National Womens Hockey Team: ರಾಷ್ಟ್ರೀಯ ಕೋಚಿಂಗ್ ಶಿಬಿರಕ್ಕೆ 33 ಸದಸ್ಯರ ಹಾಕಿ ತಂಡ ಪ್ರಕಟ
ಜೂನ್ 29 ಶನಿವಾರ, ಸಾಯಿ ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಮಹಿಳಾ ಕೋಚಿಂಗ್ ಶಿಬಿರದಲ್ಲಿ ತರಬೇತಿ ಪಡೆಯಲು 33 ಸದಸ್ಯರ ಭಾರತೀಯ ಮಹಿಳಾ ತಂಡವನ್ನು ಹಾಕಿ ಇಂಡಿಯಾ ಶನಿವಾರ ಪ್ರಕಟಿಸಿದೆ. ಜುಲೈ 1 ರಿಂದ ಆಗಸ್ಟ್ 31 ರವರೆಗೆ ಶಿಬಿರ ನಡೆಯಲಿದೆ.
ಲಂಡನ್ ಮತ್ತು ಆಂಟ್‌ವರ್ಪ್‌ನಲ್ಲಿ ತಮ್ಮ ಎಫ್‌ಐಎಚ್ ಹಾಕಿ ಪ್ರೊ ಲೀಗ್ 2023-24 ಋತುವನ್ನು ಮುಕ್ತಾಯಗೊಳಿಸಿದ ನಂತರ ಭಾರತ ಮಹಿಳಾ ಹಾಕಿ ತಂಡವು ಸ್ವಲ್ಪ ವಿರಾಮವನ್ನು ಪಡೆದುಕೊಂಡಿತು. ಇದೀಗ ರಾಷ್ಟ್ರೀಯ ಮಹಿಳಾ ಹಾಕಿ ತಂಡದ ಕೋಚಿಂಗ್ ಶಿಬಿರಕ್ಕೆ 33 ಸದಸ್ಯರ ತಂಡ ಪ್ರಕಟವಾಗಿದೆ.

ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಹರೇಂದ್ರ ಸಿಂಗ್ ಮಾರ್ಗದರ್ಶನದಲ್ಲಿ ನಾಯಕಿ ಸಲೀಮಾ ಟೆಟೆ ಮತ್ತು ಉಪನಾಯಕಿ ನವನೀತ್ ಕೌರ್ ನೇತೃತ್ವದ ತಂಡವು ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಅರ್ಜೆಂಟೀನಾ, ಬೆಲ್ಜಿಯಂ, ಜರ್ಮನಿ ಮತ್ತು ಗ್ರೇಟ್ ಬ್ರಿಟನ್ ವಿರುದ್ಧ ಅದ್ಭುತವಾಗಿ ಪೈಪೋಟಿ ನಡೆಸಿತ್ತು.
ಹಾಕಿ ಇಂಡಿಯಾದ ಪ್ರಕಟಿಸಿದ ತಂಡ
ಗೋಲ್‌ಕೀಪರ್‌ಗಳು: ಸವಿತಾ, ಬಿಚು ದೇವಿ ಖರಿಬಾಮ್, ಬನ್ಸಾರಿ ಸೋಲಂಕಿ ಮತ್ತು ಮಾಧುರಿ ಕಿಂಡೋ.
ಡಿಫೆಂಡರ್‌ಗಳು: ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ಮೋನಿಕಾ, ರೋಪಾನಿ ಕುಮಾರಿ, ಮಹಿಮಾ ಚೌಧರಿ, ಜ್ಯೋತಿ ಛತ್ರಿ ಮತ್ತು ಪ್ರೀತಿ ಕೋರ್.
ಮಿಡ್‌ಫೀಲ್ಡರ್‌ಗಳು: ಸಲೀಮಾ ಟೆಟೆ, ಮರೀನಾ ಲಾಲ್‌ಮಾಂಕಿ, ವೈಷ್ಣವಿ ವಿಟ್ಟಲ್ ಫಾಲ್ಕೆ, ನೇಹಾ, ಜ್ಯೋತಿ, ಎದುಲಾ ಜ್ಯೋತಿ, ಬಲ್ಜೀತ್ ಕೌರ್, ಮನೀಶಾ ಚೌಹಾನ್, ಅಕ್ಷತಾ ಅಬಾಸೊ ಧೇಕಲೆ, ಅಜ್ಮಿನಾ ಕುಜೂರ್.
ಫಾರ್ವಡ್‌ಗಳು: ಸುನೀಲಿತಾ ಟೊಪ್ಪೊ, ಮುಮ್ತಾಜ್ ಖಾನ್, ಲಾಲ್ರೆಮ್ಸಿಯಾಮಿ, ಸಂಗೀತಾ ಕುಮಾರಿ, ದೀಪಿಕಾ, ಶರ್ಮಿಳಾ ದೇವಿ, ನವನೀತ್ ಕೌರ್, ದೀಪಿಕಾ ಸೊರೆಂಗ್, ಪ್ರೀತಿ ದುಬೆ, ವಂದನಾ ಕಟಾರಿಯಾ ಮತ್ತು ರುತುಜಾ ದಾದಾಸೊ ಪಿಸಾಲ್.
ಭಾರತ ಮಹಿಳಾ ಹಾಕಿ ತಂಡದ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಕೋಚ್ ಹರೇಂದ್ರ ಸಿಂಗ್, 'ಪ್ರೊ ಲೀಗ್‌ನ ಯುರೋಪ್ ಲೀಗ್‌ಗಾಗಿ ನಾವು ಇತ್ತೀಚೆಗೆ ಆಂಟ್‌ವರ್ಪ್ ಮತ್ತು ಲಂಡನ್‌ಗೆ ಪ್ರಯಾಣಿಸಿದ್ದವು. ಫಲಿತಾಂಶಗಳು ನಮ್ಮ ಪರವಾಗಿಲ್ಲದಿದ್ದರೂ, ನಾವು ಬಲಿಷ್ಠ ತಂಡವಾಗಿ ಹೊರಬಂದಿದ್ದೇವೆ.
ಟೂರ್ನಿಯಲ್ಲಿ ಬಹಳಷ್ಟು ಕಲಿತಿದ್ದೇವೆ. ಅನೇಕ ಸಂದರ್ಭಗಳಲ್ಲಿ ನಾವು ಮುಂಚೂಣಿಯಲ್ಲಿದ್ದು, ನಿರಂತರವಾಗಿ ಗೋಲುಗಳನ್ನು ಗಳಿಸಲು ಪ್ರಯತ್ನಿಸಿದ್ದೇವೆ. ಭವಿಷ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಶಕ್ತಿಶಾಲಿಯಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications