For Quick Alerts
ALLOW NOTIFICATIONS  
For Daily Alerts

Paris Olympics 2024: ಹರ್ಮನ್‌ಪ್ರೀತ್ ಸಿಂಗ್ ಕೊನೆಯ ಕ್ಷಣದ ಸಾಹಸ; ಅರ್ಜೆಂಟೀನಾ ವಿರುದ್ಧ ಡ್ರಾ ಸಾಧಿಸಿದ ಭಾರತ

ಸೋಮವಾರ, ಜುಲೈ 29ರಂದು ನಡೆದ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪೂಲ್ ಬಿ ಗುಂಪಿನ ತಮ್ಮ ಎರಡನೇ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಭಾರತೀಯ ಪುರುಷರ ಹಾಕಿ ತಂಡವು 1-1 ಅಂತರದಲ್ಲಿ ಡ್ರಾ ಸಾಧಿಸಲು ನಾಯಕ ಹರ್ಮನ್‌ಪ್ರೀತ್ ಸಿಂಗ್ ಕೊನೆಯ ನಿಮಿಷದಲ್ಲಿ ಗೋಲು ಬಾರಿಸಿದರು.

ಹರ್ಮನ್‌ಪ್ರೀತ್ ಸಿಂಗ್ ಅವರ ಕೊನೆಯ ಕ್ಷಣದ ಸಾಹಸವು, ಸೋಲಿನ ಕಡೆ ಮುಖ ಮಾಡಿದ್ದ ಭಾರತ ತಂಡವನ್ನು ರಕ್ಷಿಸಿದರು. ಈ ಮೂಲಕ ಪಂದ್ಯಾವಳಿಯಲ್ಲಿ ಅಜೇಯ ಓಟವನ್ನು ಮುಂದುವರೆಸಿತು.

Paris Olympics 2024 Harmanpreet Singh s Last-minute Goal India Draw Aagainst Argentina By 1-1

ಅರ್ಜೆಂಟೀನಾ ತಂಡಕ್ಕೆ ಎರಡನೇ ಕ್ವಾರ್ಟರ್‌ನ 22ನೇ ನಿಮಿಷದಲ್ಲಿ ಲುಕಾಸ್ ಮಾರ್ಟಿನೆಜ್ ಅವರ ಫೀಲ್ಡ್ ಗೋಲ್‌ನೊಂದಿಗೆ ಮುನ್ನಡೆ ಸಾಧಿಸಿತು. ಭಾರತ ತಂಡದಿಂದ ತೀವ್ರ ಒತ್ತಡದ ನಡುವೆಯೂ ಹರ್ಮನ್‌ಪ್ರೀತ್ ಸಿಂಗ್ ತಮ್ಮ ಕೌಶಲ್ಯ ಮತ್ತು ಸ್ಥೈರ್ಯವನ್ನು ಪ್ರದರ್ಶಿಸುವ ಮೂಲಕ ಪಂದ್ಯದ ಕೊನೆಯ ಎರಡು ನಿಮಿಷಗಳಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು.

ಈ ಡ್ರಾ ಹಾಕಿ ಇತಿಹಾಸದಲ್ಲಿ ಎರಡನೇ ಬಾರಿಗೆ ಭಾರತ ಮತ್ತು ಅರ್ಜೆಂಟೀನಾ ಪಂದ್ಯವನ್ನು ಟೈನಲ್ಲಿ ಕೊನೆಗೊಳಿಸಿತು. ಈ ಮೊದಲು 2004ರಲ್ಲಿ ಸಂಭವಿಸಿತ್ತು.

ಪಂದ್ಯದುದ್ದಕ್ಕೂ ಅರ್ಜೆಂಟೀನಾದ ರಕ್ಷಣಾ ತಂಡವು ಚೇತರಿಸಿಕೊಳ್ಳುವುದನ್ನು ಸಾಬೀತುಪಡಿಸಿತು. ಆದರೆ ಹರ್ಮನ್‌ಪ್ರೀತ್ ಸಿಂಗ್ ಭಾರತಕ್ಕೆ ಸ್ಕೋರ್ ಮಾಡಲು ಪೆನಾಲ್ಟಿ ಕಾರ್ನರ್‌ನ ಮೂರು ರೀಟೇಕ್‌ಗಳ ನಂತರ ಲಾಭ ಪಡೆದರು.

ಮೊದಲಾವಧಿಯಲ್ಲಿ ಉಭಯ ತಂಡಗಳು ಅಮೋಘ ಪ್ರದರ್ಶನ ನೀಡಿದ ಫಲವಾಗಿ, ಯಾವುದೇ ತಂಡ ಅಂಕ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಆಟಗಾರರು ಚೆಂಡನ್ನು ಗಾಳಿಯಲ್ಲಿ ತೂರುತ್ತಲೇ ಆಟವನ್ನು ಮುಂದುವರಿಸಿದರು.

ಅರ್ಜೆಂಟೀನಾ ಈ ವೇಳೆ ರಕ್ಷಣಾ ವಿಭಾಗದಲ್ಲಿ ಸೊಗಸಾದ ಆಟದ ಪ್ರದರ್ಶನ ನೀಡಿತು. ಈ ವೇಳೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸುವಲ್ಲಿ ಭಾರತ ವಿಫಲವಾಯಿತು.

ಎರಡನೇ ಅವಧಿಯ ಆಟದಲ್ಲಿ ಅರ್ಜೆಂಟೀನಾ ಕೊಂಚ ಆಕ್ರಮಣಕಾರಿ ಆಟಕ್ಕೆ ಮೊರೆ ಹೋಯಿತು. ಅಲ್ಲದೆ ಚೆಂಡನ್ನು ಹೆಚ್ಚು ಹೊತ್ತು ತನ್ನ ಹತ್ತಿರವೇ ಇಟ್ಟುಕೊಂಡಿತು. ಪರಿಣಾಮ ಈ ಅವಧಿಯ ಕೊನೆಯ ಕ್ಷಣದಲ್ಲಿ ಅರ್ಜೆಂಟೀನಾ ಆಟಗಾರ ಮಾರ್ಟಿನೆಜ್ ಲ್ಯೂಕಾಸ್ ಭಾರತದ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಅವರನ್ನು ವಂಚಿಸುವಲ್ಲಿ ಸಫಲರಾದರು. ಪರಿಣಾಮ ಅರ್ಜೆಂಟಿನಾ 1-0 ಅಂತರದಲ್ಲಿ ಮುನ್ನಡೆ ಸಾಧಿಸಿತು.

ಮೂರನೇ ಅವಧಿಯಲ್ಲೂ ಗೋಲು ಬಾರಿಸುವ ಭಾರತದ ಆಸೆ ಫಲಿಸಲಿಲ್ಲ. ಹೀಗಾಗಿ ಪಂದ್ಯ ಕೊನೆಯ ಅವಧಿಗೆ ಶಿಫ್ಟ್ ಆಯಿತು. ಈ ಅವಧಿಯಲ್ಲಿ ಭಾರತ ಹಲವು ಬಾರಿ ಗೋಲು ಬಾರಿಸಲು ಇಲ್ಲದ ಹರಸಾಹಸ ಮಾಡಿತು. ಆದರೆ ಫಲ ಲಭಿಸಲಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ಸಿಕ್ಕ ಅವಕಾಶವನ್ನು ತಂಡ ಸಮರ್ಥವಾಗಿ ಬಳಸಿಕೊಂಡಿತು.

ಈ ಪಂದ್ಯದಲ್ಲಿ ಭಾರತ ಒಟ್ಟು 10 ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. ಮಹತ್ವದ ಪಂದ್ಯದಲ್ಲಿ ಚಾಣಕ್ಷತನ ಮೆರೆದ ಅನುಭವಿ ಹಾಗೂ ನಾಯಕ ಹರ್ಮನ್‌ಪ್ರೀತ್ ಸಿಂಗ್, ತಂಡದ ಮುಖದಲ್ಲಿ ಮಂದಹಾಸ ಮೂಡಿಸುವಂತೆ ಮಾಡಿದರು.

ಹರ್ಮನ್‌ಪ್ರೀತ್ ಸಿಂಗ್ ಬಾರಿಸಿದ ಚೆಂಡನ್ನು ತಡೆಯುವಲ್ಲಿ ಅರ್ಜೆಂಟೀನಾ ಗೋಲ್‌ಕೀಪರ್ ವಿಫಲರಾದರು. ಈ ಮೂಲಕ ಅರ್ಜೆಂಟೀನಾ ವಿರುದ್ಧ ಅಂಕವನ್ನು 1-1 ಅಂತರದಲ್ಲಿ ಹಂಚಿಕೊಂಡು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

Story first published: Monday, July 29, 2024, 19:09 [IST]
Other articles published on Jul 29, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+