನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಉಳಿಸಿಕೊಂಡಿರುವ ಭಾರತ ಹಾಕಿ ತಂಡ ಈ ಸರಣಿ ಕೈ ವಶಪಡಿಸಿಕೊಳ್ಳುವ ನಿರೀಕ್ಷಯಲ್ಲಿದೆ. ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದಲ್ಲಿ ಭಾರತ ತಂಡ ಕಳೆದ ವಾರ ಆತಿಥೇಯ ಚೀನಾವನ್ನು 1-0 ಗೋಲುಗಳ ಅಂತರದಲ್ಲಿ ಸೋಲಿಸಿ ಐದನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

ಭಾರತಕ್ಕೆ ಜರ್ಮನಿ ಪ್ರವಾಸ
ಭಾರತ ಮತ್ತು ಜರ್ಮನಿ ನಡುವಿನ ಸರಣಿ ಬಗ್ಗೆ ಹಾಕಿ ಇಂಡಿಯಾದ ಪತ್ರಿಕಾ ಪ್ರಕಟಣೆಯಲ್ಲಿ ಅಧ್ಯಕ್ಷ ದಿಲೀಪ್ ಟಿರ್ಕಿ ಅವರು ಮಾಹಿತಿ ನೀಡಿದ್ದಾರೆ. 'ಜರ್ಮನಿ ವಿರುದ್ಧದ ಈ ದ್ವಿಪಕ್ಷೀಯ ಸರಣಿಯು ವಿಶ್ವ ದರ್ಜೆಯ ಹಾಕಿ ಕ್ರೀಡೆಯ ಅದ್ಭುತ ಮತ್ತು ಸ್ಮರಣೀಯ ಪ್ರದರ್ಶನವಾಗಲಿದೆ. ಭಾರತ ಮತ್ತು ಜರ್ಮನಿ ಎರಡೂ ತಂಡಗಳು ಹಾಕಿ ಕ್ರೀಡೆಯಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿವೆ. ಈ ಸರಣಿಯು ಭಾರತೀಯ ಕ್ರೀಡಾ ಅಭಿಮಾನಿಗಳಿಗೆ ವಿಶ್ವದ ಎರಡು ಬಲಿಷ್ಠ ತಂಡಗಳ ನಡುವಿನ ರೋಚಕ ಕಾದಾಟವನ್ನು ನೋಡಿ ಕಣ್ತುಂಬಿಕೊಳ್ಳಲು ಅವಕಾಶ ನೀಡಲಿದೆ. ಈ ಸರಣಿಯನ್ನು ಆಯೋಜಿಸಲು ನಾವು ಹೆಮ್ಮೆಪಡುತ್ತೇವೆ. ಇದು ಹಾಕಿಯ ಉತ್ಸಾಹವನ್ನು ಉತ್ತೇಜಿಸುವುದಲ್ಲದೆ, ಎರಡು ದೇಶಗಳ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೋಲಿನ ಸೇಡಿ ಭಾರತ ಸಜ್ಜು
ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನ ಸೆಮಿಫೈನಲ್‌ನಲ್ಲಿ ಭಾರತ ತಂಡವು ಜರ್ಮನಿಯನ್ನು ಎದುರಿಸಿತು. ಈ ಸೆಮಿಸ್ ಕದನದಲ್ಲಿ ಭಾರತ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಜರ್ಮನಿ ಭರ್ಜರಿ ಗೆಲುವು ಸಾಧಿಸಿತ್ತು. ಇದರೊಂದಿಗೆ ಭಾರತ ಬಂಗಾರ ಗೆಲ್ಲುವ ಕನಸು ಭಗ್ನಗೊಂಡಿತ್ತು. ಈಗ ಆ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಭಾರತ ಸಜ್ಜಾಗಿದೆ. ತವರಿನಲ್ಲಿ ಭಾರತವನ್ನು ಸೋಲಿಸುವುದು ಜರ್ಮನಿ ತಂಡಕ್ಕೆ ಕಠಿಣವೆನಿಸಬಹುದು.
ಭಾರತದಲ್ಲಿ ಆಡಲು ಜರ್ಮನಿ ಉತ್ಸಾಹ
'ಭಾರತವು ಯಾವಾಗಲೂ ಹಾಕಿಗೆ ವಿಶೇಷ ಸ್ಥಳವಾಗಿದೆ. ನಮ್ಮ ತಂಡವು ಭಾರತೀಯ ಹಾಕಿ ಅಭಿಮಾನಿಗಳ ಮುಂದೆ ಆಡಲು ಉತ್ಸುಕವಾಗಿದೆ. ಈ ಸರಣಿಯು ಜರ್ಮನಿ ಮತ್ತು ಭಾರತದ ನಡುವಿನ ಕ್ರೀಡಾ ಸಂಬಂಧಗಳನ್ನು ಬಲಪಡಿಸುವ ಮಾರ್ಗವಾಗಿದೆ' ಎಂದು ಜರ್ಮನ್ ಹಾಕಿ ಫೆಡರೇಶನ್ ಅಧ್ಯಕ್ಷ ಹೆನ್ನಿಂಗ್ ಫಾಸ್ಟ್ರಿಚ್ ಅವರು ಹೇಳಿದ್ದಾರೆ.
ಭಾರತ vs ಜರ್ಮನಿ ಹಾಕಿ ಸರಣಿ ವೇಳಾಪಟ್ಟಿ
ಮೊದಲ ಪಂದ್ಯ- ಅಕ್ಟೋಬರ್ 23 - ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣ, ನವದೆಹಲಿ
ಎರಡನೇ ಪಂದ್ಯ - ಅಕ್ಟೋಬರ್ 24 - ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣ, ನವದೆಹಲಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications