ಭಾರತದ ಹಾಕಿ ಕೋಚ್ ಸ್ಥಾನದಿಂದ ರೋಲಂಟ್ ಓಲ್ಟಮಸ್ ವಜಾ
ನವದೆಹಲಿ, ಸೆಪ್ಟೆಂಬರ್ 02 : ಭಾರತ ಪುರುಷರ ಹಾಕಿ ತಂಡದ ಮುಖ್ಯ ತರಬೇತುದಾರ (ಕೋಚ್) ರೋಲಂಟ್ ಓಲ್ಟಮಸ್ ಅವರನ್ನು ವಜಾ ಮಾಡಲಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಭಾರತ ಹಾಕಿ ತಂಡವು ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಕೋಚ್ ಸ್ಥಾನದಿಂದ ರೋಲಂಟ್ ಓಲ್ಟಮಸ್ ಅವರನ್ನು ಹಾಕಿ ಇಂಡಿಯಾ ಶನಿವಾರ ವಜಾ ಮಾಡಿದೆ.

ಪ್ರಸ್ತುತ ಹೈ ಪರ್ಫಾರ್ಮೆನ್ಸ್ ನಿರ್ದೇಶಕರಾಗಿರುವ ಡೇವಿಡ್ ಜಾನ್ ಅವರು ಮಧ್ಯಂತರ ಭಾರತ ಹಾಕಿ ತಂಡದ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು
2013ರಲ್ಲಿ ತಂಡದ ಹೈ ಪರ್ಫಾರ್ಮೆನ್ಸ್ ಮ್ಯಾನೇಜರ್ ಆಗಿ ನೇಮಕಗೊಂಡಿದ್ದ ರೋಲಂಟ್ ಓಲ್ಟಮಸ್ ಅವರು 2015ರಲ್ಲಿ ಕೋಚ್ ಆಗಿ ಆಯ್ಕೆಯಾಗಿದ್ದರು.
2015 ರಲ್ಲಿ ಅಂದಿನ ಕೋಚ್ ಆಗಿದ್ದ ಪಾಲ್ ವ್ಯಾನ್ ಆಸ್ ಅವರನ್ನು ಹಾಕಿ ಇಂಡಿಯಾ ಇದೇ ತರಹನಾಗಿ ವಜಾ ಮಾಡಿತ್ತು.
ಬಳಿ ಪಾಲ್ ವ್ಯಾನ್ ಸ್ಥಾನಕ್ಕೆ ರೋಲಂಟ್ ಓಲ್ಟಮಸ್ ಅವರನ್ನು ಹಾಕಿ ಇಂಡಿಯಾ ನೇಮಿಸಿತ್ತು. ಇದೀಗ ಹಾಕಿ ಇಂಡಿಯಾವೇ ಓಲ್ಟಮಸ್ ಅವರನ್ನು ವಜಾ ಮಾಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಹಾಕಿ ಇಂಡಿಯಾ ಆಯ್ಕೆ ಸಮಿತಿಯ ಅಧ್ಯಕ್ಷ ಹರ್ಬಿಂದರ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿ, 2016-17ರಲ್ಲಿ ಭಾರತದ ಪ್ರದರ್ಶನದ ವಿಮರ್ಶೆಯ ನಂತರ ಓಲ್ಟಮಸ್ ಅವರನ್ನು ವಜಾ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications