ಭಾರತದ ಎರಡು ಗೋಡೆಗಳಿಗೆ ಸನ್ಮಾನಿಸಿದ ರಾಜ್ಯ ಸರ್ಕಾರ
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಉತ್ತಮ ಅರಂಭ ಪಡೆದಿತ್ತು. ಇದರೊಂದಿಗೆ ಸೆಮಿಫೈನಲ್ ಪ್ರವೇಶಿದ ಭಾರತ ತಂಡ ಬಂಗಾರ ಪದಕದ ಮೇಲೆ ಕಣ್ಣಿಟ್ಟಿತ್ತು. ಆದರೆ ಸೆಮಿಫೈನಲ್‌ನಲ್ಲಿ ಸೋಲು ಕಾಣಬೇಕಾಯಿತು.
ಇದಾದ ಬಳಿಕ ನಡೆದ ಕಂಚಿನ ಪದಕದ ಸ್ಪರ್ಧೆಯಲ್ಲಿ ಭಾರತ ತಂಡ ಗೆದ್ದು ಬೀಗಿತ್ತು. ಸತತ ಎರಡು ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದ ಇತಿಹಾಸವನ್ನು ಭಾರತ ನಿರ್ಮಿಸಿತ್ತು. ಈ ಗೆಲ್ಲುವಲ್ಲಿ ತಂಡದ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರು.

ಪ್ಯಾರಿಸ್ ಕ್ರೀಡಾಕೂಟ ಹಾಕಿಯಲ್ಲಿ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಅವರ ಉತ್ತಮ ರಕ್ಷಣಾ ತಂತ್ರಗಾರಿ ಮೆಚ್ಚಲ್ಲೇ ಬೇಕು. ತಮ್ಮ ಅದ್ಭುತ ಕೌಶಲ್ಯದಿಂದ ಎದುರಾಳಿ ತಂಡಗಳು ಗೋಲು ಹೊಡೆಯದಂತೆ ತಡೆಗೋಡೆಯಾಗಿದ್ದರು. ಇನ್ನೊಂದೆಡೆ ಡಿಫೆಂಡರ್ ಅಮಿತ್ ರೋಹಿದಾಸ್ ಕೂಡ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.
ಇದೀಗ ಈ ಇಬ್ಬರು ಆಟಗಾರರಿಗೆ ಆಯಾಯ ರಾಜ್ಯ ಸರ್ಕಾರಗಳು ಭಾರೀ ನಗದು ಬಹುಮಾನ ಘೋಷಣೆ ಮಾಡಿವೆ. ಭಾರತ ಹಾಕಿ ತಂಡಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ಪಿಆರ್ ಶ್ರೀಜೇಶ್ ಅವರಿಗೆ ಕೇರಳ ಸರ್ಕಾರ
2 ಕೋಟಿ ರೂಪಾಯಿ ಬಹುಮಾನ ನೀಡಿದೆ. ಇನ್ನೊಂದೆಡೆ ಅಮಿತ್ ರೋಹಿದಾಸ್ ಅವರಿಗೆ 4 ಕೋಟಿ ರೂ. ಗಳನ್ನು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಘೋಷಿಸಿದ್ದಾರೆ.
ಇದಲ್ಲದೆ, ಹಾಕಿ ತಂಡವನ್ನು ಪ್ರೋತ್ಸಾಹಿಸಲು ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಪ್ರತಿ ಆಟಗಾರನಿಗೆ 15 ಲಕ್ಷ ರೂ., ಪ್ರತಿ ಸಹಾಯಕ ಸಿಬ್ಬಂದಿಗೆ 10 ಲಕ್ಷ ರೂ. ಹಾಗು ಪಿಆರ್ ಶ್ರೀಜೇಶ್‌ಗೆ 50 ಲಕ್ಷ ರೂ. ನೀಡುವುದಾಗಿಯೂ ತಿಳಿಸಿದೆ.
ಈ ಕುರಿತು ಎರಡು ರಾಜ್ಯ ಸರ್ಕಾರಗಳ ಸಾಮಾಜಿಕ ಜಾಲತಾಣ ಟ್ವೀಟರ್ (ಎಕ್ಸ್)ನಲ್ಲಿ ಪೋಸ್ಟ್ ಮಾಡುವ ಮೂಲಕ ಭಾರೀ ನಗದು ಬಹುಮಾನ ಘೋಷಣೆ ಮಾಡಿರುವ ಮಾಹಿತಿ ಹಂಚಿಕೊಂಡಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications