ಹಾಕಿ ವಿಶ್ವ Rankingನಲ್ಲಿ 5ನೇ ಸ್ಥಾನಕ್ಕೇರಿದ ಭಾರತದ ಪುರುಷರು

ನವದೆಹಲಿ, ಜುಲೈ 17: ಇಂಟರ್ ನ್ಯಾಷನಲ್ ಹಾಕಿ ಫೆಡರೇಶನ್ (ಎಫ್ಐಎಚ್) ಮಂಗಳವಾರ ಪ್ರಕಟಿಸಿರುವ ಹೊಸ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಪುರುಷರ ಹಾಕಿ ತಂಡ ಒಂದು ಸ್ಥಾನ ಜಿಗಿತ ಕಂಡಿದೆ. ಈ ಹಿಂದೆ 6ನೇ ಸ್ಥಾನದಲ್ಲಿದ್ದ ಭಾರತ 5ನೇ ಸ್ಥಾನಕ್ಕೇರಿದೆ.
ಇತ್ತೀಚೆಗೆ ನೆದರ್ಲ್ಯಾಂಡ್ ನ ಬ್ರೆಡಾದಲ್ಲಿ ನಡೆದಿದ್ದ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಎರಡನೇ ಬಾರಿಗೆ ರನ್ನರ್ಸ್ ಪ್ರಶಸ್ತಿ ಜಯಿಸಿದ್ದು ರ್ಯಾಂಕಿಂಗ್ ನಲ್ಲಿ ಏರಿಕೆ ಕಾಣಲು ನೆರವಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ವಿನ್ನರ್ಸ್ ತಂಡವಾದ ಆಸ್ಟ್ರೇಲಿಯಾ ರ್ಯಾಂಕಿಂಗ್ ನ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ.
ಈ ತಿಂಗಳಾರಂಭದಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಆಸ್ಟ್ರೇಲಿಯಾ ಶೂಟೌಟ್ ಮೂಲಕ ಭಾರತವನ್ನು ಸೋಲಿಸಿ 15ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದು ಬೀಗಿತ್ತು. ಆಸ್ಟ್ರೇಲಿಯಾದ ಈ ಸಾಧನೆ ಅದನ್ನು ರ್ಯಾಂಕಿಂಗ್ ಪಟ್ಟಿಯ ಅಗ್ರ ಸ್ಥಾನದಲ್ಲಿ ಗಟ್ಟಿಯಾಗಿದೆ.
ಪ್ರಕಟಿತ ಹೊಸ ಪಟ್ಟಿಯಲ್ಲಿ ಆಸ್ಟ್ರೇಲಿಯಾ 1906 ಪಾಯಿಂಟ್ಸ್ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಅರ್ಜೆಂಟೀನಾ (1883 ಪಾಯಿಂಟ್ಸ್) ದ್ವಿತೀಯ, ಬೆಲ್ಜಿಯಂ (1709 ಪಾಯಿಂಟ್ಸ್) ತೃತೀಯ, ನೆದರ್ಲ್ಯಾಂಡ್ (1654 ಪಾಯಿಂಟ್ಸ್) ನಾಲ್ಕನೇ ಸ್ಥಾನದಲ್ಲಿದೆ. 5ನೇ ಸ್ಥಾನದಲ್ಲಿದ್ದ ಜರ್ಮನಿಯನ್ನು (1456 ಪಾಯಿಂಟ್ಸ್) 6ನೇ ಸ್ಥಾನಕ್ಕೆ ತಳ್ಳಿರುವ ಭಾರತ 1484 ಪಾಯಿಂಟ್ಸ್ ನಿಂದ 5ನೇ ಸ್ಥಾನ ಅಲಂಕರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications