Paris Olympics 2024: ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತ ಹಾಕಿ ತಂಡಕ್ಕೆ ಆಘಾತ!
ಆಗಸ್ಟ್ 5 ಸೋಮವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಅಮೋಘ ಪ್ರದರ್ಶನ ನೀಡುತ್ತಿದ್ದು, ಪದಕ ಗೆಲ್ಲುವ ಸನಿಹ ಬಂದು ಮುಗ್ಗರಿಸುತ್ತಿದ್ದಾರೆ. ಇದುವರೆಗೆ ಪ್ಯಾರಿಸ್‌ನಲ್ಲಿ ಭಾರತ ಹಾಕಿ ತಂಡ ಕೂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.
ಭಾನುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಭಾರತ ಶೂಟೌಟ್‌ನಲ್ಲಿ ಗೆದ್ದು ಬೀಗಿತ್ತು.ಇದೀಗ ಸೆಮಿಫೈನಲ್ ಪಂದ್ಯಕ್ಕೂ ಮುನ್ನವೇ ಭಾರತಕ್ಕೆ ದೊಡ್ಡ ಆಘಾತ ಎದುರಾಗಿದೆ.

ಭಾರತ ಹಾಕಿ ತಂಡದ ಡಿಫೆಂಡರ್ ಅಮಿತ್ ರೋಹಿದಾಸ್ ಒಂದು ಪಂದ್ಯಕ್ಕೆ ನಿಷೇಧಕ್ಕೊಳಗಾಗಿದ್ದಾರೆ. ಮಂಗಳವಾರ ನಡೆಯಲಿರುವ ಜರ್ಮನಿ ವಿರುದ್ಧದ ಸೆಮಿಫೈನಲ್ ಪಂದ್ಯದಿಂದ ಹೊರಗುಳಿದ್ದಾರೆ. ಭಾನುವಾರ ಗ್ರೇಟ್ ಬ್ರಿಟನ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮಿತ್ ರೋಹಿದಾಸ್ ರೆಡ್ ಕಾರ್ಡ್ ಪಡೆದ ನಂತರ ಒಂದು ಪಂದ್ಯಕ್ಕೆ ನಿಷೇಧಕ್ಕೊಳಗಾಗಿದ್ದಾರೆ.
ಒಲಿಂಪಿಕ್ಸ್‌ನ ಅಧಿಕಾರಿ ಮತ್ತು ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ ಹೇಳಿಕೆಯ ಪ್ರಕಾರ, 'ಆಗಸ್ಟ್ 4 ರಂದು ಭಾರತ ಮತ್ತು ಗ್ರೇಟ್ ಬ್ರಿಟನ್ ಪಂದ್ಯದ ವೇಳೆ ನೀತಿ ಸಂಹಿತೆ ಉಲ್ಲಂಘನೆಗಾಗಿ ಭಾರತ ಹಾಕಿ ತಂಡದ ಡಿಫೆಂಡರ್ ಅಮಿತ್ ರೋಹಿದಾಸ್ ಅವರನ್ನು ಒಂದು ಪಂದ್ಯಕ್ಕೆ ನಿಷೇಧಿಸಲಾಗಿದೆ.
ಅಮಿತ್ ಅವರನ್ನು ನಿಷೇಧಿಸಿರುವುದು ಪಂದ್ಯದ ಸಂಖ್ಯೆ 35 (ಜರ್ಮನಿ ವಿರುದ್ಧ ಭಾರತದ ಸೆಮಿಫೈನಲ್ ಪಂದ್ಯ) ಮೇಲೆ ಪರಿಣಾಮ ಬೀರಲಿದೆ. ಅಮಿತ್ ರೋಹಿದಾಸ್ ಅನುಪಸ್ಥಿತಿಯಲ್ಲಿ ಭಾರತ ಕೇವಲ 15 ಆಟಗಾರರ ತಂಡದೊಂದಿಗೆ ಆಡಲಿದೆ.
ರೆಡ್ ಕಾರ್ಡ್ ಸಿಕ್ಕಿದ್ದು ಏಕೆ?
ಗ್ರೇಟ್ ಬ್ರಿಟನ್ ವಿರುದ್ಧದ ಕ್ವಾರ್ಟರ್-ಫೈನಲ್ ಪಂದ್ಯದ ದ್ವಿತೀಯಾರ್ಧದಲ್ಲಿ ಅಮಿತ್ ರೋಹಿದಾಸ್ ಅವರಿಗೆ ರೆಡ್ ಕಾರ್ಡ್ ನೀಡಲಾಯಿತು. ಮಿಡ್‌ಫೀಲ್ಡ್‌ನಲ್ಲಿ ಗ್ರೇಟ್ ಬ್ರಿಟನ್ ಫಾರ್ವರ್ಡ್ ಅನ್ನು ತಪ್ಪಿಸಲು ಪ್ರಯತ್ನಿಸುತ್ತಿರುವಾಗ, ರೋಹಿದಾಸ್ ಅವರ ಹಾಕಿ ಸ್ಟಿಕ್ ವಿಲ್ ಕ್ಯಾಲನನ್ ಅವರ ಬಡಿಯಿತು.
ಇದನ್ನು ಆನ್-ಫೀಲ್ಡ್ ರೆಫರಿ ಗಂಭೀರ ಅಪರಾಧವೆಂದು ಪರಿಗಣಿಸದಿದ್ದರೂ, ವೀಡಿಯೊ ರೆಫರಲ್ ನಂತರ ನಿರ್ಧಾರವನ್ನು ರೆಡ್ ಕಾರ್ಡ್‌ಗೆ ಬದಲಾಯಿಸಲಾಯಿತು. ಹೀಗಾಗಿ ರೆಡ್ ಕಾರ್ಡ್ ಪಡೆದ ಅಮಿತ್ ರೋಹಿದಾಸ್ ಹೊರಗುಳಿದರು.
ಪೂರ್ಣ ಸಮಯದವರೆಗೆ ಭಾರತ ಮತ್ತು ಗ್ರೇಟ್ ಬ್ರಿಟನ್ ತಂಡಗಳ ಗೋಲು 1-1 ರಲ್ಲಿ ಸಮನಾಗಿತ್ತು. ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ (22ನೇ ನಿಮಿಷ) ಗೋಲು ಗಳಿಸಿದರೆ, ಇಂಗ್ಲೆಂಡ್ ಕಡೆ ಲೀ ಮಾರ್ಟನ್ (27ನೇ ನಿಮಿಷ) ಗೋಲು ದಾಖಲಿಸಿದರು.
ಇದಾದ ಬಳಿಕ ಪಂದ್ಯ ಶೂಟೌಟ್‌ಗೆ ಸಾಗಿತು. ಶೂಟೌಟ್‌ನಲ್ಲಿ ಭಾರತ 4-2 ಗೋಲುಗಳ ಅಂತರದಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ ತಲುಪಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications