ಹಾಕಿ: ಅರ್ಜೆಂಟೀನಾ ವಿರುದ್ಧ ಭಾರತಕ್ಕೆ ಜಯ
ರಿಯೋ ಡಿ ಜನೈರೋ, ಆಗಸ್ಟ್ 09: ಬಲಿಷ್ಠ ಆರ್ಜೆಂಟೀನಾ ತಂಡದ ವಿರುದ್ಧ ನಡೆದ ಬಿ ಗುಂಪಿನ ಹಾಕಿ ಪಂದ್ಯದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿ 2-1 ಅಂತರದ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ 6 ಅಂಕ ಪಡೆದು ಬಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿದೆ. ಈ ಮೂಲಕ ಪ್ಲೇ ಆಫ್ ಆಸೆ ಚಿಗುರಿದೆ.
ಪಂದ್ಯದ 8ನೇ ನಿಮಿಷದಲ್ಲಿ ಚಿಂಗ್ಲೆನ್ಸನಾ ಕಂಗುಜಮ್ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ನಂತರ ದ್ವಿತೀಯಾರ್ಧದಲ್ಲಿ 35ನೇ ನಿಮಿಷದಲ್ಲಿ ಭಾರತದ ಕೋಥಜಿತ್ ಖಡಂಗ್ಬಮ್ ಗೋಲು ಗಳಿಸಿ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು. ಪಂದ್ಯದ ನಾಲ್ಕನೇ ಹಂತದಲ್ಲಿ ಅರ್ಜೆಂಟೀನಾ ದಿಟ್ಟ ಹೋರಾಟ ಪ್ರದರ್ಶಿಸಿ 48ನೇ ನಿಮಿಷದಲ್ಲಿ ಗೋಲು ಗಳಿಸುವಲ್ಲಿ ಸಫಲವಾಯಿತು.

ಅರ್ಜೆಂಟೀನಾದ ಗೋಂಜಲೋ ಪಿಲ್ಲಟ್ ಗೋಲು ಗಳಿಸಿ ಹಿನ್ನಡೆಯನ್ನು ತಗ್ಗಿಸಿದರು. ಭಾರತ ಪಂದ್ಯದ ಕೊನೆಯಲ್ಲಿ ಅರ್ಜೆಂಟೀನಾಗೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ.
ಭಾರತ ಗುರುವಾರದಂದು ಬಲಿಷ್ಠ ನೆದರ್ಲೆಂಡ್ ತಂಡವನ್ನು ಎದುರಿಸಲಿದೆ. ಬಿ ಗುಂಪಿನಲ್ಲಿ ಐರ್ಲೆಂಡ್ ತಂಡವನ್ನು 3-2 ಅಂತರದಲ್ಲಿ ಸೋಲಿಸಿದ್ದ ಭಾರತ, ಜರ್ಮನಿ ವಿರುದ್ಧ 1-2 ಅಂತರದ ಸೋಲು ಕಂಡಿತ್ತು. (ಐಎಎನ್ಎಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications