Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಫ್‌ಐಎಚ್‌ ಸೀರೀಸ್ ಫೈನಲ್ಸ್: ಭಾರತಕ್ಕೆ ಆನೆಬಲ ತಂಡ ರಮಣ್‌ದೀಪ್

Ramandeep returns to India squad for FIH Series Finals

ಭುವನೇಶ್ವರ್, ಮೇ 28: ಅತ್ಯುತ್ತಮ ಸ್ಟ್ರೈಕರ್ ರಮಣ್‌ದೀಪ್ ಸಿಂಗ್ ಭಾರತದ ಪುರುಷರ ಹಾಕಿ ತಂಡವನ್ನು ಮತ್ತೆ ಸೇರಿಕೊಂಡಿದ್ದಾರೆ. ಜೂನ್ 6ರಿಂದ ಭುವನೇಶ್ವರ್‌ನಲ್ಲಿ ಇಂಟರ್ ನ್ಯಾಷನಲ್ ಹಾಕಿ ಫೆಡರೇಷನ್ (ಎಫ್‌ಐಎಚ್) ಸೀರೀಸ್ ಫೈನಲ್ಸ್ ಆರಂಭಗೊಳ್ಳಲಿರುವುದರಿಂದ ರಮಣ್ ತಂಡಕ್ಕೆ ಬಲ ತುಂಬಿಲಿದ್ದಾರೆ.

ಮೊಣಕಾಲು ಗಾಯಕ್ಕೀಡಾಗಿದ್ದ ಪ್ರತಿಭಾನ್ವಿತ ಆಟಗಾರ ರಮಣ್ ಸಿಂಗ್, ಸುಮಾರು 9 ತಿಂಗಳ ಕಾಲ ತಂಡದಿಂದ ಹೊರಗುಳಿದಿದ್ದರು. ಮಂಗಳವಾರ (ಮೇ 28) 26ರ ಹರೆಯದ ರಮಣ್ ಅವರನ್ನು ಮತ್ತೆ ತಂಡಕ್ಕೆ ಸೇರಿಕೊಳ್ಳಲಾಗಿದೆ. ಮನ್‌ದೀಪ್ ಸಿಂಗ್, ಗುರ್‌ಸಹಿಬ್ಜಿತ್ ಸಿಂಗ್, ಸಿಮ್ರನ್‌ಜೀತ್ ಸಿಂಗ್ ಮತ್ತು ಆಕಾಶ್ ದೀಪ್ ಸಿಂಗ್ ಜೊತೆ ರಮಣ್, ತಂಡದ ಫಾರ್ವರ್ಡ್ ವಿಭಾಗದಲ್ಲಿ ಆಡಲಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದ ವೇಳೆ ವಿಶ್ರಾಂತಿಯಲ್ಲಿದ್ದ ವರುಣ್ ಕುಮಾರ್, ಅಮಿತ್ ರೋಹಿದಸ್ ಕೂಡ ತಂಡಕ್ಕೆ ಹಿಂದಿರುಗಿದ್ದಾರೆ. ಮತ್ತೊಬ್ಬ ಮಿಡ್ ಫೀಲ್ಡರ್ ಸುಮಿತ್ ಕೂಡ ಪ್ರತಿಷ್ಠಿತ ಟೂರ್ನಿ ನಿಮಿತ್ತ ತಂಡ ಸೇರಿಕೊಂಡಿದ್ದಾರೆ. ಮನ್‌ಪ್ರೀತ್ ಸಿಂಗ್ ಮುನ್ನಡೆಸುತ್ತಿರುವ ಭಾರತ ತಂಡದ ಉಪ ನಾಯಕ ಜವಾಬ್ದಾರಿ ಬಿರೇಂದ್ರ ಲಕ್ರಾ ವಹಿಸಿಕೊಂಡಿದ್ದಾರೆ.

Story first published: Tuesday, May 28, 2019, 17:16 [IST]
Other articles published on May 28, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+