ನವೆಂಬರ್-ಡಿಸೆಂಬರ್‌ನಲ್ಲಿ ಹಾಕಿ ಜೂನಿಯರ್ ವಿಶ್ವಕಪ್‌ಗೆ ಒಡಿಶಾ ಆತಿಥ್ಯ

ನವದೆಹಲಿ: ಪುರುಷರ ಜೂನಿಯರ್ ವಿಭಾಗದ ಹಾಕಿ ವಿಶ್ವಕಪ್ ಟೂರ್ನಿಗೆ ಒಡಿಶಾ ಆತಿಥ್ಯ ವಹಿಸಿಕೊಳ್ಳಲಿದೆ. ಈ ವಿಶ್ವಕಪ್ ಟೂರ್ನಿ ಭುವನೇಶ್ವರ್‌ನ ಕಾಳಿಂಗ ಸ್ಟೇಡಿಯಂನಲ್ಲಿ ನವೆಂಬರ್ 24ರಿಂದ ಡಿಸೆಂಬರ್ 5ರ ವರೆಗೆ ನಡೆಯಲಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ವಿಚಾರವನ್ನು ಗುರುವಾರ (ಸೆಪ್ಟೆಂಬರ್ 23) ಘೋಷಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನವೀನ್ ಪಟ್ನಾಯಕ್, ಎರಡು ತಿಂಗಳ ಬಳಿಕ ನಡೆಯಲಿರುವ ಪುರುಷರ ಜೂನಿಯರ್ ಹಾಕಿ ವಿಶ್ವಕಪ್‌ಗೆ ಸರ್ಕಾರದ ಮೂಲಕ ಬೆಂಬಲ ನೀಡುವಂತೆ ಹಾಕಿ ಇಂಡಿಯಾ ಒಡಿಶಾ ಸರ್ಕಾರವನ್ನು ಕೇಳಿಕೊಂಡಿದ್ದಾಗಿ ಹೇಳಿದ್ದಾರೆ.
"ಇಂಥ ದೊಡ್ಡ ಮಟ್ಟದ ಟೂರ್ನಿ ಆಯೋಜಿಸಲು ಸಣ್ಣ ಸೂಚನೆ ನೀಡಲಾಗಿದೆ. ಅದರಲ್ಲೂ ಮುಖ್ಯವಾಗಿ ಇಂಥ ಕೋವಿಡ್ ಪಿಡುಗಿನ ಸಂದರ್ಭದಲ್ಲಿ ಟೂರ್ನಿ ನಡೆಸೋದು ಸವಾಲಿನ ಸಂಗತಿ. ಆದರೆ ದೇಶದ ಪ್ರತಿಷ್ಠೆಯನ್ನು ಕಾಯುವುದಕ್ಕೋಸ್ಕರ ನಾವು ಟೂರ್ನಿ ಆಯೋಜಿಸುವುದಾಗಿ ಸುಲಭವಾಗಿ ಒಪ್ಪಿಕೊಂಡೆವು," ಎಂದು ಪಟ್ನಾಯಕ್ ತಿಳಿಸಿದ್ದಾರೆ.
"ಹಾಲಿ ಚಾಂಪಿಯನ್ಸ್ ಆಗಿರುವ ಭಾರತದ ಹಾಕಿ ತಂಡ ಇದರ ಸದುಪಯೋಗವನ್ನು ಪಡೆದುಕೊಳ್ಳಲಿದೆ. ತವರು ನೆಲದ ಪರಿಸ್ಥಿತಿಯ ಅನುಕೂಲವನ್ನು ಬಳಸಿಕೊಂಡು ಮತ್ತೆ ಭಾರತ ಗೆಲ್ಲುವಂತಾಗಬೇಕು," ಎಂದು ಪಟ್ನಾಯಕ್ ಹಾರೈಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications