ರಾಷ್ಟ್ರೀಯ ಹಾಕಿ ತಂಡದಲ್ಲಿ ನಿವೃತ್ತ ಮಾಜಿ ನಾಯಕ ಸರ್ದಾರ್ ಹೆಸರು!

ನವದೆಹಲಿ, ಜನವರಿ 16: ಭಾರತದ ಪುರುಷರ ರಾಷ್ಟ್ರೀಯ ಹಾಕಿ ತಂಡದಲ್ಲಿ ಮಾಜಿ ನಾಯಕ ಸರ್ದಾರ್ ಸಿಂಗ್ ಅವರನ್ನು ಹೆಸರಿಸಲಾಗಿದೆ. ಹಾಕಿ ಇಂಡಿಯಾ ಪ್ರಕಟಿಸಿರುವ 13 ಜನರ ತಂಡದಲ್ಲಿ ಸರ್ದಾರ್ ಸ್ಥಾನ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಕಳೆದ ವರ್ಷಾಂತ್ಯದಲ್ಲಿ ಸಿಂಗ್ ಹಾಕಿಯಿಂದ ನಿವೃತ್ತಿ ಘೋಷಿಸಿದ್ದರು.
2018ರ ಏಷ್ಯಾನ್ ಗೇಮ್ಸ್‌ನ ಹಾಕಿಯಲ್ಲಿ ಭಾರತದ ಕಳಪೆ ಪ್ರದರ್ಶನದ ಬಳಿಕ ಸರ್ದಾರ್ ನಿವೃತ್ತಿ ಘೋಷಿಸಿದ್ದರು. ಆದರೆ ಸರ್ದಾರ್ ಅವರು ತಂಡದಲ್ಲಿದ್ದು 2020ರ ಟೋಕ್ಯೋ ಒಲಂಪಿಕ್ಸ್ ವರೆಗೂ ಭಾರತದ ಪರ ಹೋರಾಟ ನಡೆಸಲಿದ್ದಾರೆ. ಇದನ್ನು ಸ್ವತಃ ಸಿಂಗ್ ಅವರೇ ಖಚಿತಪಡಿಸಿದ್ದಾರೆ.
'ಹೌದು, ತಂಡದಲ್ಲಿ ನನಗೆ ಅವಕಾಶ ನೀಡಲಾಗಿದೆ. ನಾನದನ್ನು ಸ್ವೀಕರಿಸಿದ್ದೇನೆ ಕೂಡ. ನನಗಿದು ಹೊಸ ಸವಾಲು. ಆದರೆ ಯಾವುದೇ ರೀತಿಯಲ್ಲೂ ಭಾರತದ ಸೇವೆಗೆ ನಾನು ಸದಾ ಉತ್ಸುಕನಾಗಿದ್ದೇನೆ' ಎಂದು ಪಿಟಿಐ ಜೊತೆ ಮಾತನಾಡುತ್ತ ಸರ್ದಾರ್ ಮಂಗಳವಾರ (ಜನವರಿ 15) ತಿಳಿಸಿದ್ದಾರೆ.
Story first published: Wednesday, January 16, 2019, 18:35 [IST]
Other articles published on Jan 16, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications