ಏಷ್ಯಾನ್ ಚಾಂಪಿಯನ್ಸ್ ಟ್ರೋಫಿ: ವನಿತಾ ಹಾಕಿಗೆ ಸುನಿತಾ ನಾಯಕಿ

ನವದೆಹಲಿ, ಮೇ 2: ಕೊರಿಯಾದ ಡೊಂಗ್ಹಾ ಸಿಟಿಯಲ್ಲಿ ಮೇ 13ರಿಂದ ಆರಂಭಗೊಳ್ಳಲಿರುವ ಏಷ್ಯಾನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಹಾಲಿ ಚಾಂಪಿಯನ್ ಭಾರತದ ವನಿತಾ ತಂಡವನ್ನು ಅನುಭವಿ ಆಟಗಾರ್ತಿ ಸುನಿತಾ ಲಾಕ್ರ ಮುನ್ನಡೆಸಲಿದ್ದಾರೆ.
ತಂಡದ ಆಟಗಾರ್ತಿ ರಾಣಿ ರಾಮ್‌ಪಾಲ್ ಅನುಪಸ್ಥಿತಿಯಲ್ಲಿ ಸುನಿತಾ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಒಟ್ಟು 18 ಆಟಗಾರ್ತಿಯರಿರುವ ತಂಡದ ಮುಂದಾಳತ್ವವನ್ನು ಲಾಕ್ರ ವಹಿಸಲಿದ್ದಾರೆ.
ಈ ಸಂದರ್ಭ ಉಪ ನಾಯಕಿ ಸ್ಥಾನವನ್ನು ಗೋಲ್ ಕೀಪರ್ ಸವಿತಾ ತುಂಬಲಿದ್ದಾರೆ.
ಏಷ್ಯಾನ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತದ ವನಿತಾ ತಂಡ 12 ವರ್ಷಗಳ ಬಳಿಕ ಸೆಮಿಫೈನಲ್ ಗೇರಿದ ಸಾಧನೆ ಮಾಡಿತ್ತು. ಈ ಕ್ರೀಡಾಕೂಟದಲ್ಲಿ ಭಾರತ ನಾಲ್ಕನೇ ಸ್ಥಾನದೊಂದಿಗೆ ಹಿಂದಿರುಗಿತ್ತು.
2016ರ ಏಷ್ಯಾನ್ ಚಾಂಪಿಯನ್ ಶಿಪ್ ಟ್ರೋಫಿ ಫೈನಲ್ ನಲ್ಲಿ ಭಾರತದ ವನಿತಾ ತಂಡ ಚೀನಾವನ್ನು ಸೋಲಿಸಿ ಟ್ರೋಫಿ ಗೆದ್ದಿಕೊಂಡಿತ್ತು. ಕಳೆದ ವರ್ಷವೂ ಫೈನಲ್ ನಲ್ಲಿ ಚೀನಾವನ್ನು ಭಾರತ ಬಗ್ಗುಬಡಿದಿತ್ತು. ಈ ವರ್ಷ ನಮ್ಮ ತಂಡ ಮೇ 13ರಂದು ಜಪಾನ್ ತಂಡದ ಸವಾಲು ಸ್ವೀಕರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications