ಟೋಕಿಯೋ ಒಲಿಂಪಿಕ್ಸ್: ಅರ್ಜೆಂಟೈನಾ ವಿರುದ್ಧ ಭರ್ಜರಿ ಗೆಲುವು, ಕ್ವಾರ್ಟರ್ ಫೈನಲ್‌ಗೆ ಭಾರತ ಹಾಕಿ ತಂಡ!

ಭಾರತ ಪುರುಷರ ಹಾಕಿ ತಂಡ ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ತಮ್ಮ ಮೂರನೇ ಜಯವನ್ನು ದಾಖಲಿಸಿದೆ. ನ್ಯೂಜಿಲೆಂಡ್ ವಿರುದ್ಧ ಮೊದಲನೇ ಪಂದ್ಯದಲ್ಲಿ ಸೆಣಸಾಡಿದ ಭಾರತ ಹಾಕಿ ತಂಡ ಗೆಲುವನ್ನು ಸಾಧಿಸಿತ್ತು ತದನಂತರ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತಿದ್ದ ಭಾರತ ಹಾಕಿ ತಂಡ ಮಂಗಳವಾರ ನಡೆದ ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವುದರ ಮೂಲಕ ಗೆಲುವಿನ ಹಾದಿಗೆ ಮರಳಿತು.
ಹಾಗೂ ಗುರುವಾರದಂದು ಅರ್ಜೆಂಟೀನಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಪುರುಷರ ಹಾಕಿ ತಂಡ 3-1 ಅಂತರದಲ್ಲಿ ಗೆಲುವು ಸಾಧಿಸುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. 2016ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅರ್ಜೆಂಟೈನಾ ಟೀಮ್ ಇಂಡಿಯಾದ ಭರ್ಜರಿ ಆಟದ ಮುಂದೆ ಮಂಕಾಯಿತು. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಟೀಂ ಇಂಡಿಯಾ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಭಾರತ ಮತ್ತು ಅರ್ಜೆಂಟೀನಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲೆರಡು ಕ್ವಾರ್ಟರ್‌ನಲ್ಲಿ ಇತ್ತಂಡಗಳು ಯಾವುದೇ ಗೋಲ್ ಬಾರಿಸದೆ ತೀವ್ರ ಪೈಪೋಟಿ ನಡೆಸುತ್ತಿದ್ದವು. ಮೂರನೇ ಕ್ವಾರ್ಟರ್‌ನ ಕೊನೆಯ ಹಂತದಲ್ಲಿ ಭಾರತದ ಪರ ವರುಣ್ ಕುಮಾರ್ ಮೊದಲನೆಯ ಗೋಲನ್ನು ಬಾರಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ನಾಲ್ಕನೇ ಕ್ವಾರ್ಟರ್ ಶುರುವಾದ ಕೂಡಲೇ ಅರ್ಜೆಂಟೈನಾದ ಮಿಯಾಕೋ ತಮ್ಮ ತಂಡದ ಪರ ಮೊದಲ ಗೋಲು ಸಿಡಿಸಿದರು.
ಹೀಗೆ ಭಾರತ ಮತ್ತು ಅರ್ಜೆಂಟೈನಾ ತಂಡಗಳೆರಡೂ ತಲಾ ಒಂದೊಂದು ಗೋಲು ಬಾರಿಸಿ ನಾಲ್ಕನೇ ಕ್ವಾರ್ಟರ್‌ನ ಕೊನೆಯ ಹಂತದವರೆಗೂ ತೀವ್ರ ಜಿದ್ದಾಜಿದ್ದಿ ನಡೆಸಿದವು. ಕೊನೆ ಹಂತದಲ್ಲಿ ವಿವೇಕ್ ಸಾಗರ್ ಮತ್ತು ಹರ್ಮನ್ ಪ್ರೀತ್ ಸಿಂಗ್ ತಲಾ ಒಂದೊಂದು ಗೋಲು ಬಾರಿಸುವುದರ ಮೂಲಕ ಭಾರತಕ್ಕೆ 3-1 ಅಂತರದ ಜಯ ಸಾಧಿಸಲು ಸಾಧ್ಯವಾಯಿತು.

ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ
ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್ ಭಾರತ ತಂಡ ಗ್ರೂಪ್ ಎ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಆಸ್ಟ್ರೇಲಿಯಾ ತಂಡ ಅಗ್ರ ಸ್ಥಾನದಲ್ಲಿದ್ದು ಭಾರತ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಪದಕದ ಭರವಸೆ ಮೂಡಿಸಿರುವ ಹಾಕಿ ತಂಡ
ಭಾರತೀಯ ಪುರುಷರ ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತಾಗ ಹಲವಾರು ಮಾಜಿ ಹಾಕಿ ಆಟಗಾರರು ಟೀಮ್ ಇಂಡಿಯಾ ಹಾಕಿ ತಂಡ ಬಲವಾಗಿ ಗೆಲುವಿನ ಹಾದಿಗೆ ಬರಲಿದೆ ಎಂದು ಹೇಳಿದ್ದರು. ಅವರು ಹೇಳಿದ ರೀತಿಯೇ ಇದೀಗ ಟೀಮ್ ಇಂಡಿಯಾ ಹಾಕಿ ತಂಡ ಬಲವಾಗಿ ಗೆಲುವಿನ ಹಾದಿಗೆ ಮರಳಿದ್ದು ಪದಕ ಗೆಲ್ಲುವ ಭರವಸೆಯನ್ನು ಕೂಡ ಹುಟ್ಟು ಹಾಕಿದೆ.

ಕ್ವಾರ್ಟರ್ ಫೈನಲ್ ಪ್ರವೇಶ
ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇದುವರೆಗೂ 4 ಪಂದ್ಯಗಳನ್ನಾಡಿರುವ ಭಾರತ ಪುರುಷರ ಹಾಕಿ ತಂಡ 3 ಪಂದ್ಯಗಳಲ್ಲಿ ಜಯ ಸಾಧಿಸುವುದರ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications