For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಜಪಾನ್‌ಗೆ ಸೋಲುಣಿಸಿದ ಭಾರತೀಯ ಹಾಕಿ ತಂಡ

Tokyo Olympics 2020, Hockey India’s men’s team beat Japan

ಟೋಕಿಯೋ: ಭಾರತೀಯ ಪುರುಷರ ಹಾಕಿ ತಂಡ ಪ್ರಿ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಜಪಾನ್ ತಂಡವನ್ನು 5-3ರ ಅಂತರದಿಂದ ಸೋಲಿಸಿದೆ. ಇದರೊಂದಿಗೆ ಭಾರತೀಯ ಪುರುಷರ ಹಾಕಿ ತಂಡ ಫೀಲ್ಡ್ ಹಾಕಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆಯಲ್ಲದೆ ಗ್ರೂಪ್‌ 'ಎ'ಯಲ್ಲಿ ಆಸ್ಟ್ರೇಲಿಯಾ ತಂಡದ ಬಳಿಕ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಭಾರತೀಯ ರಾಷ್ಟ್ರೀಯ ಹಾಕಿ ಕ್ರೀಡೆಯಲ್ಲಿ ಪುರುಷರ ತಂಡ ಪದಕದಾಸೆ ಉಳಿಸಿಕೊಂಡಿದೆ.

ಶುಕ್ರವಾರ (ಜುಲೈ 30)ಕ್ಕೆ ಪುರುಷರ ಹಾಕಿ ತಂಡ ಜಪಾನ್‌ ವಿರುದ್ಧ ಸ್ಪರ್ಧಿಸುವ ಮುನ್ನವೇ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡಿತ್ತು. ಆದರೆ ಜಪಾನ್ ವಿರುದ್ಧದ ಗೆಲುವಿನ ಬಳಿಕ ಭಾರತ ಕ್ವಾರ್ಟರ್ ಫೈನಲ್‌ ಪ್ರವೇಶವನ್ನು ಗಟ್ಟಿಗೊಳಿಸಿಕೊಂಡಿದೆ.

ಗುರ್ಜನ್ ಸಿಂಗ್ ಎರಡು ಗೋಲ್

ಗುರ್ಜನ್ ಸಿಂಗ್ ಎರಡು ಗೋಲ್

ಭಾರತೀಯ ಪುರುಷರ ಹಾಕಿ ತಂಡದ ಪರ ಗೋಲ್ ಖಾತೆ ತೆರೆದಿದ್ದು ಹರ್ಮನ್‌ಪ್ರೀತ್‌ ಸಿಂಗ್ ಅವರು. ಹರ್ಮನ್‌ಪ್ರೀತ್‌ ಸಿಂಗ್ 13ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡದ ಗೋಲ್ ಖಾತೆ ತೆರೆದರು. ಅದಾಗಿ 17ನೇ ನಿಮಿಷದಲ್ಲಿ ಗುರ್ಜತ್ ಸಿಂಗ್‌ ದ್ವಿತೀಯ ಗೋಲ್ ಬಾರಿಸಿ ತಂಡದ ಗೋಲ್ ಹೆಚ್ಚಿಸಿದರು. ಭಾರತೀಯರ ಪಾರಮ್ಯ ಅಲ್ಲಿಗೆ ನಿಲ್ಲಲಿಲ್ಲ. ಶಂಶೀರ್ ಸಿಂಗ್ 34ನೇ ನಿಮಿಷದಲ್ಲಿ ತಂಡದ ಪರ ಮೂರನೇ ಗೋಲ್ ಸಿಡಿಸಿದರು. ಪಂದ್ಯದ ದ್ವಿತೀಯಾರ್ಧದಲ್ಲಿ ಕೊನೇ ಘಳಿಗೆಯಲ್ಲಿ ನಿಲಕಂಠ ಶರ್ಮಾ 51ನೇ ನಿಮಿಷದಲ್ಲಿ ತಂಡದ ಗೋಲ್ ಸಂಖ್ಯೆಯನ್ನು 4ಕ್ಕೆ ಏರಿಸಿದರು. ಆಟ ಮುಗಿಯಲು ಇನ್ನು ಕೆಲವೇ ನಿಮಿಷಗಳು ಬಾಕಿಯಿದೆ ಎನ್ನುವಾಗ ಅಂದರೆ 56ನೇ ನಿಮಿಷದಲ್ಲಿ ಗುರ್ಜಂತ್ ಸಿಂಗ್ ತಂಡದ ಪರ 5ನೇ ಗೋಲ್ ಬಾರಿಸಿದರು. ಇದು ಪಂದ್ಯದಲ್ಲಿ ಗುರ್ಜಂತ್ ಬಾರಿಸಿದ ಎರಡನೇ ವೈಯಕ್ತಿಕ ಗೋಲ್.

ಜಪಾನ್‌ನಿಂದಲೂ ಉತ್ತಮ ಸೆಣಸಾಟ

ಜಪಾನ್‌ನಿಂದಲೂ ಉತ್ತಮ ಸೆಣಸಾಟ

ಜಪಾನ್‌ ತಂಡ ಪಂದ್ಯ ಸೋತಿತಾದರೂ ಆ ತಂಡದಿಂದಲೂ ಉತ್ತಮ ಪೈಪೋಟಿ ಕಾಣಸಿಕ್ಕಿತು. ಅಸಲಿಗೆ ಪಂದ್ಯದಲ್ಲಿ ಗೋಲ್ ಖಾತೆ ತೆರೆದಿದ್ದೇ ಜಪಾನ್ ತಂಡ. ಪಂದ್ಯದ 7ನೇ ನಿಮಿದಲ್ಲಿ ಜಪಾನ್‌ ಪರ ಕಾಜುಮಾ ಮುರತಾ ಅವರು ಗೋಲ್ ಬಾರಿಸಿ ಆತಿಥೇಯ ತಂಡಕ್ಕೆ ಹುರಿದುಂಬಿಸಿದರು. ಕೇವಲ ಎರಡನೇ ನಿಮಿಷ ಗ್ಯಾಪ್‌ನಲ್ಲಿ ಅಂದರೆ 9ನೇ ನಿಮಿಷದಲ್ಲಿ ಜಪಾನ್‌ನಿಂದ ಮತ್ತೊಂದು ಗೋಲ್ ದಾಖಲಾಯ್ತು. ಕೆಂಟಾ ತನಕಾ ಅವರು ಗೋಲ್ ಬಾರಿಸಿ ಭಾರತ ತಂಡವನ್ನು ಭೀತಿಗೆ ತಳ್ಳಿದ್ದರು. ಮತ್ತೊಬ್ಬ ಜಪಾನ್ ಆಟಗಾರ ಕೋಟಾ ವಟನಾಬೆ 31ನೇ ನಿಮಿಷದಲ್ಲಿ ತಂಡದ ಪರ ಮೂರನೇ ಗೋಲ್ ಬಾರಿಸಿದರು. ಹೀಗಾಗಿ ಭಾರತ ವಿರುದ್ಧ ಜಪಾನ್‌ ತಂಡ 5-3ರಿಂದ ಸೋಲಿನ ಅಂತರ ಕಡಿಮೆ ಮಾಡಿಕೊಂಡಿತು.

ಮಹಿಳಾ ತಂಡಕ್ಕೂ ಗೆಲುವು

ಮಹಿಳಾ ತಂಡಕ್ಕೂ ಗೆಲುವು

ಭಾರತೀಯ ಪುರುಷರ ಹಾಕಿ ತಂಡ ಇಲ್ಲೀವರೆಗೆ ಒಟ್ಟಿಗೆ 5 ಪಂದ್ಯಗಳನ್ನು ಆಡಿದೆ. ಇದರಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಭಾರತೀಯ ಫೀಲ್ಡ್ ಹಾಕಿ ತಂಡ ಸೋತಿದ್ದೆಂದರೆ ಆಸ್ಟ್ರೇಲಿಯಾ ವಿರುದ್ಧ. ಆ ಪಂದ್ಯದಲ್ಲಿ ಭಾರತ ತಂಡ 1-7ರ ಸೋಲನುಭವಿಸಿತ್ತು. ಭಾರತೀಯ ಮಹಿಳಾ ಹಾಕಿ ತಂಡ ಕೂಡ ಶುಕ್ರವಾರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗೆಲುವಿನ ಖಾತೆ ತೆರೆದಿದೆ. ಐರ್ಲೆಂಡ್ ವಿರುದ್ಧ ಭಾರತ ವನಿತಾ ತಂಡ 1-0 ಗಳ ಅಂತರದಿಂದ ಜಯ ಸಾಧಿಸಿದೆ. ಹೀಗಾಗಿ ಭಾರತೀಯ ಮಹಿಳಾ ಹಾಕಿ ತಂಡದ ಕ್ವಾರ್ಟರ್ ಫೈನಲ್ ಆಸೆ ಕೂಡ ಇನ್ನೂ ಜೀವಂತವಾಗಿದೆ. ಭಾರತೀಯ ಮಹಿಳಾ ತಂಡ ಶನಿವಾರ ನಡೆಯುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದರೆ ಮತ್ತು ಐರ್ಲೆಂಡ್ ತಂಡ ಗ್ರೇಟ್ ಬ್ರಿಟನ್ ವಿರುದ್ಧ ಗೆಲ್ಲದಿದ್ದರೆ, ಒಲಿಂಪಿಕ್ ಕ್ರೀಡಾಕೂಟದ ನಾಕೌಟ್ ಹಂತದಲ್ಲಿ ಭಾರತೀಯರು ಮೊದಲ ಬಾರಿಗೆ ತಮ್ಮ ಸ್ಥಾನವನ್ನು ಕಾಯ್ದಿರಿಸಲಿದ್ದಾರೆ.

Story first published: Friday, July 30, 2021, 18:43 [IST]
Other articles published on Jul 30, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+