Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪುರುಷರ ಹಾಕಿ: ವಿಶ್ವ ಚಾಂಪಿಯನ್ ಬೆಲ್ಜಿಯಂ ಸೋಲಿಸಿದ ಭಾರತ

Mandeep Singh, Akashdeep Singh on target as India beat World Champions Belgium

ಆಂಟ್‌ವರ್ಪ್, ಸೆಪ್ಟೆಂಬರ್ 27: ಬೆಲ್ಜಿಂಯಂನ ಆಂಟ್‌ವರ್ಪೆಯಲ್ಲಿ ಗುರುವಾರ (ಸೆಪ್ಟೆಂಬರ್ 26) ನಡೆದ ಬೆಲ್ಜಿಯಂ-ಭಾರತ ನಡುವಿನ ಹಾಕಿ ಪಂದ್ಯದಲ್ಲಿ ಭಾರತ 2-0ಯ ಜಯ ಸಾಧಿಸಿದೆ. 3 ಪಂದ್ಯಗಳ ಹಾಕಿ ಸರಣಿಯ ಆರಂಭಿಕ ಪಂದ್ಯದಲ್ಲಿ ಗೆದ್ದಿರುವ ಭಾರತ ಸರಣಿಯಲ್ಲಿ 1-0ಯ ಮುನ್ನಡೆಯಲ್ಲಿದೆ.

ಮನ್ದೀಪ್ ಸಿಂಗ್ ಮತ್ತು ಆಕಾಶ್‌ದೀಪ್‌ ಸಿಂಗ್ ಚತುರ ಆಟದಿಂದಾಗಿ ಭಾರತ ಸುಲಭ ಗೆಲುವು ಪಡೆಯಿತು. ಎರಡೂ ಗೋಲ್‌ಗಳು ದ್ವಿತೀಯಾರ್ಧದಲ್ಲಿ ದಾಖಲಾಯ್ತು. ಭಾರತ ಪಂದ್ಯದ ಮೊದಲ ಕ್ವಾರ್ಟರ್‌ನಲ್ಲೇ ಗೋಲ್ ದಾಖಲಿಸುವುದರಿಲ್ಲಿತ್ತು. ಆದರೆ ಎದುರಾಳಿ ತಂಡದ ಲೋಯಿಕ್ ವ್ಯಾನ್ ಡೋರೆನ್ ಗೋಲ್ ತಡೆದರು.

ಪಂದ್ಯದ ದ್ವಿತೀಯರ್ಧದಲ್ಲಿ ಅಂದರೆ 39ನೇ ನಿಮಿಷದಲ್ಲಿ ಮನ್‌ದೀಪ್‌ ಸಿಂಗ್ ಮೊದಲ ಗೋಲ್ ಬಾರಿಸಿ ಖಾತೆ ತೆಗೆದರು. ಅದಾಗಿ ಆಟದ ಕೊನೇ ಕ್ಷಣದಲ್ಲಿ ಅಂದರೆ 54ನೇ ನಿಮಿಷದಲ್ಲಿ ಆಕಾಶ್‌ದೀಪ್ ದ್ವಿತೀಯ ಗೋಲ್‌ ಬಾರಿಸಿ ಗೆಲುವಿನ ಅಂತರ ಹೆಚ್ಚಿಸಿದರು.

Story first published: Friday, September 27, 2019, 0:01 [IST]
Other articles published on Sep 27, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+