ಹಾಕಿ: ಬಲಿಷ್ಠ ಆಸ್ಟ್ರೇಲಿಯಾವನ್ನು ಸದೆಬಡಿದು ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ತಂಡ!

ಒಲಿಂಪಿಕ್ಸ್ ನಲ್ಲಿ ದಾಖಲೆ ಬರೆದ ಭಾರತದ ಮಹಿಳಾ ಹಾಕಿ ಟೀಮ್ | Oneindia Kannada

ಟೋಕಿಯೋ ಒಲಿಂಪಿಕ್ಸ್ ಪೂಲ್ ಹಂತದ ಮೊದಲ 3 ಪಂದ್ಯಗಳಲ್ಲಿ ಸತತವಾಗಿ ಸೋಲುವುದರ ಮೂಲಕ ಭಾರೀ ದೊಡ್ಡ ಮಟ್ಟದ ನಿರಾಸೆಯನ್ನು ಹುಟ್ಟುಹಾಕಿದ್ದ ಭಾರತೀಯ ವನಿತೆಯರ ಹಾಕಿ ತಂಡ ಕೊನೆಯ 2 ಪಂದ್ಯಗಳನ್ನು ಗೆಲ್ಲುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶವನ್ನು ಪಡೆದುಕೊಂಡಿತು. ಹೀಗೆ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದ ಭಾರತೀಯ ವನಿತೆಯರ ಹಾಕಿ ತಂಡ ಬಲಿಷ್ಠ ಆಸ್ಟ್ರೇಲಿಯಾ ವನಿತೆಯರ ಹಾಕಿ ತಂಡದ ವಿರುದ್ಧ 1-0 ಅಂತರದಲ್ಲಿ ಜಯ ಗಳಿಸುವುದರ ಮೂಲಕ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದೆ.

ಕ್ವಾರ್ಟರ್ ಫೈನಲ್ 3 ಪಂದ್ಯದಲ್ಲಿ ಸೆಣಸಾಡಿದ ಬಲಿಷ್ಠ ಆಸ್ಟ್ರೇಲಿಯ ಮಹಿಳಾ ತಂಡ ಮತ್ತು ಭಾರತ ಮಹಿಳಾ ಹಾಕಿ ತಂಡಗಳ ನಡುವಿನ ಪಂದ್ಯದಲ್ಲಿ ಆಸ್ಟ್ರೇಲಿಯ ಮೇಲುಗೈ ಸಾಧಿಸಲಿದೆ ಎಂದು ಎಲ್ಲರೂ ಊಹಿಸಿದ್ದರು. ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇದುವರೆಗೆ ಯಾವುದೇ ಪಂದ್ಯದಲ್ಲಿಯೂ ಸೋಲದೆ ಯಶಸ್ವಿ ಹಾದಿಯಲ್ಲಿ ಮುನ್ನೆಡೆದು ಬಂದಿದ್ದ ಆಸ್ಟ್ರೇಲಿಯಾ ವನಿತೆಯರ ಹಾಕಿ ತಂಡಕ್ಕೆ ಭಾರತೀಯ ವನಿತೆಯರ ಹಾಕಿ ತಂಡ ಮಣ್ಣುಮುಕ್ಕಿಸಿದೆ.

ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಭಾರತೀಯ ವನಿತೆಯರ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಹೌದು ಇತಿಹಾಸದಲ್ಲಿಯೇ ಇದುವರೆಗೂ ಭಾರತೀಯ ವನಿತೆಯರ ಹಾಕಿ ತಂಡ ಯಾವುದೇ ಒಲಿಂಪಿಕ್ಸ್‌ನಲ್ಲಿಯೂ ಸೆಮಿಫೈನಲ್ ಹಂತವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾರತ ವನಿತೆಯರ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸಿದ್ದು ಎಲ್ಲೆಡೆ ದೊಡ್ಡ ಮಟ್ಟದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಗುರ್ಜಿತ್ ಕೌರ್ ಗೆಲುವಿನ ರೂವಾರಿ

ಗುರ್ಜಿತ್ ಕೌರ್ ಗೆಲುವಿನ ರೂವಾರಿ

ಭಾರತ ಮಹಿಳಾ ಹಾಕಿ ತಂಡ ಮತ್ತು ಆಸ್ಟ್ರೇಲಿಯಾ ಮಹಿಳಾ ಹಾಕಿ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದ ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿ ಗುರ್ಜಿತ್ ಕೌರ್ ಬಾರಿಸಿದ ಗೋಲ್ ಸಹಾಯದಿಂದಲೇ ಆಸ್ಟ್ರೇಲಿಯಾ ತಂಡವನ್ನು ಭಾರತ ಮಹಿಳಾ ತಂಡ ಸದೆಬಡಿಯಿತು .

ಭಾರತ ವನಿತೆಯರ ಹಾಕಿ ತಂಡ ಗೆದ್ದು ಬಂದ ಹಾದಿ

ಭಾರತ ವನಿತೆಯರ ಹಾಕಿ ತಂಡ ಗೆದ್ದು ಬಂದ ಹಾದಿ

ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆರಂಭದ 3ಪಂದ್ಯಗಳಲ್ಲಿ ಸತತವಾಗಿ ಸೋಲುವ ಮೂಲಕ ನಿರಾಸೆಯನ್ನು ಮೂಡಿಸಿದೆ ಭಾರತೀಯ ವನಿತೆಯರ ಹಾಕಿ ತಂಡ ಪೂಲ್ ಹಂತದ ಕೊನೆಯ 2 ಪಂದ್ಯಗಳಲ್ಲಿ ಜಯ ಸಾಧಿಸುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಕಳೆದ ಶುಕ್ರವಾರದಂದು ನಡೆದ ಪಂದ್ಯದಲ್ಲಿ ಐರ್ಲೆಂಡ್ ಮಹಿಳಾ ಹಾಕಿ ತಂಡದ ವಿರುದ್ಧ ಭಾರತ ಮಹಿಳಾ ಹಾಕಿ ತಂಡ ಜಯ ಸಾಧಿಸಿತು, ನಂತರ ಶನಿವಾರ ನಡೆದ ಪೂಲ್ ಹಂತದ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ಹಾಕಿ ತಂಡದ ವಿರುದ್ಧ ಭಾರತೀಯ ವನಿತೆಯರು 4-3 ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿತ್ತು. ಕೊನೆಗೆ ಐರ್ಲೆಂಡ್ ವಿರುದ್ಧ ಗ್ರೇಟ್ ಬ್ರಿಟನ್ ಮಹಿಳಾ ಹಾಕಿ ತಂಡ ಗೆಲುವು ಸಾಧಿಸಿದ ಕಾರಣ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ ಭಾರತೀಯ ವನಿತೆಯರ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಅವಕಾಶ ಪಡೆದುಕೊಂಡಿತು. ಹೀಗೆ ಕ್ವಾರ್ಟರ್ ಫೈನಲ್ಸ್ ಹಂತದಲ್ಲಿ ಆಸ್ಟ್ರೇಲಿಯಾ ವನಿತೆಯರ ಹಾಕಿ ತಂಡದ ವಿರುದ್ಧ ಸೆಣಸಾಡಿದ ಭಾರತೀಯ ಮಹಿಳಾ ಹಾಕಿ ತಂಡ 1-0 ಅಂತರದಿಂದ ಜಯ ಗಳಿಸುವುದರ ಮೂಲಕ ಸೆಮಿಫೈನಲ್ ಪ್ರವೇಶ ಮಾಡಿದೆ.

ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಭಾರತೀಯ ವನಿತೆಯರ ಹಾಕಿ ತಂಡ

ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಭಾರತೀಯ ವನಿತೆಯರ ಹಾಕಿ ತಂಡ

ಆಸ್ಟ್ರೇಲಿಯಾ ವಿರುದ್ಧ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ 1-0 ಅಂತರದಿಂದ ಜಯ ಸಾಧಿಸುವುದರ ಮೂಲಕ ಭಾರತೀಯ ವನಿತೆಯರ ಹಾಕಿ ತಂಡ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶ ಮಾಡುವ ಮೂಲಕ ದಾಖಲೆ ಬರೆದಿದೆ. ಮೊದಲ ಬಾರಿಗೆ ಒಲಿಂಪಿಕ್ಸ್ ಇತಿಹಾಸದಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಭಾರತ ವನಿತೆಯರ ಹಾಕಿ ತಂಡಕ್ಕೆ ದೊಡ್ಡ ಮಟ್ಟದ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

For Quick Alerts
ALLOW NOTIFICATIONS
For Daily Alerts
Story first published: Monday, August 2, 2021, 10:21 [IST]
Other articles published on Aug 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X