Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹ್ಯಾಟ್ರಿಕ್ ಜಯದೊಂದಿಗೆ ಸೆಮಿಫೈನಲ್ ತಲುಪಿದ ಹಾಕಿ ತಂಡ, ಪದಕದ ನಿರೀಕ್ಷೆ

Mens hockey team entered semi finals in Asian Games 2018

ಜಖಾರ್ತಾ, ಆಗಸ್ಟ್ 25: ಏಷಿಯನ್ ಗೇಮ್ಸ್‌ 2018ರಲ್ಲಿ ಪುರುಷರ ಹಾಕಿ ತಂಡವು ಜಪಾನ್ ವಿರುದ್ಧ 8-0 ಗೋಲುಗಳ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.

ಭಾರತ ಹಾಕಿ ತಂಡಕ್ಕೆ ಈ ಗೆಲುವು ಟೂರ್ನಿಯ ಸತತ ಮೂರನೇ ಗೆಲುವಾಗಿದ್ದು, ಈ ಮೊದಲು ಇಂಡೋನೇಷ್ಯಾವನ್ನು 17-0 ಅಂತರದಿಂದ ಹಾಗೂ ಹಾಂಕಾಂಗ್‌ ಅನ್ನು 26-0 ಭಾರಿ ಅಂತರದಿಂದ ಗೆದ್ದಿತ್ತು.

ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ

ಜಪಾನ್ ತಂಡದ ವಿರುದ್ಧ ಆರು ಮಂದಿ ಭಾರತದ ಆಟಗಾರರು 8 ಗೋಲುಗಳನ್ನು ಭಾರಿಸಿದರು. ರೂಪಿಂದರ್ ಸಿಂಗ್ 17 ಮತ್ತು 37ನೇ ನಿಮಿಷದಲ್ಲಿ, ಮನವಿಂದರ್ ಸಿಂಗ್ 32 ಮತ್ತು 56ನೇ ನಿಮಿಷದಲ್ಲಿ, ಎಸ್‌.ವಿ.ಸುನಿಲ್ 7 ನೇ ನಿಮಿಷದಲ್ಲಿ, ದಿಲ್‌ಪ್ರೀತಿ ಸಿಂಗ್ 12ನೇ ನಿಮಿಷದಲ್ಲಿ, ಆಕಾಶ್ ದೀಪ್ ಸಿಂಗ್ 12ನೇ ನಿಮಿಷದಲ್ಲಿ, ವಿವೇಕ್ ಸಾಗರ್ ಪ್ರಸಾದ್ 47ನೇ ನಿಮಿಷದಲ್ಲಿ ಗೋಲು ಭಾರಿಸಿದರು.

ಈ ಗೆಲುವಿನ ಮೂಲಕ ಭಾರತ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸಿದ್ದು ಅಲ್ಲಿ ಅದು ದಕ್ಷಿಣ ಕೊರಿಯಾವನ್ನು ಎದಿರಸಲಿದೆ. ಸೆಮಿಫೈನಲ್‌ನಲ್ಲೂ ಗೆಲ್ಲುವ ವಿಶ್ವಾಸ ಭಾರತಕ್ಕೆ ಇದ್ದು ಚಿನ್ನದ ಪದಕಕ್ಕೆ ಮುತ್ತಿಡುವ ನಿರೀಕ್ಷೆಯಲ್ಲಿದೆ.

Story first published: Saturday, August 25, 2018, 10:37 [IST]
Other articles published on Aug 25, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+