ಟೋಕಿಯೋ ಒಲಿಂಪಿಕ್ಸ್: ಪದಕದಾಸೆ ಹುಟ್ಟಿಸಿದ ಭಾರತ ವನಿತೆಯರ ಹಾಕಿ ತಂಡ, ಆದರೆ ಗೆಲುವು ಸುಲಭವಲ್ಲ!

ಭಾರತೀಯ ಮಹಿಳಾ ಹಾಕಿ ತಂಡ ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನ ಆರಂಭದ 3 ಪಂದ್ಯಗಳಲ್ಲಿ ಸತತವಾಗಿ ಸೋತು ನಿರಾಸೆ ಮೂಡಿಸಿತ್ತು. ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಭಾರತೀಯ ಮಹಿಳಾ ಹಾಕಿ ತಂಡ ಶುಕ್ರವಾರದಂದು ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಜಯ ಸಾಧಿಸುವುದರ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗೆಲುವಿನ ಖಾತೆ ತೆರೆಯಿತು. ನಂತರ ಶನಿವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸುವುದರ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ ಭಾರತ ವನಿತೆಯರ ಹಾಕಿ ತಂಡ ಈಗ ಕ್ವಾರ್ಟರ್ ಫೈನಲ್ ಸುತ್ತಿಗೆ ಅರ್ಹತೆಯನ್ನು ಪಡೆದುಕೊಂಡಿದೆ.
ಶನಿವಾರದಂದು ನಡೆದ ಗ್ರೂಪ್ ಹಂತದ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ವನಿತೆಯರ ಹಾಕಿ ತಂಡಗಳು ಸೆಣಸಾಡಿದವು. ಈ ಹಣಾಹಣಿಯಲ್ಲಿ ಭಾರತೀಯ ವನಿತೆಯರ ಹಾಕಿ ತಂಡ ದಕ್ಷಿಣ ಆಫ್ರಿಕಾ ವನಿತೆಯರ ಹಾಕಿ ತಂಡದ ವಿರುದ್ಧ 4-3 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಭಾರತದ ಹಾಕಿ ಆಟಗಾರ್ತಿ ವಂದನಾ ಕಟಾರಿಯಾ ಬಾರಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.
ಆದರೆ ಭಾರತೀಯ ವನಿತೆಯರ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಬೇಕಾದರೆ ಐರ್ಲೆಂಡ್ ವನಿತೆಯರ ಹಾಕಿ ತಂಡ ಗ್ರೇಟ್ ಬ್ರಿಟನ್ ನ ವನಿತೆಯರ ಹಾಕಿ ತಂಡದ ವಿರುದ್ಧ ಸೋಲಬೇಕಿತ್ತು ಅಥವಾ ಆ ಪಂದ್ಯ ಡ್ರಾ ಆಗಬೇಕಿತ್ತು. ಹೀಗಿದ್ದಾಗ ಮಾತ್ರ ಭಾರತಕ್ಕೆ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಅವಕಾಶ ಸಿಗುತ್ತಿತ್ತು. ಅಂದುಕೊಂಡ ಹಾಗೆ ಗ್ರೇಟ್ ಬ್ರಿಟನ್ ವನಿತೆಯರ ಹಾಕಿ ತಂಡ ಐರ್ಲೆಂಡ್ ವನಿತೆಯರ ಹಾಕಿ ತಂಡದ ವಿರುದ್ಧ ಜಯ ಸಾಧಿಸುವುದರ ಮೂಲಕ ಭಾರತೀಯ ವನಿತೆಯರ ಹಾಕಿ ತಂಡಕ್ಕೆ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಅವಕಾಶ ಲಭಿಸಿದೆ.

ವಂದನಾ ಕಟಾರಿಯಾ ಹ್ಯಾಟ್ರಿಕ್ ಗೋಲುಗಳೇ ಗೆಲುವು ತಂದು ಕೊಟ್ಟಿತು
ಭಾರತ ಮತ್ತು ದಕ್ಷಿಣ ಆಫ್ರಿಕಾ ವನಿತೆಯರ ಹಾಕಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 4-3 ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸಿತು. ಹೀಗೆ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಲು ಪ್ರಮುಖ ಕಾರಣ ವಂದನಾ ಕಟಾರಿಯಾ ಬಾರಿಸಿದ ಹ್ಯಾಟ್ರಿಕ್ ಗೋಲುಗಳು. ಭಾರತದ ಆಟಗಾರ್ತಿ ವಂದನಾ ಕಟಾರಿಯಾ 49, 17 ಹಾಗೂ 4ನೇ ನಿಮಿಷಗಳಲ್ಲಿ ಗೋಲುಗಳನ್ನು ಬಾರಿಸಿ ಭಾರತದ ಗೆಲುವಿನ ರೂವಾರಿ ಎನಿಸಿಕೊಂಡರು.

ಭಾರತೀಯ ಪುರುಷರ ಹಾಕಿ ತಂಡ ಕೂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ
ಶನಿವಾರದಂದು ಭಾರತೀಯ ಮಹಿಳೆಯರ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದರೆ, ಇದಕ್ಕೂ ಮೊದಲು ಭಾರತೀಯ ಪುರುಷರ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್ 2020ರ ಹಾಕಿ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದೆ. ಅರ್ಹತಾ ಸುತ್ತಿನ 5 ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಜಯ ಗಳಿಸಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಭಾರತೀಯ ಪುರುಷರ ಹಾಕಿ ತಂಡ ಸೋಲುಂಡಿತ್ತು. ಇನ್ನು ಭಾರತೀಯ ಪುರುಷರ ಹಾಕಿ ತಂಡ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಗ್ರೇಟ್ ಬ್ರಿಟನ್ ಪುರುಷರ ಹಾಕಿ ತಂಡದ ವಿರುದ್ಧ ಸೆಣಸಾಡಲಿದ್ದು ಭಾನುವಾರ ಸಂಜೆ 5:30ಕ್ಕೆ ಈ ಪಂದ್ಯ ನಡೆಯಲಿದೆ.

ಭಾರತೀಯ ವನಿತೆಯರ ಕ್ವಾರ್ಟರ್ ಫೈನಲ್ ಎದುರಾಳಿ ಬಹಳ ಶಕ್ತಿಶಾಲಿ
ಭಾರತೀಯ ವನಿತೆಯರ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶವನ್ನೇನೋ ಪಡೆದುಕೊಂಡಿದೆ. ಆದರೆ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಭಾರತ ತಂಡಕ್ಕೆ ಎದುರಾಳಿಯಾಗಿ ಆಸ್ಟ್ರೇಲಿಯಾ ವನಿತೆಯರ ಹಾಕಿ ತಂಡ ಸೆಣಸಾಡಲಿದೆ. ಅರ್ಹತಾ ಸುತ್ತಿನಲ್ಲಿ ಬಿ ಗುಂಪಿನಲ್ಲಿದ್ದ ಆಸ್ಟ್ರೇಲಿಯಾ ವನಿತೆಯರ ಹಾಕಿ ತಂಡ ಆಡಿದ್ದ 5 ಪಂದ್ಯಗಳ ಪೈಕಿ ಐದರಲ್ಲಿಯೂ ಜಯ ಸಾಧಿಸಿತ್ತು. ಹೀಗೆ ಅರ್ಹತಾ ಸುತ್ತಿನಲ್ಲಿ ಯಾವುದೇ ಪಂದ್ಯವನ್ನು ಸೋಲದೆ ಇರುವ ಬಲಿಷ್ಠ ಆಸ್ಟ್ರೇಲಿಯಾ ವನಿತೆಯರ ಹಾಕಿ ತಂಡದ ವಿರುದ್ಧ ಭಾರತೀಯ ವನಿತೆಯರ ಹಾಕಿ ತಂಡ ಸೆಣಸಾಡಲಿದೆ. ಆಸ್ಟ್ರೇಲಿಯಾ ಮತ್ತು ಭಾರತ ವನಿತೆಯರ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications