ಕೊಡಗಿನಲ್ಲಿ ಹಾಕಿ ಸ್ಟಿಕ್ ಹಿಡಿಯದ ಕೈಗಳೇ ಇಲ್ಲ!
ಕೊಡಗಿನಲ್ಲಿ ಕೊಡವ ಕುಟುಂಬಗಳು ನಡೆಸುತ್ತಿರುವ ಹಾಕಿ ಪಂದ್ಯಾವಳಿ (ಪಂದ್ಯಾವಳಿ ಎನ್ನುವುದಕ್ಕಿಂತ ಉತ್ಸವ ಎನ್ನುವುದೇ ಸೂಕ್ತ) ಕೇವಲ ಜಿಲ್ಲೆ ಮಾತ್ರವಲ್ಲದೆ, ರಾಜ್ಯ, ರಾಷ್ಟ್ರದ ಗಡಿದಾಟಿ ವಿದೇಶಗಳಲ್ಲೂ ಗಮನಸೆಳೆಯುತ್ತಿರುವುದು ಸಂತಸದ ವಿಚಾರವಾಗಿದೆ.
ಒಂದು ಕುಟುಂಬ ಅಥವಾ ಸಮುದಾಯ ಪ್ರತಿವರ್ಷ ಅದ್ಧೂರಿಯಾಗಿ ಹಾಕಿ ಪಂದ್ಯಾವಳಿ ನಡೆಸುವುದನ್ನು ಕೊಡಗು ಬಿಟ್ಟರೆ ವಿಶ್ವದ ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ. ಹೀಗಾಗಿಯೇ ಕೊಡವ ಹಾಕಿ ಉತ್ಸವ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ. ಈ ಪುರಸ್ಕಾರವನ್ನು ಪಾಂಡಂಡ ಕುಟ್ಟಪ್ಪರವರು 2001ರಲ್ಲಿ ರಾಜ್ಯಸಭಾ ಸದಸ್ಯೆ ಶಬನಾ ಆಜ್ಮಿ ಅವರಿಂದ ಸ್ವೀಕರಿಸಿದರು. ಇಷ್ಟೇ ಮಾತ್ರವಲ್ಲದೆ, ಕೊಡವ ಪೀಪಲ್ ಆಫ್ ದಿ ಇಯರ್-2001 ಪ್ರಶಸ್ತಿಯು ಕುಟ್ಟಪ್ಪರವರ ಸಾಧನೆಗೆ ಸಂದಿದೆ.

ಇವತ್ತು ಕೊಡಗಿನಲ್ಲಿ ಹಾಕಿ ಎಷ್ಟು ಜನಪ್ರಿಯವಾಗಿದೆ ಎಂದರೆ ಹಿಂದೆ ಕೊಡಗಿನಲ್ಲಿ ಕೋವಿ ಹಿಡಿಯದ ಕೈಯಿಲ್ಲ ಎಂಬ ಮಾತಿತ್ತು. ಆದರೆ ಈಗ ಅದು ಬದಲಾಗಿ ಹಾಕಿ ಸ್ಟಿಕ್ ಹಿಡಿಯದ ಕೈಗಳಿಲ್ಲ, ಮಾತ್ರವಲ್ಲ ಮನೆಯೂ ಇಲ್ಲ ಎಂಬುವಷ್ಟರ ಮಟ್ಟಿಗೆ ಜನಪ್ರಿಯವಾಗುತ್ತಿರುವುದು ಹಾಗೂ ಇಲ್ಲಿನ ಕ್ರೀಡಾಪಟುಗಳು ಭಾರತೀಯ ಹಾಕಿ ತಂಡದಲ್ಲಿ ಮಿಂಚುತ್ತಿರುವುದನ್ನು ನೋಡಿದರೆ ಕೊಡಗಿನಲ್ಲಿ ಹಾಕಿಗೆ ನೀಡಲಾಗುತ್ತಿರುವ ಪ್ರೋತ್ಸಾಹ ಎಂತಹದ್ದು ಎಂಬುವುದು ಅರಿವಾಗದಿರದು.
ಇನ್ನು ಹಾಕಿ ಪಂದ್ಯಾವಳಿ ನಡೆಯುವ ಅಷ್ಟು ದಿನಗಳ ಸಂದರ್ಭವೂ ಆಟದೊಂದಿಗೆ ಕೊಡವ ಸಂಸ್ಕೃತಿ, ಸಂಪ್ರದಾಯವನ್ನು ಬಿಂಬಿಸುವ ಹಾಡು, ಜನಪದ ನೃತ್ಯವನ್ನು ಪ್ರೋತ್ಸಾಹಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದು ಹಾಕಿ ಉತ್ಸವದ ಮತ್ತೊಂದು ವಿಶೇಷತೆಯಾಗಿದೆ.
ಒಂದೆಡೆ ನಮ್ಮ ರಾಷ್ಟ್ರೀಯ ಕ್ರೀಡೆ ಹಾಕಿಗೆ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ನಿರಾಶೆಯ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ ಕೊಡವ ಕುಟುಂಬಗಳು ಕೊಡಗಿನಲ್ಲಿ ಹಾಕಿ ಪಂದ್ಯಾವಳಿಗೆ ಉತ್ಸವದ ಮೆರಗು ನೀಡುತ್ತಾ ಕಳೆದ 18 ವರ್ಷಗಳಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಾಕಿನಮ್ಮೆ (ಹಾಕಿ ಉತ್ಸವ)ಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications