ಜೂನಿಯರ್ ಹಾಕಿ ವಿಶ್ವಕಪ್ 2023: ಕೆನಡಾ ವಿರುದ್ಧ ಗೆದ್ದು ಕ್ವಾರ್ಟರ್-ಫೈನಲ್ ತಲುಪಿದ ಭಾರತ
ಕೌಲಾಲಂಪುರ್, ಡಿಸೆಂಬರ್ 10: ಶನಿವಾರ ಇಲ್ಲಿನ ರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2023ರ ಪುರುಷರ ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಕೆನಡಾ ತಂಡವನ್ನು 10-1 ಅಂತರದ ಗೋಲುಗಳಿಂದ ಸೋಲಿಸಿದ ಭಾರತ ತಂಡವು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಈ ಗೆಲುವು ಭಾರತ ತಂಡವನ್ನು ಸಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕೆ ಏರಿಸಿತು, ಇದು ಭಾರತಕ್ಕೆ ಅಂತಿಮ ಎಂಟು ಸ್ಥಾನಗಳಲ್ಲಿ ಸ್ಥಾನ ಪಡೆಯಲು ಇಷ್ಟು ಸಾಕಾಗಿತ್ತು.

ಭಾರತದ ಪರ ಆದಿತ್ಯ ಅರ್ಜುನ್ ಲಾಲಾಗೆ (8ನೇ, 43ನೇ), ರೋಹಿತ್ (12ನೇ, 55ನೇ), ಅಮನದೀಪ್ ಲಾಕ್ರಾ (23ನೇ, 52ನೇ), ವಿಷ್ಣುಕಾಂತ್ (42ನೇ), ರಾಜಿಂದರ್ (42ನೇ), ಕುಶ್ವಾಹ ಸೌರಭ್ ಆನಂದ್ (51ನೇ) ಮತ್ತು ಉತ್ತಮ್ ಸಿಂಗ್ (58ನೇ) ಗೋಲು ಬಾರಿಸಿದರು.
ಮತ್ತೊಂದೆಡೆ, ನಡಾ ಪರ ಜೂಡ್ ನಿಕೋಲ್ಸನ್ (20ನೇ ನಿಮಿಷದಲ್ಲಿ) ಏಕೈಕ ಸಮಾಧಾನಕರ ಗೋಲು ದಾಖಲಿಸಿದರು.
ಭಾರತ ಮೊದಲ ಕ್ವಾರ್ಟರ್‌ನಲ್ಲಿ ಆಕ್ರಮಣಕಾರಿ ಆರಂಭವನ್ನು ಮಾಡಿ, ಕೆನಡಾದ ರಕ್ಷಣಾ ವಿಭಾಗದ ಮೇಲೆ ಒತ್ತಡ ಹೇರಿತು. ಅತ್ಯುತ್ತಮ ಫೀಲ್ಡ್ ಗೋಲು ಗಳಿಸಿದ ಅರ್ಜುನ್ ಲಾಲಾಗೆ (8ನೇ ನಿಮಿಷದಲ್ಲಿ) ಮೂಲಕ ಭಾರತ ಆರಂಭಿಕ ಮುನ್ನಡೆ ಸಾಧಿಸಿತು.
ಭಾರತೀಯ ಸ್ಟ್ರೈಕರ್‌ಗಳು ಜಾಣ್ಮೆಯಿಂದ ಆಟವಾಡಿದರು ಮತ್ತು ಕೆನಡಾದ ಡಿಫೆಂಡರ್‌ಗಳು ಕೆಲವು ತಪ್ಪು ಮಾಡುವಂತೆ ಒತ್ತಾಯಿಸಿದರು. ಭಾರತವು ಪೆನಾಲ್ಟಿ ಕಾರ್ನರ್ ಗೋಲನ್ನು ಗಳಿಸುವುದರೊಂದಿಗೆ ಯೋಜನೆಯು ದೋಷರಹಿತವಾಗಿ ಕಾರ್ಯನಿರ್ವಹಿಸಿತು. ಇದನ್ನು ರೋಹಿತ್ (12ನೇ ನಿಮಿಷದಲ್ಲಿ) ಯಶಸ್ವಿಯಾಗಿ ಪರಿವರ್ತಿಸಿ ಮುನ್ನಡೆಯನ್ನು ದ್ವಿಗುಣಗೊಳಿಸಿದರು.
ಇನ್ನು ಎರಡನೇ ಕ್ವಾರ್ಟರ್‌ನಲ್ಲಿ ಕೆನಡಾದ ಜೂಡ್ ನಿಕೋಲ್ಸನ್ ತಂಡದ ಮೊದಲ ಹಾಗೂ ಏಕೈಕ ಗೋಲು ಬಾರಿಸುವ ಮೂಲಕ ಅಂತರವನ್ನು ತಗ್ಗಿಸಿದರು. ಆದಾಗ್ಯೂ, ಇದು ಅಷ್ಟೇನೂ ವ್ಯತ್ಯಾಸವನ್ನುಂಟು ಮಾಡಲಿಲ್ಲ.
ಭಾರತದ ಕೋಲ್ಟ್ಸ್ ಕೂಡಲೇ ತಮ್ಮ ಮುನ್ನಡೆಯನ್ನು ವಿಸ್ತರಿಸಿತು. ಲಾಕ್ರಾ (23ನೇ ನಿಮಿಷದಲ್ಲಿ) ಪೆನಾಲ್ಟಿ ಕಾರ್ನರ್ ಅನ್ನು ಯಶಸ್ವಿಯಾಗಿ ಪರಿವರ್ತಿಸಿದರು ಮತ್ತು ಮೊದಲಾರ್ಧದ ವೇಳೆಗೆ 3-1 ಅಂತರದ ಮುನ್ನಡೆ ಸಾಧಿಸಿದರು.
ಕೆನಡಾದ ಡಿಫೆಂಡರ್‌ಗಳ ಮೇಲೆ ನಿರಂತರ ಒತ್ತಡ ಹೇರಿದ ಭಾರತೀಯ ಆಟಗಾರರು ಮೂರನೇ ಕ್ವಾರ್ಟರ್‌ನಲ್ಲಿ ವಿಷ್ಣುಕಾಂತ್ (42ನೇ ನಿಮಿಷದಲ್ಲಿ) ಫೀಲ್ಡ್ ಗೋಲ್ ಮೂಲಕ ಗೋಲು ಗಳಿಸಿ ಮುನ್ನಡೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು.
ಭಾರತವು ರಾಜಿಂದರ್ (42ನೇ ನಿಮಿಷದಲ್ಲಿ) ಮೂಲಕ 5-1 ಅಂತರದಲ್ಲಿ ಮುನ್ನಡೆ ಸಾಧಿಸಿತು ಮತ್ತು ಕ್ವಾರ್ಟರ್‌ನ ಅಂತಿಮ ನಿಮಿಷಗಳಲ್ಲಿ ಲಾಲೇಜ್ (43ನೇ) ತನ್ನ ಎರಡನೇ ಗೋಲು ಗಳಿಸಿ ತಂಡದ ಮುನ್ನಡೆಯನ್ನು 6-1ಕ್ಕೆ ಹೆಚ್ಚಿಸಿದರು.
ಪಂದ್ಯ ಮುಕ್ತಾಯಕ್ಕೆ 15 ನಿಮಿಷಗಳು ಉಳಿದಿರುವಾಗ, ಭಾರತೀಯ ಹಾಕಿ ಆಟಗಾರರು ನಿರಂತರ ದಾಳಿಗಳನ್ನು ನಡೆಸಿ ಕೆನಡಾದ ಮೇಲೆ ಮತ್ತಷ್ಟು ಒತ್ತಡವನ್ನು ಹೇರಿತು. ಆನಂದ್ (51ನೇ ನಿಮಿಷದಲ್ಲಿ), ಲಾಕ್ರಾ (52ನೇ ನಿಮಿಷದಲ್ಲಿ) ಮತ್ತು ರೋಹಿತ್ (55ನೇ ನಿಮಿಷದಲ್ಲಿ) ಶೀಘ್ರವೇ ಮೂರು ಗೋಲುಗಳನ್ನು ಸೇರಿಸುವ ಮೂಲಕ ತಮ್ಮ ತಂಡವನ್ನು 9-1ರಲ್ಲಿ ಮುನ್ನಡೆಸಿದರು.
ಕೊನೆಯ ಒಂದೆರಡು ನಿಮಿಷಗಳ ಮೊದಲು ಭಾರತ ನಾಯಕ ಉತ್ತಮ್ ತಂಡದ ಹತ್ತನೇ ಗೋಲು ಹೊಡೆದರು. ಮಂಗಳವಾರ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ತಂಡ ಡಿ ಗುಂಪಿನ ಅಗ್ರಸ್ಥಾನಿ ವಿಜೇತ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications