Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಗೇಮ್ಸ್ ಹಾಕಿ ಚಾಂಪಿಯನ್ ಜಪಾನ್ ಎದುರು ಭಾರತಕ್ಕೆ ಗೆಲುವು

Rampaging India hammer Asian Games champions Japan 9-0

ಮಸ್ಕತ್, ಅಕ್ಟೋಬರ್ 22: ಓಮನ್ ನ ಮಸ್ಕತ್ ನಲ್ಲಿ ನಡೆಯುತ್ತಿರುವ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಪುರುಷರ ತಂಡ, ಜಕಾರ್ತಾ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದಿದ್ದ ಜಪಾನ್ ವಿರುದ್ಧ 9-0ಯ ಭರ್ಜರಿ ಗೆಲುವು ದಾಖಲಿಸಿದೆ.

ಭಾನುವಾರ (ಅಕ್ಟೋಬರ್ 21) ರಾತ್ರಿ ಪಂದ್ಯದಲ್ಲಿ ಭಾರತ ಅಘೋಘ ಆಟವನ್ನು ಪ್ರದರ್ಶಿಸಿತು. ಅದೂ ಏಷ್ಯನ್ ಗೇಮ್ಸ್ ಚಾಂಪಿಯನ್ ತಂಡಕ್ಕೆ ಒಂದೂ ಗೋಲ್ ದಾಖಲಿಸಲು ಬಿಡದೆ ಭಾರತ ಪಾರಮ್ಯ ಮೆರೆಯಿತು. ಟೂರ್ನಿಯಲ್ಲಿ ದೇಸಿ ತಂಡಕ್ಕೆ ಲಭಿಸುತ್ತಿರುವ ಮೂರನೇ ಗೆಲುವಿದು.

ಪಂದ್ಯಾರಂಭಗೊಂಡ ನಾಲ್ಕನೇ ನಿಮಿಷದಲ್ಲಿ ಭಾರತದಿಂದ ಲಲಿತ್ ಉಪಧ್ಯಾಯ್ ಅವರು ಗೋಲ್ ಬಾರಿಸಿ ಮುನ್ನಡೆ ಕೊಟ್ಟರು. ಅನಂತರ ಗುರ್ಜಂತ್, ಹರ್ಮನ್ ಪ್ರೀತ್, ಆಕಾಶ್ ದೀಪ್, ಸುಮಿತ್, ಮನ್‌ದೀಪ್ ಹೀಗೆ ತಂಡದ ಪರ ಸಾಲು ಸಾಲುಗಳು ದಾಖಲಾದವು.

ಉಪಧ್ಯಾಯ್ ಮತ್ತು ಮನ್‌ದೀಪ್ ಸಿಂಗ್ ತಲಾ ಎರಡು ಗೋಲ್ ಬಾರಿಸಿ ಗಮನ ಸೆಳೆದರು. ಅಂಕಪಟ್ಟಿಯಲ್ಲಿ ಭಾರತ 9 ಪಾಯಿಂಟ್ ಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಎರಡು ಪಂದ್ಯಗಳನ್ನು ಗೆದ್ದಿರುವ ಮಲೇಷ್ಯಾ 6 ಪಾಯಿಂಟ್ ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

Story first published: Monday, October 22, 2018, 15:22 [IST]
Other articles published on Oct 22, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+