Hockey India: ಭಾರತೀಯ ಹಾಕಿಯಲ್ಲಿ ಲಿಂಗ ಅಸಮಾನತೆ ವಿರುದ್ಧ ಸಿಡಿದೆದ್ದ ಮಹಿಳಾ ತಂಡದ ಕೋಚ್
'ಮಹಿಳೆಗೆ ಈ ದೇಶ ಅತ್ಯಂತ ಕಷ್ಟಕರವಾಗಿದೆ' ಎಂದು ಅಸಮಧಾನ ವ್ಯಕ್ತಪಡಿಸುತ್ತಾ, ಭಾರತೀಯ ಮಹಿಳಾ ಹಾಕಿ ತಂಡದ ಮೊದಲ ಮಹಿಳಾ ಕೋಚ್ ತನ್ನ ಎರಡೂವರೆ ವರ್ಷಗಳ ಹುದ್ದೆಯಲ್ಲಿ ತಾನು ಎದುರಿಸಿದ ದೈನಂದಿನ ಸವಾಲುಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಭಾರತೀಯ ಮಹಿಳಾ ಹಾಕಿ ತಂಡದ ಕೋಚ್ ಆಗಿರುವ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಜನ್ನೆಕೆ ಸ್ಕೊಪ್‌ಮನ್, ಕಳೆದ ಎರಡು ವರ್ಷಗಳಲ್ಲಿ ತಾನು ಏಕಾಂಗಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ತನಗೆ ಕೋಚ್ ಹುದ್ದೆ ನೀಡಿದ ಹಾಕಿ ಇಂಡಿಯಾದಿಂದ ಮೌಲ್ಯ ಮತ್ತು ಗೌರವವನ್ನು ಪಡೆದಿಲ್ಲ ಮತ್ತು ಪುರುಷರಿಗೆ ಹೋಲಿಸಿದರೆ ಮಹಿಳಾ ತಂಡಕ್ಕೆ ವಿಭಿನ್ನವಾದ ವರ್ತನೆಯನ್ನು ಹೊಂದಿದೆ ಎಂದು ಬಹಿರಂಗಪಡಿಸಿದರು.

46 ವರ್ಷದ ಜನ್ನೆಕೆ ಸ್ಕೋಪ್‌ಮನ್ ಅವರು, "ಕಾಮನ್‌ವೆಲ್ತ್ ಗೇಮ್ಸ್‌ನ ನಂತರ ಕೋಚ್ ಹುದ್ದೆ ತ್ಯಜಿಸಿ ತೆರಳಬೇಕಿತ್ತು. ಏಕೆಂದರೆ ಇದನ್ನು ನಿರ್ವಹಿಸಲು ನನಗೆ ತುಂಬಾ ಕಷ್ಟಕರವಾಗಿತ್ತು. ಆದರೂ ತಾನು ಉಳಿದಿದ್ದಕ್ಕಾಗಿ ಯಾವುದೇ ವಿಷಾದಿಸುವುದಿಲ್ಲ," ಎಂದು ಹೇಳಿದರು.
ಹಾಕಿ ಇಂಡಿಯಾದಲ್ಲಿ ಅಧಿಕಾರಿಗಳೊಂದಿಗೆ ವ್ಯವಹರಿಸುವ ಬಗ್ಗೆ ಮಾತನಾಡಿದ ಜನ್ನೆಕೆ ಸ್ಕೋಪ್‌ಮನ್, "ತುಂಬಾ ಕಷ್ಟ. ಏಕೆಂದರೆ, ನಾನು ಮಹಿಳೆಯರನ್ನು ಗೌರವಿಸುವ ಸಂಸ್ಕೃತಿಯಿಂದ ಬಂದವಳು. ನನಗೆ ಇಲ್ಲಿದೆ ಅಂತಾ ಅನಿಸುವುದಿಲ್ಲ," ಎಂದು ತಿಳಿಸಿದರು.
ಭುವನೇಶ್ವರದ ಬಿರ್ಸಾ ಮುಂಡಾ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಎಫ್‌ಐಎಚ್ ಪ್ರೊ ಲೀಗ್ ಪಂದ್ಯದಲ್ಲಿ ಭಾರತ ಟೈ ಬ್ರೇಕರ್ ಮೂಲಕ ಯುಎಸ್‌ಎ ತಂಡವನ್ನು ಸೋಲಿಸಿದ ಕೆಲವೇ ಕ್ಷಣಗಳಲ್ಲಿ ನೆದರ್ಲ್ಯಾಂಡ್ಸ್‌ನ ಮಹಿಳಾ ಮಾಜಿ ಹಾಕಿ ಆಟಗಾರ್ತಿ ಜನ್ನೆಕೆ ಸ್ಕೋಪ್‌ಮನ್ ಮಾತನಾಡಿದರು.
ಮೂರು ವರ್ಷಗಳ ಹಿಂದೆ ಟೊಕಿಯೋದಲ್ಲಿ ನಾಲ್ಕನೇ ಸ್ಥಾನ ಗಳಿಸಿದ ನಂತರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲವಾದ ಭಾರತ ತಂಡದೊಂದಿಗೆ ಅವರ ಭವಿಷ್ಯದ ಬಗ್ಗೆ ಕೇಳಿದಾಗ ಜನ್ನೆಕೆ ಸ್ಕೋಪ್‌ಮನ್ ಉತ್ತರಿಸಿದರು.
"ಬಹುಶಃ ಇದು ಕಠಿಣವೆಂದು ನನಗೆ ತಿಳಿದಿದ್ದರೂ ಸಹ, ನಾನು ಭಾರತೀಯ ಹುಡುಗಿಯರನ್ನು ಪ್ರೀತಿಸುತ್ತೇನೆ ಮತ್ತು ನಾನು ಅವರಲ್ಲಿ ತುಂಬಾ ಸಾಮರ್ಥ್ಯವನ್ನು ನೋಡುತ್ತೇನೆ. ಆದರೆ ಒಬ್ಬ ವ್ಯಕ್ತಿಯಾಗಿ ನನಗೆ ಇದು ತುಂಬಾ ಕಷ್ಟಕರವಾಗಿದೆ," ಎಂದರು.
2020ರ ಜನವರಿಯಲ್ಲಿ ಆಗಿನ ಮುಖ್ಯ ಕೋಚ್ ಸ್ಜೋರ್ಡ್ ಮರಿಜ್ನೆ ಅವರ ಸಿಬ್ಬಂದಿಯಲ್ಲಿ ವಿಶ್ಲೇಷಣಾತ್ಮಕ ಕೋಚ್ ಆಗಿ ಜನ್ನೆಕೆ ಸ್ಕೋಪ್‌ಮನ್ ಭಾರತಕ್ಕೆ ಬಂದರು. ಆ ಕ್ಷಣದಿಂದ, ಹಾಕಿ ನಡೆಸುತ್ತಿರುವವರಿಂದ ತಾನು ಯಾವುದೇ ಮೌಲ್ಯ ಪಡೆಯಲಿಲ್ಲ ಎಂದು ಹೇಳಿದರು.
"ನಾನು ಸಹಾಯಕ ಕೋಚ್ ಆಗಿದ್ದಾಗಲೂ ಕೆಲವರು ನನ್ನನ್ನು ಒಪ್ಪಿಕೊಳ್ಳಲಿಲ್ಲ ಅಥವಾ ಪ್ರತಿಕ್ರಿಯಿಸಲಿಲ್ಲ. ನಂತರ ನಾನು ಮುಖ್ಯ ಕೋಚ್ ಆಗುತ್ತಿದ್ದಂತೆ ಜನರು ನಮ್ಮ ಬಗ್ಗೆ ಆಸಕ್ತಿ ಹೊಂದಿದರು. ನಾನು ಅದರೊಂದಿಗೆ ಸಾಕಷ್ಟು ಹೋರಾಡಿದ," ಎಂದು ಭಾರತೀಯ ಮಹಿಳಾ ಹಾಕಿ ತಂಡದ ಕೋಚ್ ಜನ್ನೆಕೆ ಸ್ಕೋಪ್‌ಮನ್ ಅನುಭವ ಹಂಚಿಕೊಂಡರು.
ಟೊಕಿಯೋ ಒಲಿಂಪಿಕ್ಸ್‌ನ ನಂತರ ಸ್ಜೋರ್ಡ್ ಮರಿಜ್ನೆ ರಾಜೀನಾಮೆ ನೀಡಿದರು ಮತ್ತು ಆ ಸಮಯದಲ್ಲಿ ವಿನ್ಯಾಸಗೊಳಿಸಿದ ಉತ್ತರಾಧಿಕಾರ ಯೋಜನೆಯ ಪ್ರಕಾರ, ಮೊದಲು ಯುಎಸ್ಎ ಕೋಚ್ ಆಗಿದ್ದ ಜನ್ನೆಕೆ ಸ್ಕೋಪ್‌ಮನ್ ಅವರು ಭಾರತೀಯ ಮಹಿಳಾ ತಂಡದ ಮುಖ್ಯ ಕೋಚ್ ಹುದ್ದೆ ಜವಾಬ್ದಾರಿ ವಹಿಸಿಕೊಂಡರು. ಆದರೂ, ತಮ್ಮ ಅಭಿಪ್ರಾಯಗಳಿಗೆ ಬೆಲೆ ಇಲ್ಲ ಮತ್ತು ತನಗೆ ಹೆಚ್ಚಿನ ಬೆಂಬಲ ಸಿಗಲಿಲ್ಲ ಎಂದು ಅವರು ಹೇಳಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications