ವನಿತಾ ಹಾಕಿ ವಿಶ್ವಕಪ್: ಐರ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು

ಲಂಡನ್, ಜುಲೈ 26: ಲಂಡನ್ ನ ಲೀ ವ್ಯಾಲಿ ಹಾಕಿ ಮತ್ತು ಟೆನಿಸ್ ಸ್ಟೇಡಿಯಂನಲ್ಲಿ ನಡೆದ ಪೂಲ್ ಬಿಯ ಐರ್ಲೆಂಡ್-ಭಾರತ ವನಿತಾ ವಿಶ್ವಕಪ್ ಹಾಕಿ ಪಂದ್ಯದಲ್ಲಿ ಐರ್ಲೆಂಡ್ 1-0 ಅಂತರದ ಗೆಲುವು ಸಾಧಿಸಿದೆ.
ಗುರುವಾರ ನಡೆದ ಈ ಪಂದ್ಯದ ಮೊದಲಾರ್ಧದಲ್ಲೇ ಐರ್ಲೆಂಡ್ ಗೋಲ್ ಬಾರಿಸಿ ಮುನ್ನಡೆ ಕಾಯ್ದುಕೊಂಡಿತು. 12ನೇ ನಿಮಿಷದಲ್ಲಿ ಐರ್ಲೆಂಡ್ ನ ಆನ್ ಓ 'ಫ್ಲಾನ್ನಗನ್ ಅವರು ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. 57ನೇ ನಿಮಿಷದಲ್ಲಿ ನಾಯಕಿ ರಾಣಿ ರಾಂಪಾಲ್ ಗೋಲ್ ಪ್ರಯತ್ನವೂ ವ್ಯರ್ಥವಾಯಿತು.
ಆರಂಭಿಕ ಪಂದ್ಯದಲ್ಲಿ ಭಾರತ ಆತಿಥೇಯ ಇಂಗ್ಲೆಂಡ್ ಎದುರು 1-1ರಿಂದ ಡ್ರಾಗೊಳಿಸಿಕೊಂಡಿತ್ತು. ಇಂದಿನ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯವಾಗಿತ್ತು. ಆದರೆ ಐರೀಷ್ ಆಟಗಾರ್ತಿಯರು ಭಾರತದ ಆಟಗಾರ್ತಿಯರ ಆಸೆಗೆ ತಣ್ಣೀರೆರಚಿದರು.
ಈ ಪಂದ್ಯದೊಂದಿಗೆ ಎರಡನೇ ಗೆಲುವು ದಾಖಲಿಸಿರುವ ಐರ್ಲೆಂಡ್ ತಂಡ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡಿದೆ.
Story first published: Saturday, July 28, 2018, 17:01 [IST]
Other articles published on Jul 28, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications