ಒಲಿಂಪಿಕ್ ಪದಕ ವಿಜೇತ ಹಾಕಿ ಆಟಗಾರ ರೂಪೀಂದರ್ ಪಾಲ್ ಸಿಂಗ್ ನಿವೃತ್ತಿ

ನವದೆಹಲಿ: ಭಾರತದ ಹಾಕಿ ಆಟಗಾರ ರೂಪೀಂದರ್ ಪಾಲ್ ಸಿಂಗ್ ಸೆಪ್ಟೆಂಬರ್ 30ರ ಗುರುವಾರ ನಿವೃತ್ತಿ ಘೋಷಿಸಿದ್ದಾರೆ. ಕಳೆದ ತಿಂಗಳು ನಡೆದಿದ್ದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದ ಹಾಕಿ ಪುರುಷರ ತಂಡದಲ್ಲಿ ರೂಪೀಂದರ್ ಪಾಲ್ ಸಿಂಗ್ ಕೂಡ ಇದ್ದರು. 30ರ ಹರೆಯದ ರೂಪೀಂದರ್ 223 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಭಾರತೀಯ ಹಾಕಿ ತಂಡದಲ್ಲಿ ಸ್ಟಾರ್ ಡ್ರ್ಯಾಗ್ ಫ್ಲಿಕ್ಕರ್ ಆಗಿದ್ದ ರೂಪೀಂದರ್ ಪಾಲ್ ಸಿಂಗ್ ತಾನು ನಿವೃತ್ತಿ ಘೋಷಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ. ಟ್ವಿಟರ್‌ನಲ್ಲಿ ರೂಪೀಂದರ್ ಉದ್ದ ಸಂದೇಶ ಬರೆದುಕೊಂಡಿದ್ದಾರೆ.
"ಭಾರತೀಯ ಹಾಕಿ ತಂಡದಿಂದ ನಿವೃತ್ತಿ ಹೊಂದುವ ನನ್ನ ನಿರ್ಧಾರದ ಬಗ್ಗೆ ತಿಳಿಸಲು ನಾನು ಬಯಸುತ್ತಿದ್ದೇನೆ. ಕಳೆದ ಕೆಲವಾರು ತಿಂಗಳುಗಳಿಂದ ನಾನು ನಿಸಂಶಯವಾಗಿ ಉತ್ತಮ ದಿನಗಳನ್ನು ಕಂಡಿದ್ದೇನೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನನ್ನ ತಂಡದ ಸಹ ಆಟಗಾರರೊಂದಿಗೆ ಪೋಡಿಯಂನಲ್ಲಿ ನಿಲ್ಲುವಾಗಿನ ಸಿಕ್ಕಿದ ಅದ್ಭುತ ಅನುಭವ ನನ್ನ ಬದುಕಿನ ಕೊನೆವರೆಗೂ ಇರುತ್ತದೆ," ಎಂದು ರೂಪೀಂದರ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
"ಯುವ ಆಟಗಾರರು ಭಾರತೀಯ ತಂಡದಲ್ಲಿ ಹೊಸ ಖುಷಿಯನ್ನು ಎಂಜಾಯ್ ಮಾಡಲು ದಾರಿ ಮಾಡಿಕೊಡುವುದಕ್ಕೆ ಇದು ಸಕಾಲ ಎಂದು ನನಗನ್ನಿಸುತ್ತಿದೆ. ನಾನು ಈ 13 ವರ್ಷಗಳಲ್ಲಿ ಭಾರತೀಯ ತಂಡ ಪ್ರತಿನಿಧಿಸಿ ಅನುಭವಿಸಿದ ಖುಷಿ ಉಳಿದ ಆಟಗಾರರಿಗೂ ಸಿಗಲಿ. ಅದಕ್ಕೆ ದಾರಿ ಬಿಟ್ಟುಕೊಡುತ್ತಿದ್ದೇನೆ," ಎಂದು ರೂಪೀಂದರ್ ಟ್ವಿಟರ್ ಮೂಲಕ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications