ಜುಲೈ 23 ಮಂಗಳವಾರ, ಇಡೀ ವಿಶ್ವವೇ ಪ್ಯಾರಿಸ್ ಒಲಿಂಪಿಕ್ಸ್‌ಗೆ ಕಾಯುತ್ತಿದೆ. ಜುಲೈ 26 ರಿಂದ ಪ್ಯಾರಿಸ್ ಒಲಿಂಪಿಕ್ ಆರಂಭವಾಗಲಿದೆ.
ಭಾರತದಿಂದ 117 ಆಥ್ಲೀಟ್ಸ್ ಒಲಿಂಪಿಕ್ಸ್‌ನಲ್ಲಿ ಪದಕಗಳ ಬೇಟೆಯಾಡಲು ರೆಡಿಯಾಗಿದ್ದಾರೆ. ಜೊತೆಗೆ ಕೆಲವು ಬ್ರೇಕ್ ಮಾಡಲು ಸಾಧ್ಯವಾಗದ ಒಲಿಂಪಿಕ್ ದಾಖಲೆಗಳ ಮೇಲೂ ಅಥ್ಲೀಟ್ಸ್ ಕಣ್ಣು ಇಟ್ಟಿದ್ದಾರೆ. ಅಂತಹ 10 ಒಲಿಂಪಿಕ್ಸ್ ದಾಖಲೆಗಳ ಬಗ್ಗೆ ಮಾಹಿತಿ ಇಲ್ಲಿದೆ.

1) ಯುಲಿಮಾರ್ ರೋಜಾಸ್
2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ವೆನೆಜುವೆಲಾದ ಯುಲಿಮಾರ್ ರೋಜಾಸ್ ಅವರು, ಮಹಿಳೆಯರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ 15.67 (51.41 ಅಡಿ) ಮೀಟರ್ ಜಿಗಿಯುವ ಮೂಲಕ ಒಲಿಂಪಿಕ್ ದಾಖಲೆ ಸೃಷ್ಟಿದ್ದರು. ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರೋಜಾಸ್ ಮೂರು ದಶಕಗಳಿಂದ ನಿಂತಿದ್ದ ವಿಶ್ವದಾಖಲೆಯನ್ನೂ ಮುರಿದಿದ್ದರು. ರಿಯೊ ಒಲಿಂಪಿಕ್ಸ್‌ನಲ್ಲಿಯೂ ಬೆಳ್ಳಿ ಪದಕ ಗೆದ್ದಿದ್ದರು.
2) ಕಾರ್ಸ್ಟನ್ ವಾರ್ಹೋಮ್ಟೋಕಿಯೊ
ನಾರ್ವೆ ಓಟಗಾರ ಕಾರ್ಸ್ಟನ್ ವಾರ್ಹೋಮ್ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ 45.64 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ವಿಶ್ವದಾಖಲೆ ನಿರ್ಮಿಸಿದ್ದರು. ವಿಶೇಷವೆಂದರೆ ಈ ಸ್ಪರ್ಧೆಯಲ್ಲಿ ವಾರ್ಹೋಮ್ ಅವರ ಸಮಯವು ಇತರ 18 ಭಾಗವಹಿಸುವವರಿಗಿಂತ ಉತ್ತಮವಾಗಿತ್ತು. ಈವರೆಗೂ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.
3) ಸಿಡ್ನಿ ಮೆಕ್ಲಾಫ್ಲಿನ್-ಲೆವ್ರಾನ್
ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ ಅಮೇರಿಕಾದ ಸಿಡ್ನಿ ಮೆಕ್ಲಾಫ್ಲಿನ್-ಲೆವ್ರಾನ್ ಅವರು 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ 51.46 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ವಿಶ್ವ ದಾಖಲೆ ಬರೆದಿದ್ದರು. ವಿಶೇಷವೆಂದರೆ ಒಲಿಂಪಿಕ್ಸ್ ನಂತರವೂ ಸಿಡ್ನಿ ತನ್ನ ದಾಖಲೆಯನ್ನು ಎರಡು ಬಾರಿ ಮುರಿದಿದ್ದಾರೆ.
4) ಡೇವಿಡ್ ರುಡಿಶಾ
ಒಲಿಂಪಿಕ್ಸ್ 2012ರಲ್ಲಿ ಕೀನ್ಯಾದ ಮಧ್ಯಮ ದೂರ ಓಟಗಾರ ಡೇವಿಡ್ ರುಡಿಶಾ ಪುರುಷರ 800 ಮೀಟರ್ ಓಟದ ಸ್ಪರ್ಧೆಯಲ್ಲಿ 1:40.91 (1 ನಿಮಿಷ 41 ಸೆಕೆಂಡ್) ಗುರಿ ತಲುಪಿ ವಿಶ್ವ ದಾಖಲೆ ನಿರ್ಮಿಸಿದ್ದರು. ಈ ಪ್ರದರ್ಶನವು ಇಲ್ಲಿಯವರೆಗೆ ಶ್ರೇಷ್ಠ ಸಾಧನೆ ಆಗಿದೆ.
5) ಲಂಡನ್
ಒಲಿಂಪಿಕ್ಸ್ 2012ರಲ್ಲಿ ಜಮೈಕಾ ತಂಡ 4x100 ಮೀಟರ್ ರಿಲೇ ಓಟದಲ್ಲಿ 36.84 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ಹೊಸ ವಿಶ್ವ ದಾಖಲೆ ಬರೆದಿದ್ದರು. ಉಸೇನ್ ಬೋಲ್ಟ್ ಈ ಚಾಂಪಿಯನ್ ತಂಡದ ಭಾಗವಾಗಿದ್ದರು.
6) ಫ್ಲಾರೆನ್ಸ್ ಗ್ರಿಫಿತ್ ಜಾಯ್ನರ್ ಅಕಾ ಫ್ಲೋ-ಜೋ
ಅಮೆರಿಕದ ಫ್ಲಾರೆನ್ಸ್ ಗ್ರಿಫಿತ್ ಜಾಯ್ನರ್ ಅಕಾ ಫ್ಲೋ-ಜೋ 1988ರಲ್ಲಿ ಸಿಯೋಲ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ 200 ಮೀಟರ್ ಓಟದಲ್ಲಿ ನಿರ್ಮಿಸಿದ ವಿಶ್ವ ದಾಖಲೆ ಇಂದಿಗೂ ಮುರಿದಿಲ್ಲ. 200 ಮೀಟರ್ ಓಟದಲ್ಲಿ ಫ್ಲೋ-ಜೋ 21.34 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಇತಿಹಾಸ ಸೃಷ್ಟಿಸಿದ್ದರು.
7) ಮೈಕೆಲ್ ಫೆಲ್ಪ್ಸ್
ಅಮೇರಿಕದ ಈಜುಗಾರ ಮೈಕೆಲ್ ಫೆಲ್ಪ್ಸ್ ಒಲಿಂಪಿಕ್ಸ್ ಇತಿಹಾಸದಲ್ಲಿ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರನ್ನು ಶ್ರೇಷ್ಠ ಒಲಿಂಪಿಯನ್ ಎಂದೂ ಪರಿಗಣಿಸಲಾಗಿದೆ. ಮೈಕೆಲ್ ಫೆಲ್ಪ್ಸ್ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ (2008) ಅದ್ಭುತ ಸಾಧನೆ ಮಾಡಿದ್ದರು.
ಮೈಕೆಲ್ ಫೆಲ್ಪ್ಸ್ ಏಕೈಕ ಕ್ರೀಡಾಪಟುವಾಗಿ ಹೆಚ್ಚು ಪದಕಗಳನ್ನು ಗೆದ್ದಿದ್ದರು. ಮೈಕಲ್ ಫೆಲ್ಪ್ಸ್ ಅವರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ 8 ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ವಿಶ್ವದಾಖಲೆ ಮಾಡಿದ್ದರು. ಅಷ್ಟೇ ಅಲ್ಲ, ಈ ಪೈಕಿ 7 ಪಂದ್ಯಗಳಲ್ಲಿ ವಿಶ್ವದಾಖಲೆಯನ್ನೂ ಮುರಿದಿದ್ದರು.
8) ಉಸೇನ್ ಬೋಲ್ಟ್
ಜಮೈಕನ್ ವೇಗದ ಓಟಗಾರ ಉಸೇನ್ ಬೋಲ್ಟ್ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪುರುಷರ 100 ಮೀಟರ್ ಓಟದಲ್ಲಿ 9.69 ಸೆಕೆಂಡ್‌ಗಳಲ್ಲಿ ಕ್ರಮಿಸುವ ಯಾರಿಂದಲ್ಲೂ ಮರಿಯಲು ಸಾಧ್ಯಾವಾಗದ ದಾಖಲೆ ಬರೆದಿದ್ದರು.
ಉಸೇನ್ ಬೋಲ್ಟ್ ಸಾರ್ವಕಾಲಿಕ ಶ್ರೇಷ್ಠ ಒಲಿಂಪಿಕ್ ಅಥ್ಲೀಟ್‌ಗಳಲ್ಲಿ ಒಬ್ಬರಾಗಿದ್ದು, 2009ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತಮ್ಮದೇ ದಾಖಲೆಯನ್ನು ಮುರಿದ್ದರು.
9) ಬೀಮನ್, ರಾಬರ್ಟ್ ಆಲ್ಫ್ರೆಡ್ (ಬಾಬ್)
ಅಮೇರಿಕನ್ ಲಾಂಗ್ ಜಂಪರ್ ಬೀಮನ್ ಅವರು 1968 ರಲ್ಲಿ ಮೆಕ್ಸಿಕೋ ಸಿಟಿಯಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ 8.90 ಮೀಟರ್ (29.2 ಅಡಿ) ಜಿಗಿಯುವ ಮೂಲಕ ವಿಶ್ವ ದಾಖಲೆಯನ್ನು ಸ್ಥಾಪಿಸಿದರು.
ಈ ಜಿಗಿತವು ಅವರಿಗೆ ಚಿನ್ನದ ಪದಕವನ್ನು ತಂದು ಕೊಟ್ಟಿತು. ಆದರೆ ಅವರು ಆಗ ಇದ್ದ ದಾಖಲೆಗಿಂತ ಎರಡು ಅಡಿ ಮುಂದೆ ಹೋಗಿದ್ದರು. ಬೀಮನ್ ಅವರ ಈ ದಾಖಲೆಯ ಹತ್ತಿರ ಬರಲು ಇದುವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ.
10) ಕ್ಯಾಲೆಬ್ ಡ್ರೆಸೆಲ್ಟೋಕಿಯೊ
ಅಮೆರಿಕದ ಈಜುಗಾರರು ಕ್ಯಾಲೆಬ್ ಡ್ರೆಸೆಲ್ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ ಪುರುಷರ 100 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ 49.45 ಸೆಕೆಂಡುಗಳಲ್ಲಿ ವಿಶ್ವದಾಖಲೆ ನಿರ್ಮಿಸಿದ್ದರು. ಅವರು ಹಿಂದಿನ ವಿಶ್ವ ದಾಖಲೆಯನ್ನು 0.05 ಸೆಕೆಂಡುಗಳ ಅಂತರದಲ್ಲಿ ಮುರಿದ್ದರು.