Paris Olympics 2024: ಪದಕ ಗೆಲ್ಲುವತ್ತ ಭಾರತ ಹಾಕಿ ತಂಡ; ಹರ್ಮನ್‌ಪ್ರೀತ್ ಪಡೆಗೆ ರೋಚಕ ಜಯ!
ಆಗಸ್ಟ್ 4 ಭಾನುವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಹಾಕಿಯ ಕ್ವಾರ್ಟರ್‌ಫೈನಲ್ ಪಂದ್ಯ ನಡೆಯಿತು. ಈ ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಶೂಟೌಟ್‌ನಲ್ಲಿ ಮಣಿಸಿದ ಭಾರತ ಸೆಮಿಫೈನಲ್ ತಲುಪಿದೆ.
ಪೂರ್ಣ ಸಮಯದವರೆಗೆ ಉಭಯ ತಂಡಗಳ ಗೋಲು 1-1 ರಲ್ಲಿ ಸಮನಾಗಿತ್ತು. ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ (22ನೇ ನಿಮಿಷ) ಗೋಲು ಗಳಿಸಿದರು. ಇಂಗ್ಲೆಂಡ್ ಕಡೆ ಲೀ ಮಾರ್ಟನ್ (27ನೇ ನಿಮಿಷ) ಗೋಲು ದಾಖಲಿಸಿದರು. ಇದಾದ ಬಳಿಕ ಪಂದ್ಯ ಶೂಟೌಟ್‌ಗೆ ಸಾಗಿತು.

ರೋಚಕ ಶೂಟೌಟ್
ಡ್ರಾ ಆದ ಕಾರಣ ಪಂದ್ರ ಶೂಟೌಟ್‌ಗೆ ಹೋಗಬೇಕಾಯಿತು. ಇಲ್ಲಿ ನಿಜಕ್ಕೂ ಭಾರತ ಅದ್ಭುತ ಪ್ರದರ್ಶನ ನೀಡಿತು. ಭಾರತ 4-2 ಗೋಲುಗಳ ಅಂತರದಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತು.
ಶೂಟೌಟ್‌ನಲ್ಲಿಯೂ ಭಾರತದ ಪರ ಮೊದಲ ಗೋಲನ್ನು ಹರ್ಮನ್‌ಪ್ರೀತ್ ಸಿಂಗ್ ದಾಖಲಿಸಿದರು. ಸುಖಜಿತ್ ಸಿಂಗ್ ಎರಡನೇ ಗೋಲು ಗಳಿಸಿದರು. ಮೂರನೇ ಗೋಲು ಲಲಿತ್ ಕುಮಾರ್ ಉಪಾಧ್ಯಾಯ ಹೊಡೆದರು. ಇದಾದ ಬಳಿಕ ರಾಜ್ ಕುಮಾರ್ ಪಾಲ್ ನಾಲ್ಕನೇ ಗೋಲು ಬಾರಿಸಿ ಭಾರತದ ಗೆಲುವನ್ನು ಖಚಿತಪಡಿಸಿದರು.
2020ರ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿಯೂ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಇಂಗ್ಲೆಂಡ್ ವಿರುದ್ಧ ಅಮೋಘ ಗೆಲುವು ದಾಖಲಿಸಿದ ಭಾರತ ಸೆಮಿಫೈನಲ್‌ಗೆ ಮುನ್ನಡೆದಿದೆ. ಇದೀಗ ಮತ್ತೊಮ್ಮೆ ಇದೇ ಫಲಿತಾಂಶವನ್ನು ಭಾರತ ಪಡೆದಿದೆ.
ಕ್ವಾರ್ಟರ್ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್‌ಗೆ ಭಾರತ ಎಂಟ್ರಿ ಕೊಟ್ಟಿದೆ. ಈ ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಯಾವುದೇ ಗೋಲು ಗಳಿಸಿದೆ ಕೊನೆ ಗೊಳಿಸಿದವು.
18ನೇ ನಿಮಿಷದಲ್ಲಿ, ಭಾರತದ ಸ್ಟಾರ್ ಡಿಫೆಂಡರ್ ಅಮಿತ್ ರೋಹಿದಾಸ್ ರೆಡ್ ಕಾರ್ಡ್ ಪಡೆದರು. ಪರಿಣಾಮ ಭಾರತ 10 ಆಟಗಾರರೊಂದಿಗೆ ಸಂಪೂರ್ಣ ಪಂದ್ಯವನ್ನು ಆಡಬೇಕಾಯಿತು.
ಇಂತಹ ಪರಿಸ್ಥಿತಿಯಲ್ಲಿಯೂ ಅಬ್ಬರದ ಆಟವಾಡುವ ಮೂಲಕ ಭಾರತ 22ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಗಳಿಸಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಆಗ ಭಾರತ ಪಂದ್ಯದಲ್ಲಿ 1-0 ಮುನ್ನಡೆ ಸಾಧಿಸಿತು.
ಇದಾದ ನಂತರ 27ನೇ ನಿಮಿಷದಲ್ಲಿ ಇಂಗ್ಲೆಂಡ್ ಪರ ಲೀ ಮಾರ್ಟನ್ ಅದ್ಭುತ ಫೀಲ್ಡ್ ಗೋಲು ಬಾರಿಸಿ 1-1ರಿಂದ ಸಮಬಲ ಸಾಧಿಸಿದರು. ವಿರಾಮದ ವೇಳೆಗೆ ಸ್ಕೋರ್ 1-1ರಲ್ಲಿ ಸಮನಾಗಿ ಉಳಿಯಿತು.
ಪೆನಾಲ್ಟಿ ಶೂಟೌಟ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿದ ಭಾರತದ ಆಟಗಾರರು ಗೋಲುಗಳನ್ನು ಗಳಿಸಿದರು. ಹೀಗಾಗಿ ಭಾರತ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.
ಈ ಸಂದರ್ಭದಲ್ಲಿ ಹಾಕಿ ಇಂಡಿಯಾದ ಗೋಲ್ ಕೀಪರ್ ಶ್ರೀಜೇಶ್ ಇಂಗ್ಲೆಂಡ್ ಆಕ್ರಮಣವನ್ನು ಮೆಟ್ಟಿ ನಿಂತರು. ಅಲ್ಲದೆ ಪೆನಾಲ್ಟಿ ಶೂಟೌಟ್ ವೇಳೆ ಇಂಗ್ಲೆಂಡ್ ಹೊಡೆದ ಗೋಲುಗಳನ್ನು ತಡೆಯುವಲ್ಲಿ ಶ್ರೀಜೇಶ್ ಯಶಸ್ವಿಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications