ಒಲಿಂಪಿಕ್ಸ್ ಪುರುಷರ ಹಾಕಿ: ಭಾರತ vs ಬೆಲ್ಜಿಯಂ ಸೆಮಿಫೈನಲ್ ಪಂದ್ಯದ ಸಮಯ, ದಿನಾಂಕ

ಟೋಕಿಯೋ, ಆಗಸ್ಟ್ 2: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತದ ಪುರುಷರ ಹಾಗೂ ಮಹಿಳೆಯರ ತಂಡ ಸೆಮಿಫೈನಲ್‌ಗೆ ಪ್ರವೇಶವನ್ನು ಪಡೆದಿದೆ. ಭಾರತದ ಪುರುಷರ ತಂಡ ಬ್ರಿಟನ್ ತಂಡವನ್ನು ಕ್ವಾರ್ಟರ್‌ಫೈನಲ್‌ನಲ್ಲಿ 3-1 ಗೋಲುಗಳ ಅಂತರದಿಂದ ಭರ್ಜರಿಯಾಗಿ ಮಣಿಸಿದೆ. ಈ ಮೂಲಕ 41 ವರ್ಷಗಳ ಬಳಿಕ ಭಾರತದ ಪುರುಷರ ತಂಡ ಸೆಮಿಫೈನಲ್‌ಗೆ ಪ್ರವೇಶಿಸಿದ ಸಾಧನೆ ಮಾಡಿದೆ.
ಭಾರತ ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ತಂಡದ ವಿರುದ್ಧ ಹೋರಾಟವನ್ನು ನಡೆಸಲಿದೆ. ಈ ಪಂದ್ಯದಲ್ಲಿ ಗೆದ್ದು ಫೈನಲ್‌ಗೆ ಪ್ರವೇಶಿಸುವ ಗುರಿಯನ್ನು ಹೊಂದಿದೆ ಭಾರತ ಹಾಕಿ ತಂಡ. ಈ ಮೂಲಕ ಸುದೀರ್ಘ ನಾಲ್ಕು ದಶಕದ ನಂತರ ಭಾರತ ಹಾಕಿಯಲ್ಲಿ ಒಲಿಂಪಿಕ್ಸ್ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ.
ಮತ್ತೊಂದೆಡೆ ಸೆಮಿಫೈನಲ್‌ನಲ್ಲಿ ಎದುರಾಗಲಿರುವ ಬೆಲ್ಜಿಯಂ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಅದ್ಭುತ ಜಯ ದಾಖಲಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದಿದೆ. ಭಾನುವಾರ ನಡೆದ ಈ ಪಂದ್ಯದಲ್ಲಿ ಬೆಲ್ಜಿಯಂ 3-1 ಅಂತರದಿಂದ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿತ್ತು.
1980ರಲ್ಲಿ ಬಳಿಕ ಅತ್ಯುತ್ತಮ ಪ್ರದರ್ಶನ: 1980ರಲ್ಲಿ ಭಾರತದ ಹಾಕಿ ತಂಡ ಕೊನೆಯ ಬಾರಿಗೆ ಒಲಿಂಪಿಕ್ಸ್‌ನ ಫೈನಲ್ ಪ್ರವೇಶಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. ರಷ್ಯಾದ ಮಾಸ್ಕೋದಲ್ಲಿ ನಡೆದ ಕ್ರೀಡಾಕೂಟದಲ್ಲಿ ವಸುದೇವನ್ ನೇತೃತ್ವದ ಭಾರತ ತಂಡ ಚಿನ್ನದ ಪದಕ ಗೆದ್ದು ಬೀಗಿತ್ತು. ಅದಾದ ಬಳಿಕ ಕನಿಷ್ಟ ಸೆಮಿಫೈನಲ್‌ಗೂ ಅರ್ಹತೆ ಪಡೆಯಲು ಭಾರತೀಯ ಹಾಕಿ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿಯ ಟೂರ್ನಿಯಲ್ಲಿ ಭಾರತೀಯ ಹಾಕಿ ತಂಡ ನೀಡುತ್ತಿರುವ ಅತ್ಯುತ್ತಮ ಪ್ರದರ್ಶನದಿಂದಾಗಿ ಭರವಸೆ ಹೆಚ್ಚಾಗಿದೆ.
ಗ್ರೇಟ್ ಬ್ರಿಟನ್ ವಿರುದ್ಧ ಭರ್ಜರಿ ಗೆಲುವು: ಭಾರತ ಕ್ವಾರ್ಟರ್ ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಸರ್ವಾಂಗೀಣ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿತ್ತು. ಈ ಪ್ರದರ್ಶನದಿಂದಾಗಿ ಭಾರತೀಯ ಹಾಕಿ ತಂಡ ಉತ್ತಮ ಅಂತರದಿಂದ ಗೆಲುವು ಸಾಧಿಸಿದೆ. ಭಾರತ ತಂಡ 3-1 ಅಂತರದಿಂದ ಈ ಪಂದ್ಯವನ್ನು ಗೆದ್ದು ಬೀಗಿತ್ತು. ಭಾರತದ ಪರವಾಗಿ ದಿಲ್‌ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್ ಹಾಗೂ ಹಾರ್ದಿಕ್ ಸಿಂಗ್ ತಲಾ ಒಂದೊಂದು ಗೋಲು ದಾಖಲಿಸಿ ತಂಡಕ್ಕೆ ಮೇಲುಗೈ ಒದಗಿಸಿದರು. ಗ್ರೇಟ್ ಬ್ರಿಟನ್ ಪರವಾಗಿ ಏಕೈಕ ಗೋಲನ್ನು ಸ್ಯಾಮ್ ವಾರ್ಡ್ 45ನೇ ನಿಮಿಷದಲ್ಲಿ ಬಾರಿಸಿದರು.
ಮಹಿಳೆಯರ ತಂಡವೂ ಸೆಮಿಫೈನಲ್‌ಗೆ ಪ್ರವೇಶ: ಇನ್ನು ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳೆಯರ ತಂಡ ಕೂಡ ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶ ಪಡೆದುಕೊಂಡಿದೆ. ಸೋಮವಾರ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 1-0 ಅಂತರದಿಂದ ಭಾರತ ಮಣಿಸಿ ಪಂದ್ಯವನ್ನು ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿದೆ. ಮಹಿಳೆಯರ ತಂಡಕ್ಕೆ ಸೆಮಿಫೈನಲ್‌ನಲ್ಲಿ ಅರ್ಜೆಂಟಿನಾ ತಂಡ ಮುಖಾಮುಖಿಯಾಗಲಿದೆ. ಈ ಸೆಮಿಫೈನಲ್ ಪಂದ್ಯ ಆಗಸ್ಟ್ ನಾಲ್ಕರಂದು ನಡೆಯಲಿದೆ. ಇನ್ನು ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಪುರುಷರ ಹಾಗೂ ಮಹಿಳೆಯರ ತಂಡ ಜೊತೆಯಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಂತಾಗಿದೆ.
ಸೆಮಿಫೈನಲ್ ಪಂದ್ಯದ ಸಮಯ ಇತರ ಮಾಹಿತಿ
ಪಂದ್ಯದ ದಿನಾಂಕ: ಭಾರತ ಹಾಗೂ ಬೆಲ್ಜಿಯಂ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ಮಂಗಳವಾರ ಆಗಸ್ಟ್ 3ರಂದು ನಡೆಯಲಿದೆ.
ಪಂದ್ಯದ ಸಮಯ: ಈ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 7 ಗಂಟೆಗೆ ಆರಂಭವಾಗಲಿದೆ.
ನೇರಪ್ರಸಾರದ ಮಾಹಿತಿ: ಟಿವಿ ಚಾನೆಲ್, ಲೈವ್ ಸ್ಟ್ರೀಮಿಂಗ್: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯದ ನೇರಪ್ರಸಾರವಿರಲಿದೆ. ಅಲ್ಲದೆ ಸೋನಿ ಲಿವ್ ಚಂದಾದಾರರು ನೇರಪ್ರಸಾರ ವೀಕ್ಷಿಸುವ ಅವಕಾಶವಿದೆ. ಜಿಯೋ ಟಿವಿಯಲ್ಲಿಯೂ ಈ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದು.
ಭಾರತ ಈವರೆಗೆ ಕೇವಲ ಎರಡು ಪದಕಗಳನ್ನು ಮಾತ್ರವೇ ಗೆಲ್ಲಲು ಸಫಲವಾಗಿದೆ. ಭಾರತದ ವೈಟ್‌ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರೆ ಬಳಿಕ ಭಾನುವಾರ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಆದರೆ ಸೋಮವಾರ ಭಾರತದ ಮಹಿಳಾ ಹಾಕಿ ತಂಡ ದೊಡ್ಡ ಭರವಸೆ ಮೂಡಿಸಿದೆ. ಸೋಮವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತೀಯ ಮಹಿಳೆಯರು ಗೆದ್ದು ಸೆಮಿಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications