For Quick Alerts
ALLOW NOTIFICATIONS  
For Daily Alerts

ನಿವೃತ್ತಿ ಘೋಷಿಸಿದ ಭಾರತ ಹಾಕಿ ತಂಡದ ಡಿಫೆಂಡರ್ ಸುನಿತಾ ಲಾಕ್ರಾ

India womens hockey team defender Sunita Lakra announces retirement

ನವದೆಹಲಿ, ಜನವರಿ 2: ಏಷ್ಯನ್ ಗೇಮ್ಸ್ 2018ರಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಭಾರತದ ಮಹಿಳಾ ಹಾಕಿ ತಂಡದಲ್ಲಿದ್ದ ಡಿಫೆಂಡರ್ ಸುನಿತಾ ಲಾಕ್ರಾ ಅವರು ತನ್ನ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಗಾಯಕ್ಕೀಡಾಗಿರುವ ಸುನಿತಾಗೆ ವೃತ್ತಿಯಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ.

ಮೊಣಕಾಲು ನೋವಿನ ಸಮಸ್ಯೆ ಎದುರಿಸುತ್ತಿರುವ ಸುನಿತಾ ಮತ್ತೊಂದು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿದೆ. ಗುಣವಾಗದ ಗಾಯದ ಕಾರಣದಿಂದ ಲಾಕ್ರಾ ಅವರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಆಸೆಯನ್ನೇ ನೆಲಕ್ಕೆ ಕೆಡವಿಕೊಳ್ಳಬೇಕಾಗಿದೆ.

ಹಾಕಿ ಇಂಡಿಯಾ ಜೊತೆ ಮಾತನಾಡುತ್ತ 28ರ ಹರೆಯದ ಸುನಿತಾ, 'ಈ ದಿನ ನನ್ನ ಪಾಲಿಗೆ ತುಂಬಾ ಭಾವನಾತ್ಮಕ ದಿನವಾಗಲಿದೆ. ಯಾಕೆಂದರೆ ನಾನು ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ,' ಎಂದಿದ್ದಾರೆ.

2008ರಿಂದಲೂ ಭಾರತ ತಂಡದಲ್ಲಿ ಆಡುತ್ತಿದ್ದ ಸುನಿತಾ, 2018ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡದ ನಾಯಕತ್ವ ವಹಿಸಿದ್ದರು. ಅಲ್ಲಿ ಭಾರತ ಬೆಳ್ಳಿ ಪದಕ ಗೆದ್ದಿತ್ತು. ದೇಶದ ಪರವಾಗಿ ಒಟ್ಟು 139 ಪಂದ್ಯಗಳನ್ನಾಡಿರುವ ಸುನಿತಾ ಸಾಧನೆಯಲ್ಲಿ 2014ರ ಏಷ್ಯನ್ ಗೇಮ್ಸ್‌ನಲ್ಲಿನ ಕಂಚಿನ ಪದಕದ ಹಿರಿಮೆಯೂ ಸೇರಿದೆ.

Story first published: Thursday, January 2, 2020, 15:02 [IST]
Other articles published on Jan 2, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+