For Quick Alerts
ALLOW NOTIFICATIONS  
For Daily Alerts

ವಿಂಟರ್ ಗೇಮ್ಸ್: ಐಸ್ ಹಾಕಿಯಲ್ಲಿ ಲಡಾಖ್ ಪರ ಹ್ಯಾಟ್ರಿಕ್ ಗೋಲು ಸಿಡಿಸಿ ಇತಿಹಾಸ ಬರೆದ ಪದ್ಮಾ

ನವದೆಹಲಿ:ಚಿಕ್ಕ ವಯಸ್ಸಿನಲ್ಲಿ ಈ ಆಟಗಾರ್ತಿ ಕ್ರೀಡೆಯನ್ನು ಆಡಲು ಆರಂಭಿಸಿದಾಗ, ಇವರಿಗೆ ಆರಂಭದಲ್ಲಿ ಮಾರ್ಗದರ್ಶನ ಇರಲಿಲ್ಲ. ಪುರುಷ ಆಟಗಾರರಿಂದ ದೊಡ್ಡ ಗಾತ್ರದ ಸ್ಕೇಟ್ಸ್‌ ಹಾಗೂ ಸ್ಟಿಕ್‌ಗಳನ್ನು ಎರವಲು ಪಡೆದು ಅಭ್ಯಾಸ ಮಾಡಿದ ಪ್ರತಿಭೆ. ಪದ್ಮಾ ಚೋರೋಲ್ ಮೂಲದವರಾಗಿದ್ದು, ಐಸ್ ಹಾಕಿ ಕ್ರಿಡೆಯಲ್ಲಿ ಹೆಸರು ಮಾಡಿದ ಆಟಗಾರ್ತಿ.

2016ರಲ್ಲಿ ಭಾರತದ ಮೊದಲ ಮಹಿಳಾ ರಾಷ್ಟ್ರೀಯ ತಂಡ ಆಯ್ಕೆಯಾದಾಗ ಈ ತಂಡದಲ್ಲಿ ಪದ್ಮಾ ಸ್ಥಾನ ಪಡೆಯುತ್ತಾರೆ. ಭಾರತದ ತಂಡ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತೈವಾನ್ ವಿರುದ್ಧ ಆಡಿದಾಗ ಸಾಲು ಸಾಲು ಸವಾಲುಗಳು ಎದುರಾದವು. ಭಾರತ ತಂಡ ಕೃತಕ ಮಂಜಿನ ಮೇಲೆ ಆಡುವುದು ಕಷ್ಟವಾಗಿತ್ತು. ಹಂತ ಹಂತವಾಗಿ ಆಡುವ ಕಲೆಯನ್ನು ಕರಗತ ಮಾಡಿಕೊಂಡ ಭಾರತ ತಂಡ 2019ರಲ್ಲಿ ಐಐಎಚ್‌ಎಫ್ ವುಮೆನ್ಸ್ ಚಾಲೆಂಜ್ ಕಪ್ ಆಫ್ ಏಷ್ಯಾ'ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿತು.

Padma Chorol From Borrowed Gear to Leading Ladakh s Ice Hockey Charge at Khelo India Winter Games

ಪ್ರಸ್ತುತ ಲೇಹ್‌ನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನಲ್ಲಿ ಪದ್ಮಾ ಲಡಾಖ್ ತಂಡದ ಉಪನಾಯಕಿಯಾಗಿದ್ದಾರೆ. ತೆಲಂಗಾಣ ವಿರುದ್ಧದ ಪಂದ್ಯದಲ್ಲಿ ಪದ್ಮಾ ಭರ್ಜರಿ ಪ್ರದರ್ಶನ ನೀಡಿ ಹ್ಯಾಟ್ರಿಕ್ ಗೋಲು ಸಿಡಿಸಿದರು. ಈ ಕ್ರೀಡಾಕೂಟವು ನಮಗೆ ತುಂಬಾನೆ ಮಹತ್ವದಾಗಿದೆ. ರಾಷ್ಟ್ರೀಯ ತಂಡದ ಪರ ಆಡುವಾಗ ಇಲ್ಲಿ ಆಡಿದ ಅನುಭವ ಕೈ ಹಿಡಿಯುತ್ತದೆ. ಈ ಕ್ರೀಡಾಕೂಟವು ಭಾರತೀಯ ಆಟಗಾರರಿಗೆ ಹೆಚ್ಚಿನ ಮಾನ್ಯತೆ ಮತ್ತು ಅನುಭವ ನೀಡುತ್ತಿದೆ ಎಂದು ಪದ್ಮಾ ಅವರು ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಪದ್ಮಾ, ನಾನು ತುಂಬಾ ದೊಡ್ಡದಾದ ಸ್ಕೇಟ್‌ಗಳು ಮತ್ತು ಅಗತ್ಯಕ್ಕಿಂತ ಉದ್ದವಾದ ಸ್ಟಿಕ್‌ಗಳೊಂದಿಗೆ ಆಡುತ್ತಿದ್ದೆ. ಮೊದಲ ವರ್ಷ ನಮಗೆಲ್ಲರಿಗೂ ತುಂಬಾ ಕಷ್ಟಕರವಾಗಿತ್ತು. ಈ ಅಡೆತಡೆಗಳ ಹೊರತಾಗಿಯೂ, ತಂಡವು ಪ್ರತಿ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿತು. ಅಲ್ಲದೆ ಪ್ರತಿ ಪಂದ್ಯದಲ್ಲೂ ಕಲಿಕೆ ತಂಡದ್ದಾಗಿತ್ತು ಎಂದು ಪದ್ಮಾ ಚೋರೋಲ್ ತಿಳಿಸಿದ್ದಾರೆ. ಇನ್ನು ವೃತ್ತಿಪರ ಸ್ಕೇಟ್ಸ್‌ಗಳ ಬೆಲೆ ಸುಮಾರು ₹1 ಲಕ್ಷ ಇರುತ್ತದೆ. ಒಂದು ಸ್ಟಿಕ್ ಬೆಲೆ ₹20,000 ದಿಂದ ₹25,000 ವರೆಗೆ ಆಗಿರುತ್ತದೆ. ಈ ಸ್ಟಿಕ್‌ಗಳು ಸುಲಭವಾಗಿ ಮುರಿಯುತ್ತವೆ. ಈಗಾಗಲೇ ನಾಲ್ಕೈದು ಸ್ಟಿಕ್‌ಗಳನ್ನು ತಾವು ಬದಲಿಸಿದ್ದಾಗಿ ಪದ್ಮಾ ನೆನಪಿಸಿಕೊಂಡಿದ್ದಾರೆ.

Padma Chorol From Borrowed Gear to Leading Ladakh s Ice Hockey Charge at Khelo India Winter Games

ಮೊದಲು ಐಸ್‌ ಹಾಕಿಯನ್ನು ಭಾರತೀಯ ಮಹಿಳಾ ಆಟಗಾರ್ತಿಯರು ಆಡುವುದು ಅಪರೂಪವಾಗಿತ್ತು. ಆದರೆ ಈಗ ಲಡಾಖ್ ಮಹಿಳಾ ತಂಡ ಸರ್ಕಾರ ಹಾಗೂ ಐಸ್ ಹಾಕಿ ಫೌಂಡೇಶನ್ ಬೆಂಬಲದಿಂದಾಗ ಅನೇಕ ಹೆಣ್ಣು ಮಕ್ಕಳು ಈ ಕ್ರೀಡೆಯತ್ತ ಮುಖ ಮಾಡುವಂತೆ ಆಗಿದೆ. ಈ ಕ್ರೀಡೆಯ ವೃತ್ತಿಪರ ಉಪಕರಣಗಳು ದುಬಾರಿಯಾಗಿದ್ದರೂ, ಸಹ ಈಗ ಪರಿಸ್ಥಿತಿ ಬದಲಾಗಿದೆ ಎಂದು ಪದ್ಮಾ ತಿಳಿಸಿದ್ದಾರೆ.

ತಂಡದ ಗುರಿ

2027ರಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ ಶಿಪ್‌ಗೆ ಅರ್ಹತೆ ಪಡೆಯುವುದು ಪದ್ಮಾ ಚೋರೋಲ್ ಹಾಗೂ ಭಾರತದ ತಂಡದ ಮುಖ್ಯ ಗುರಿಯಾಗಿದೆ. ದೇಶದ ಜನರಿಂದ ಸಿಗುತ್ತಿರುವ ಬೆಂಬಲವು ತಮಗೆ ಹೆಚ್ಚಿನ ಸ್ಪೂರ್ತಿ ನೀಡುತ್ತಿದೆ ಎಂದು ಪದ್ಮಾ ಹೇಳಿದ್ದಾರೆ.

Story first published: Wednesday, January 21, 2026, 22:30 [IST]
Other articles published on Jan 21, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+