For Quick Alerts
ALLOW NOTIFICATIONS  
For Daily Alerts

ಪಿಆರ್ ಶ್ರೀಜೇಶ್ ಅವರ ಐಕಾನಿಕ್ ನಂಬರ್ 16 ಜೆರ್ಸಿಯನ್ನು ನಿವೃತ್ತಗೊಳಿಸಿದ ಹಾಕಿ ಇಂಡಿಯಾ

ಆಗಸ್ಟ್ 14 ಬುಧವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ ಹಾಕಿಯಲ್ಲಿ ಭಾರತ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಸ್ಟಾರ್ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಪ್ರಮುಖ ಪಾತ್ರವಹಿಸಿದರು. ಬಳಿಕ ಹಾಕಿ ವೃತ್ತಿಜೀವನಕ್ಕೆ ಶ್ರೀಜೇಶ್ ನಿವೃತ್ತಿ ಘೋಷಿಸಿದರು.

ಇದೀಗ ಶ್ರೀಜೇಶ್ ಅವರಿಗೆ ಗೌರವ ಸೂಚಕವಾಗಿ ಹಾಕಿ ಹಿರಿಯ ತಂಡದ ನಂಬರ್ 16 ಜೆರ್ಸಿಯನ್ನು ನಿವೃತ್ತಿ ಮಾಡಲು ಹಾಕಿ ಇಂಡಿಯಾ ಬುಧವಾರ ನಿರ್ಧರಿಸಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೂರನೇ ಸ್ಥಾನ ಗಳಿಸಿದ ಭಾರತ ಹಾಕಿ ತಂಡ ಸತತ ಎರಡನೇ ಬಾರಿಗೆ ಪ್ಯಾರಿಸ್ ಕ್ರೀಡಾಕೂಟದಲ್ಲಿಯೂ ಕಂಚಿನ ಪದಕ ಗೆದ್ದಿತ್ತು.

PR Sreejesh jersey number 16 has been retired by Hockey India

ಈ ಕುರಿತು ಹಾಕಿ ಇಂಡಿಯಾ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ. "ಪಿಆರ್ ಶ್ರೀಜೇಶ್ ಅವರು ಈಗ ಜೂನಿಯರ್ ತಂಡದ ಕೋಚ್ಆಗಲಿದ್ದಾರೆ" ನಾವು ಸೀನಿಯರ್ ತಂಡಕ್ಕೆ ನಂಬರ್ 16 ಸಂಖ್ಯೆಯ ಜೆರ್ಸಿಯನ್ನು ನಿವೃತ್ತಿಗೊಳಿಸುತ್ತಿದ್ದೇವೆ. ಇದು ಜೂನಿಯರ್ ತಂಡಕ್ಕೆ ಅನ್ವಯಿಸುವುದಿಲ್ಲ. ಜೂನಿಯರ್ ತಂಡದಲ್ಲಿ ಶ್ರೀಜೇಶ್ ಮತ್ತೊಬ್ಬ ಶ್ರೀಜೇಶ್ ರನ್ನು ತಯಾರು ಮಾಡುತ್ತಾರೆ" ಎಂದು ಶ್ರೀಜೇಶ್ ಅವರ ಅಭಿನಂದನಾ ಸಮಾರಂಭದಲ್ಲಿ ಭೋಲಾ ನಾಥ್ ಸಿಂಗ್ ಹೇಳಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಆರಂಭದಿಂದಲ್ಲೇ ಅದ್ಭುತ ಪ್ರದರ್ಶನ ನೀಡಿತ್ತು. ಸೆಮಿಫೈನಲ್‌ ಪ್ರವೇಶಿದ ಭಾರತ ತಂಡ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿತ್ತು. ಆದರೆ ಸೆಮಿಫೈನಲ್‌ನಲ್ಲಿ ಸೋಲು ಕಂಡಿತ್ತು.
ಆದರೂ ಛಲ ಬಿಡದ ಭಾರತ ತಂಡ ಕಂಚಿನ ಪದಕಕ ಗೆದ್ದು ತೃಪ್ತಿ ಪಟ್ಟಿತ್ತು.

ಈ ಎಲ್ಲಾ ಪರಿಶ್ರಮದ ಹಿಂದೆ ತಂಡದ ಅನುಭವಿ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಅವರ ಉತ್ತಮ ರಕ್ಷಣಾ ತಂತ್ರಗಾರಿ ಮೆಚ್ಚಲ್ಲೇ ಬೇಕು. ಎಲ್ಲಾ ಪಂದ್ಯಗಳಲ್ಲಿ ಪ್ರಮುಖ ಸಮಯಗಳಲ್ಲಿ ಗೋಲುಗಳನ್ನು ಉಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದರಲ್ಲೂ ಗ್ರೇಟ್ ಬ್ರಿಟನ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಎರಡು ಗೋಲುಗಳನ್ನು ಉಳಿಸುವ ಮೂಲಕ ಶ್ರೀಜೇಶ್ ಭಾರತದ ಗೆಲುವಿನ ರೂವಾರಿ ಆಗಿದ್ದರು.

2006ರಲ್ಲಿ ಭಾರತ ಹಾಕಿ ತಂಡಕ್ಕೆ ಶ್ರೀಜೇಶ್ ಪಾದಾರ್ಪಣೆ ಮಾಡಿದರು. ಆದರೆ 2011ರ ನಂತರ ಅವರು ತಂಡದಿಂದ ಹೊರಗಿರಲಿಲ್ಲ. 18 ವರ್ಷಗಳ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಭಾರತ ಪರ 336 ಪಂದ್ಯಗಳನ್ನು ಆಡಿದ್ದಾರೆ, ಈ ಅವಧಿಯಲ್ಲಿ ಅವರು 4 ಒಲಿಂಪಿಕ್ಸ್‌ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದು, ಎರಡು ಬಾರಿ ಪದಕಗಳನ್ನು ಗೆದ್ದಿರುವುದು ಹೆಮ್ಮೆಯ ವಿಚಾರ.

Story first published: Wednesday, August 14, 2024, 16:26 [IST]
Other articles published on Aug 14, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+