ಪುರುಷರ ಹಾಕಿ ತಂಡಕ್ಕೆ ಹೊಸ ಕೋಚ್ ಆಗಿ ವಾಲ್ತೆರಸ್ ನೇಮಕ

Posted By:

ನವದೆಹಲಿ, ಸೆಪ್ಟೆಂಬರ್ 8: ಭಾರತೀಯ ಪುರುಷರ ಹಾಕಿ ತಂಡಕ್ಕೆ ಹೊಸ ಕೋಚ್ ನೇಮಕವಾಗಿದೆ. ಇತ್ತೀಚೆಗಷ್ಟೇ ಪುರುಷರ ತಂಡದ ಮುಖ್ಯ ಕೋಚ್ ಆಗಿದ್ದ ರೋಲೆಂಟ್ ಓಲ್ಟ್ ಮನ್ಸ್ ಅವರನ್ನು ತರಬೇತುದಾರರ ಹುದ್ದೆಯಿಂದ ಕಿತ್ತುಹಾಕಿದ್ದ ಹಾಕಿ ಇಂಡಿಯಾ ಇದೀಗ, ಅವರ ಸ್ಥಾನಕ್ಕೆ ಮಹಿಳೆಯರ ತಂಡದ ಕೋಚ್ ಆಗಿರುವ ವಾಲ್ತೆರಸ್ ಮರಿಜ್ನೆ ಅವರನ್ನು ತಂದು ಕೂರಿಸಿದೆ.

ಹಾಕಿ ಇಂಡಿಯಾ ಲೀಗ್: ಭಾರತಕ್ಕೆ ಆಸೀಸ್ ಮೊದಲ ಎದುರಾಳಿ

ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸಚಿವ ಹರ್ಷವರ್ಧನ್ ರಾಥೋಡ್ ಅವರು, ಇದನ್ನು ಟ್ವಿಟ್ಟರ್ ನಲ್ಲಿ ಶುಕ್ರವಾರ (ಸೆಪ್ಟೆಂಬರ್ 8) ಮಧ್ಯಾಹ್ನ ತಿಳಿಸಿದ್ದಾರೆ.

Sjoerd Marijne named chief coach of Indian men’s hockey team

ಇದರ ಜತೆಗೆ, 2016ರಲ್ಲಿ ನಡೆದಿದ್ದ ಜೂನಿಯರ್ ಹಾಕಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತೀಯ ಜೂನಿಯರ್ ಹಾಕಿ ತಂಡವನ್ನು ಚಿನ್ನದ ಪದಕ ಗೆಲ್ಲುವವರೆಗೆ ಮುನ್ನಡೆಸಿದ್ದ ನಾಯಕ ಹರೇಂದ್ರ ಸಿಂಗ್ ಅವರು, ಪುರುಷರ ತಂಡದ ಕೋಚ್ ಆಗಿ ನೇಮಿಸಲಾಗಿದೆ.

ಆದರೆ, ಮರಿಜ್ನೆ ಅವರ ನೇಮಕಾತಿಯು ಏಕಪಕ್ಷೀಯವಾಗಿದ್ದು, ಹಾಕಿ ಇಂಡಿಯಾ ಹಾಗೂ ಕೇಂದ್ರ ಕ್ರೀಡಾ ಇಲಾಖೆಯ ಕೆಲವು ಅಧಿಕಾರಿಗಳ ಆಶಯದಂತೆಯೇ ನಡೆದಿದೆ ಎಂದು ಹೇಳಲಾಗಿದೆ.

Story first published: Friday, September 8, 2017, 17:29 [IST]
Other articles published on Sep 8, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ