Junior Women's Hockey World Cup: ಭಾರತಕ್ಕೆ 13-0 ಗೋಲುಗಳ ಭರ್ಜರಿ ಜಯ
ಜೂನಿಯರ್ ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅಮೋಘ ಪ್ರದರ್ಶನ ಮುಂದುವರೆಸಿದೆ. ಸೋಮವಾರ ನಡೆದ ಪಂದ್ಯದಲ್ಲಿ ಭಾರತ 13-0 ಗೋಲುಗಳಿಂದ ನಮಿಬಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಭಾರತದ ಹಿನಾ ಬಾನೋ, ಕನಿಕಾ ಸಿವಾಚ್ ತಲಾ ಹ್ಯಾಟ್ರಿಕ್ ಗಳಿಸಿದರು.
ಸೋಮವಾರ ನಡೆದ ಪಂದ್ಯದಲ್ಲಿ ಹಿನಾ (35, 35, 45ನೇ ನಿಮಿಷ) ಮತ್ತು ಕನಿಕಾ (12, 30, 45ನೇ ನಿಮಿಷ) ಹ್ಯಾಟ್ರಿಕ್ ಗೋಲು ಬಾರಿಸಿ ಜಯದಲ್ಲಿ ಮಿಂಚಿದರು. ಉಳಿದಂತೆ ಸಾಕ್ಷಿ ರಾಣಾ (10, 23ನೇ ನಿಮಿಷ) ಎರಡು ಗೋಲು ಗಳಿಸಿದರೆ, ಬಿನಿಮಾ ಧನ್ (14ನೇ ನಿಮಿಷ), ಸೋನಮ್ (14ನೇ ನಿಮಿಷ), ಸಾಕ್ಷಿ ಶುಕ್ಲಾ (27ನೇ ನಿಮಿಷ), ಇಶಿಕಾ (36ನೇ ನಿಮಿಷ), ಮತ್ತು ಮನೀಶಾ (60ನೇ ನಿಮಿಷ) ಗೋಲು ಬಾರಿಸಿ ಮಿಂಚಿದರು. ಈ ಜಯದೊಂದಿಗೆ ಭಾರತ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.

ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಟಗಾರ್ತಿಯರು ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸಿದರು. ಈ ಅವಧಿಯಲ್ಲಿ ಭಾರತದ ಆಟಗಾರ್ತಿಯರು ಚೆಂಡಿನ ಮೇಲೆ ಹಿಡಿತ ಸಾಧಿಸಿದರು. ಅಲ್ಲದೆ ಮೊದಲಾವಧಿಯಲ್ಲಿ 4 ಗೋಲು ಬಾರಿಸಿ ಮಿಂಚಿದರು. ಈ ಅವಧಿಯಲ್ಲಿ ನಮೀಬಿಯಾ ಗೋಲು ಬಾರಿಸುವ ಹೋರಾಟ ವ್ಯರ್ಥವಾಯಿತು. ಎರಡನೇ ಅವಧಿಯ ಆಟದಲ್ಲೂ ಭಾರತ 3 ಗೋಲು ಬಾರಿಸಿ ಮಿಂಚಿತು. ಪರಿಣಾಮ ಮುನ್ನಡೆಯನ್ನು 7-0ಗೆ ಏರಿಸಿಕೊಂಡಿತು. ಮೂರನೇ ಅವಧಿಯ ಆಟದಲ್ಲೂ ಭಾರತ 5 ಗೋಲು ಬಾರಿಸಿ ಮಿಂಚಿತು. ಅಲ್ಲದೆ ಕೊನೆಯ ಅವಧಿಯಲ್ಲೂ ಒಂದು ಗೋಲು ಬಾರಿಸಿ ಜಯದ ಅಂತರವನ್ನು ಹಿಗ್ಗಿಸಿತು. ಈ ಪಂದ್ಯದಲ್ಲಿ ನಮೀಬಿಯಾ ಕೊನೆಯವರೆಗೂ ಗೋಲು ಬಾರಿಸವ ಆಸೆ ಫಲಿಸಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications