For Quick Alerts
ALLOW NOTIFICATIONS  
For Daily Alerts

ರಾಷ್ಟ್ರೀಯ ರೋಲರ್ ಹಾಕಿ ಸ್ಪರ್ಧೆ; ಕರ್ನಾಟಕ ಬಾಲಕಿಯರ ತಂಡಕ್ಕೆ ಒಂದು ಬೆಳ್ಳಿ, ಎರಡು ಕಂಚು!

ಚಂಡಿಗಢದಲ್ಲಿ ನಡೆದ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್‌ಶಿಪ್‌ನ‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ಮಾಡಿದೆ.

ರಾಷ್ಟ್ರೀಯ ರೋಲರ್ ಹಾಕಿ ಸ್ಪರ್ಧೆಯಲ್ಲಿ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕ ಗಳಿಸುವ ಮೂಲಕ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಉತ್ತಮ ತಂಡವಾಗಿ ಹೊರಹೊಮ್ಮಿದೆ.

National Roller Hockey Competition; Karnataka Wins One Silver, 2 Bronze Medals!

ಕೆಡೆಟ್ ಬಾಲಕಿಯರ ವಿಭಾಗದಲ್ಲಿ (11 ವರ್ಷದೊಳಗಿನ) ಬೆಳ್ಳಿ ಪದಕ ಕೊರಳಿಗೇರಿಸಿಕೊಳ್ಳುವ ಮೂಲಕ ಕರ್ನಾಟಕ ತಂಡದ ಆಟಗಾರ್ತಿಯರು ಸಂಭ್ರಮಿಸಿದ್ದಾರೆ. ಕೈಗಾದ ಆದ್ಯಾ ನಾಯ್ಕ ನಾಯಕತ್ವದ ತಂಡ ಕರ್ನಾಟಕ ತಂಡವು ಹರ್ಯಾಣ ತಂಡದ ವಿರುದ್ಧ 6-0, ಆಂಧ್ರಪ್ರದೇಶ ವಿರುದ್ಧ 3-0 ಅಂತರದಿಂದ ಗೆಲುವು ದಾಖಲಿಸಿತು.

ನಂತರ ಕೇರಳ ವಿರುದ್ಧ 2-0, ತಮಿಳುನಾಡು ಎದುರು 4-0 ಅಂತರದಿಂದ ಗೆಲುವು ಸಾಧಿಸಿತ್ತು. ಬಳಿಕ ಕೇರಳ ತಂಡದ ಜೊತೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ 3-1 ನಂತರದಲ್ಲಿ ಗೆಲುವಿನ ಕೇಕೆ ಹಾಕಿತ್ತು. ಬಳಿಕ ಪಂಜಾಬ್ ಜೊತೆ ನಡೆದ ಫೈನಲ್ ಪಂದ್ಯದಲ್ಲಿ 1-2 ಅಂತರ ಗೋಲುಗಳಿಂದ ಪರಾಭವಗೊಂಡು ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದೆ.

National Roller Hockey Competition; Karnataka Wins One Silver, 2 Bronze Medals!

ಕರ್ನಾಟಕ ಬಾಲಕಿಯರ ತಂಡದಲ್ಲಿ ಆದ್ಯಾ ನಾಯ್ಕ ಕೈಗಾ (ನಾಯಕಿ), ಭವನೀತ ತುಮಕೂರು, ದೇದಿಪ್ಯ ತುಮಕೂರು, ಅಕ್ಷರಾ ಶಿರಸಿ, ಐಶ್ವರ್ಯ ತುಮಕೂರು, ಕವನ ತುಮಕೂರು, ಸನ್ನಿಧಿ ತುಮಕೂರು, ಅಹನಾ ನಾಯ್ಕ ಕಾರವಾರ, ಕುಶಾಲ ಬೆಂಗಳೂರು, ಅನಯಾ ಕಾರವಾರ‌ ಇವರು ಪ್ರತಿನಿಧಿಸಿದ್ದರು.

ಕೆಡೆಟ್ ಮಿಕ್ಸಡ್ ವಿಭಾಗದಲ್ಲಿ ಆರಂಭದ ಪಂದ್ಯ ತಮಿಳುನಾಡು ಜೊತೆ ಡ್ರಾನಲ್ಲಿ ಕೊನೆಗೊಂಡಿತು. ಆಂಧ್ರಪ್ರದೇಶ, ಕೇರಳ, ಎದುರು ಗೆದ್ದು ಸೆಮಿಫೈನಲ್ ತಲುಪಿತ್ತು. ಬಳಿಕ ಮತ್ತೆ ಎದುರಾದ ಕೇರಳ ಜೊತೆಗಿನ ಸೆಮಿಫೈನಲ್ ಪಂದ್ಯದಲ್ಲಿ ಪರಾಭವಗೊಂಡಿತ್ತು.

ನಂತರ ಅಂಕಗಳ ಆಧಾರದ ಮೇಲೆ ಮೂರನೇ ಸ್ಥಾನಕ್ಕಾಗಿ ಆಂಧ್ರಪ್ರದೇಶ ತಂಡದೊಂದಿಗೆ ನಡೆದ ಪಂದ್ಯದಲ್ಲಿ 1-3 ಅಂಕ ಗಳಿಸಿ ಕಂಚಿನ ಪದಕಕ್ಕಾಗಿ ತೃಪ್ತಿಪಟ್ಟುಕೊಂಡಿತ್ತು.

ತಂಡದಲ್ಲಿ ಆದ್ಯಾ ನಾಯ್ಕ ಕೈಗಾ(ಕ್ಯಾಪ್ಟನ್), ಭವನೀತ ತುಮಕೂರು, ದೇದಿಪ್ಯ ತುಮಕೂರು, ಅಕ್ಷರಾ ಶಿರಸಿ, ರಾಜಗುರು ಶಿರಸಿ, ಸಾಕಿಬ್ ಕೈಗಾ, ಅಯ್ಯನ್ ಕೈಗಾ, ಶ್ರೀಶ ಶೇಷಗಿರಿ ಮೊಗೇರ ಕಾರವಾರ, ಐಶ್ವರ್ಯ ತುಮಕೂರು, ದಕ್ಷತ್ ತುಮಕೂರು ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.

ಸಬ್ ಜ್ಯೂನಿಯರ್ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವು ತಮಿಳುನಾಡು, ತೆಲಂಗಾಣ, ಜಮ್ಮು ಕಾಶ್ಮೀರ, ಆಂದ್ರಪ್ರದೇಶ ತಂಡವನ್ನು ಮಣಿಸಿತ್ತು. ನಂತರ ಚಂಡೀಗಢ ಜೊತೆಗೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೋಲನಭವಿಸಿತು. ಬಳಿಕ ಮೂರನೇ ಸ್ಥಾನಕ್ಕಾಗಿ ಕೇರಳ ತಂಡದ ಜೊತೆಗೆ ನಡೆದ ಹಣಾಹಣಿಯಲ್ಲಿ 1-3 ಪಾಯಿಂಟ್‌ಗಳಿಂದ ಪರಾಭವಗೊಂಡಿದೆ.

ತಂಡದಲ್ಲಿ ಮಾನ್ಯತಾ ಶಿರಸಿ (ನಾಯಕಿ), ಮಾನ್ಯ ಬಿಎಸ್ ಶಿರಸಿ, ಅಪೂರ್ವ ಕಾರವಾರ, ಕೀರ್ತಿ ಮುಂಡಗೋಡು, ಮಾನಸಿ ಬೆಳಗಾವಿ, ಆರಾಧ್ಯ ಮೆನನ್ ಕಾರವಾರ, ಯಶಸ್ವಿನಿ ಬೆಂಗಳೂರು, ಚಿನ್ಮಯಿ ಬೆಂಗಳೂರು, ಆರ್ಯ ಮಂಜುನಾಥ ಬೆಂಗಳೂರು,

ಒಟ್ಟಾರೆ ಟೂರ್ನಿಯಲ್ಲಿ ಕೈಗಾದ ಆದ್ಯಾ ನಾಯ್ಕ, ರಾಜಗುರು, ಭುವನೀತ, ಮಾನ್ಯತಾ, ಅಪೂರ್ವ ಕರ್ನಾಟಕ ತಂಡದ ಪರವಾಗಿ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಕರ್ನಾಟಕ ತಂಡದ ಆಟಗಾರರಿಗೆ ದಿಲೀಪ ಹಣಬರ ತರಬೇತಿ ನೀಡಿದ್ದರು. ಬಾಲಕಿಯರ ಸಾಧನೆಗೆ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಅಭಿನಂದನೆ ಸಲ್ಲಿಸಿದೆ.

Story first published: Saturday, December 16, 2023, 13:21 [IST]
Other articles published on Dec 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+