Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಗೇಮ್ಸ್: ಭಾರತದ ಮಹಿಳಾ ಹಾಕಿ ತಂಡಕ್ಕೆ ದಾಖಲೆಯ ಜಯ

Indian womens hockey team registers 2nd biggest Asian Games win

ಜಕಾರ್ತಾ, ಆಗಸ್ಟ್ 21: ಭಾರತದ ಮಹಿಳಾ ಹಾಕಿ ತಂಡ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಹಾಕಿ ಪಂದ್ಯದಲ್ಲಿ ಕಜಕಿಸ್ತಾನ್ ವಿರುದ್ಧ ಭರ್ಜರಿ ಗೋಲ್ ಗಳೊಂದಿಗೆ ಗೆಲುವು ದಾಖಲಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದೆ. ಭಾರತ ತಂಡ ಈ ಪಂದ್ಯದಲ್ಲಿ ಕಜಕಿಸ್ತಾನವನ್ನು 21-0ಯಿಂದ ಸೋಲಿಸಿತು.

ಮಂಗಳವಾರ (ಆಗಸ್ಟ್ 21) ನಡೆದ ಬಿ ಪೂಲ್ ನ ಎರಡನೇ ಪಂದ್ಯದಲ್ಲಿ ಕಜಕಿಸ್ಥಾನವನ್ನು ಸೋಲಿಸುವ ಮೂಲಕ ಎರಡನೇ ಬಾರಿಗೆ ಹೆಚ್ಚು ಗೋಲ್ ಗಳನ್ನು ದಾಖಲಿಸಿ ತಂಡವೊಂದನ್ನು ಸೋಲಿಸಿದ ಕೀರ್ತಿಗೆ ಭಾರತ ಪಾತ್ರವಾಯಿತು. ಈ ಮೊದಲು ಆತಿಥೇಯ ಇಂಡೋನೇಷ್ಯಾವನ್ನು 8-0ಯಿಂದ ಸೋಲಿಸಿತ್ತು.

ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ

ವಿಶ್ವ ನಂ. 9 ಭಾರತದ ಮಹಿಳಾ ತಂಡ ಕಜಕೀಸ್ತಾನದ ಎದುರು ಪಂದ್ಯದ ಪ್ರಾರಂಭದಿಂದಲೂ ಪಾರಮ್ಯ ಮೆರೆಯಿತು. ಭಾರತದಿಂದ ಗುರ್ಜಿತ್ ಕೌರ್ 7, 36, 44, 52 ನಿಮಿಷದಲ್ಲಿ 4 ಗೋಲ್, ಲಾಲ್ಮೆಮಿಯಾಮಿ 9, 19, 30 ನಿಮಿಷಗಳಲ್ಲಿ 3 ಗೋಲ್, ನವನೀತ್ ಕೌರ್ 11, 12, 19 ನಿಮಿಷಗಳಲ್ಲಿ ಮೂರು ಗೋಲ್ ಬಾರಿಸಿದರು.

ಗೋಲ್ ಮಳೆ ಮತ್ತೆ ಮುಂದುವರೆಸಿದ ವಂದನಾ ಕಟಾರಿಯಾ 29, 37, 53ನೇ ನಿಮಿಷಗಳಲ್ಲಿ 3 ಗೋಲ್, ನವಜೋತ್ ಕೌರ್ 16, 54ನೇ ನಿಮಿದಲ್ಲಿ ಎರಡು ಗೋಲ್, ಲಿಲಿಮಾ ಮಿಂಜ್ 38, 44ನೇ ನಿಮಿದಲ್ಲಿ ಎರಡು ಗೋಲ್, ನೇಹಾ ಗೋಯಲ್ 10ನೇ ನಿಮಿಷದಲ್ಲಿ, ಉದಿತಾ 34ನೇ ನಿಮಿಷದಲ್ಲಿ, ದೀಪ್ ಗ್ರೇಸ್ 43ನೇ ನಿಮಿಷದಲ್ಲಿ ಮೋನಿಕಾ 55ನೇ ನಿಮಿಷದಲ್ಲಿ ತಲಾ ಒಂದೊಂದು ಗೋಲ್ ಸಿಡಿಸಿದರು.

Story first published: Tuesday, August 21, 2018, 22:36 [IST]
Other articles published on Aug 21, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+