ಟೋಕಿಯೋ ಒಲಿಂಪಿಕ್ಸ್ ಹಾಕಿ: ಗ್ರೇಟ್ ಬ್ರಿಟನ್ ಎದುರು ತಲೆ ಬಾಗಿದ ಭಾರತೀಯ ಮಹಿಳಾ ತಂಡ

ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಮತ್ತೊಮ್ಮೆ ನಿರಾಸೆಯನ್ನು ಮೂಡಿಸಿದೆ. ಟೊಕಿಯೊ ಒಲಿಂಪಿಕ್ಸ್‌ನ ಆರನೇ ದಿನವಾದ ಇಂದು (ಜು. 28) ಭಾರತೀಯ ಮಹಿಳಾ ಹಾಕಿ ತಂಡ ಗ್ರೇಟ್ ಬ್ರಿಟನ್ ಮಹಿಳಾ ಹಾಕಿ ತಂಡದ ವಿರುದ್ಧ ಸೆಣಸಾಟ ನಡೆಸಿತು.
ಪೂಲ್ ಎ ತಂಡಗಳಾದ ಭಾರತ ಮತ್ತು ಗ್ರೇಟ್ ಬ್ರಿಟನ್ ಈ ತಂಡಗಳು ನಡೆಸಿದ ಸೆಣಸಾಟದಲ್ಲಿ ಗ್ರೇಟ್ ಬ್ರಿಟನ್ ಮಹಿಳಾ ತಂಡದ ವಿರುದ್ಧ ಭಾರತ ಮಹಿಳಾ ತಂಡ ತಲೆಬಾಗಿದೆ. ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಗ್ರೇಟ್ ಬ್ರಿಟನ್ ಮಹಿಳಾ ಹಾಕಿ ತಂಡ ಭಾರತ ಮಹಿಳಾ ಹಾಕಿ ತಂಡದ ವಿರುದ್ಧ 4-1 ಅಂತರದಿಂದ ಜಯ ಸಾಧಿಸಿತು. ಭಾರತದ ಪರ ಶರ್ಮಿಳಾ ದೇವಿ ಒಂದು ಗೋಲು ಬಾರಿಸಿದ್ದು ಬಿಟ್ಟರೆ ಬೇರಾವ ಆಟಗಾರ್ತಿಯೂ ಸಹ ಗೋಲ್ ಬಾರಿಸಲಿಲ್ಲ.
ಅತ್ತ ಗ್ರೇಟ್ ಬ್ರಿಟನ್ ತಂಡದ ಹನ್ನಾ ಮಾರ್ಟಿನ್ 2 ಹಾಗೂ ಎಲ್ ಓವ್ಸ್ಲಿ ಮತ್ತು ಜಿ ಬಾಲ್ಸ್ಡೊನ್ ತಲಾ ಒಂದೊಂದು ಗೋಲು ಬಾರಿಸಿದರು. ಇದರಲ್ಲಿ 2 ಗೋಲ್ ಬಾರಿಸಿ ಹನ್ನಾ ಮಾರ್ಟಿನ್ ಮಿಂಚಿದರು. ಹೀಗೆ ಗ್ರೇಟ್ ಬ್ರಿಟನ್ ಮಹಿಳಾ ತಂಡದ ಮುಂದೆ ತಲೆಬಾಗಿದ ಭಾರತೀಯ ಮಹಿಳಾ ಹಾಕಿ ತಂಡ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ತನ್ನ ಮೂರನೇ ಸೋಲನ್ನು ಕಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications